ಭದ್ರಾವತಿ:ನಗರದ ಮಿಲಿಟರಿ ಕ್ಯಾಂಪ್ ಪೊಲೀಸ್ ವಸತಿ ಗೃಹದ ಮುಖ್ಯ ದ್ವಾರದ ದೊಡ್ಡ ಗೇಟ್ ಮುರಿದು ಪಕ್ಕದಲ್ಲೇ ಆಟವಾಡುತ್ತಿದ್ದ ಪೊಲೀಸ್ ಸಿಬ್ಬಂದಿಯವರ ಮಕ್ಕಳ ಮೇಲೆ ಬಿದ್ದಿದ್ದು ಮುಖ್ಯ ಪೇದೆಯೊಬ್ಬರ 8 ವರ್ಷದ ಮಗುವಿನ ತಲೆಗೆ ತೀವ್ರತರವಾದ ಪೆಟ್ಟುಬಿದ್ದಿರುವ ಆತಂಕಕಾರಿ ಘಟನೆ ಶನಿವಾರ ಸಂಜೆ ನಡೆದಿದೆ.
ಪೊಲೀಸ್ ಹೆಡ್ ಕಾನ್ಸ್ಟೇಬಲ್ ಎಂ ಸಿ ರೂಪೇಶ್ ರವರ 8 ವರ್ಷದ ಮಗನ ಮೇಲೆ ದೊಡ್ಡ ಗೇಟ್ ಬಿದ್ದಿದ್ದರಿಂದ ಬಾಲಕನ ತಲೆಗೆ ಭಲವಾದ ಪೆಟ್ಟು ಬಿದ್ದಿದ್ದು ಅತಿಯಾದ ರಕ್ತಸ್ರಾವ ಆಗುತ್ತಿದ್ದ ಮಗುವನ್ನು ತಕ್ಷಣ ಹತ್ತಿರದಲ್ಲೇ ಇದ್ದ 112 ವಾಹನದಲ್ಲಿ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೋಯ್ಯಲಾಯಿತು.ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಖ್ಯದ್ವಾರದ ಗೇಟ್ ಕಳಪೆ ಕಾಮಗಾರಿಯೇ ಈ ಅವಘಡಕ್ಕೆ ಕಾರಣ ಎಂದು ಪೊಲೀಸ್ ಸಿಬ್ಬಂದಿಯವರು ಬೇಸರ ವ್ಯಕ್ತಪಡಿಸಿದ್ದಾರೆ ಕಳಪೆ ಕೆಲಸ ಮಾಡಿದವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ತಮ್ಮ ಮಕ್ಕಳ ಬಗ್ಗೆ,ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಈ ಹಿಂದೆ ಇದೇ ಪೋಲಿಸ್ ವಸತಿ ಗೃಹ ನಿರ್ಮಾಣ ವಿಳಂಬವಾಗುತ್ತಿರುವ ಕಾಮಗಾರಿ ಕುರಿತು ಪೊಲೀಸರು ಅಸಮಾಧಾನ ಹೊರ ಹಾಕಿದ್ದರು. ವರದಿ:ಕೆ ಆರ್ ಶಂಕರ್ ಭದ್ರಾವತಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.