ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣ ದಲ್ಲಿ ಇರುವ ಪ್ರವಾಸ ಮಂದಿರದಲ್ಲಿ ಹಮ್ಮಿಕೊಂಡ ಶಾಲಾ ಶಿಕ್ಷಣ,(ಪದವಿ ಪೂರ್ವ)ಇಲಾಖೆಯ ಅತಿಥಿ ಉಪನ್ಯಾಸಕರ ಪೂರ್ವಭಾವಿ ಸಭೆಯಲ್ಲಿ ಈಗಾಗಲೇ ಆಗಿರೋ ಸಮಸ್ಯೆಗಳಾಗಲಿ ಅದೇ ರೀತಿ ಸರ್ಕಾರ ಆದೇಶ ಹೊರಡಿಸಿದ ಬಜೆಟ್ ಮಂಡನ ಪ್ರಕಾರ ಸಂಬಳವನ್ನು ಆಗಿಲ್ಲ ಹೀಗಾಗಿ ಮುಂದಿನ ದಿನಮಾನಗಳಲ್ಲಿ ನಮಗೆ ಆಗುವ ಅನ್ಯಾಯಗಳನ್ನು ತಡೆಯಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಅತಿಥಿ ಉಪನ್ಯಾಸಕರ ಇಂಡಿ ತಾಲೂಕಿನಲ್ಲಿ ಸಂಘಟನೆಯನ್ನು ಮಾಡಲಾಯಿತು ಈ ಸಂಘಟನೆಯಲ್ಲಿ ಎಲ್ಲರ ಅಭಿಪ್ರಾಯದ ಮೇರೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಿಜಲಿಂಗಪ್ಪ ಕಾಳೆ ಅವರನ್ನು ಮಾಡಲಾಯಿತು ಉಪಾಧ್ಯಕ್ಷರಾಗಿ ರಾಜಕುಮಾರ್ ದ್ಯಾಮಗೊಂಡ ಅವರನ್ನು ಆಯ್ಕೆ ಮಾಡಲಾಯಿತು ಅದೇ ರೀತಿ ಕಾರ್ಯದರ್ಶಿಯಾಗಿ ಜಟ್ಟಿಂಗರಾಯ ಹೊಸೂರ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಸಹ ಕಾರ್ಯದರ್ಶಿಯಾಗಿ ಮಲ್ಲಣ್ಣ ಬಬಲಾದ ಖಜಾಂಚಿಯಾಗಿ ವಿಜಯ್ ಕುಮಾರ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.
ನಿರ್ದೇಶಕರು ಆಗಿ ಎಂ ಎಂ ಪಾಟೀಲ್,ಡಿ.ಎಸ್ ಸಾರವಾಡ,ಮಹಾವೀರ್ ಹೊಸಮನಿ, ಭಿಮಾಶಂಕರ್ ಸಪಳಿ,ಅರವಿಂದ್ ಕಾಂಬಳೆ ಈ ರೀತಿ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವರದಿ:ಅರವಿಂದ ಕಾಂಬಳೆ ಇಂಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.