ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಸ್ಕಿ ಫೌಂಡೇಶನ್ ವತಿಯಿಂದ ಸನ್ಮಾನ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ದಿ ಭಾಗವಾನ್ ಮೈನಾರಿಟಿ ಕೋ-ಆಫ್ ಕ್ರೆಡಿಟ್ ಸೊಸೈಟಿಯ ನೂತನ ನಿರ್ದೇಶಕರ ಮಂಡಳಿಯವರಿಗೆ ಅಸ್ಕಿ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅಸ್ಕಿ ಫ಼ೌಂಡೇಶನ್ ಅಧ್ಯಕ್ಷರಾದ ಸಿ.ಬಿ.ಅಸ್ಕಿ ಅವರು ಸಹಕಾರಿ ಸಂಘಗಳು ನಿಂತ ನೀರಾಗದೇ ಹರಿಯುವ ನೀರಿನಂತಿರಬೇಕು ಅಂತಹ ವ್ಯವಸ್ಥೆಯನ್ನು ಅಭಿವೃದ್ಧಿಯ ದಾರಿಯತ್ತ ಕೊಂಡೊಯ್ಯುವಲ್ಲಿ ಆಡಳಿತ ಮಂಡಳಿಯ ಪಾತ್ರ ಮಹತ್ತರವಾಗಿತ್ತದೆ ದಿ ಭಾಗವಾನ್ ಕೋ-ಆಫ್ ಸೊಸೈಟಿಗೆ ನೂತನವಾಗಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ಶಮಶುಧ್ದೀನ ನಾಲಬಂದ,ಉಪಾಧ್ಯಕ್ಷ ಶ್ರೀಮಕ್ತುಮಸಾಬ ಬೀಳಗಿ ಒಳಗೊಂಡು ಎಲ್ಲಾ ನಿರ್ದೇಶಕರ ಮಂಡಳಿಯವರು ಪ್ರಾಮಾಣಿಕ ವ್ಯಕ್ತಿಗಳಾಗಿದ್ದಾರೆ ಇಂತಹ ವ್ಯಕ್ತಿಗಳಿಗೆ ಜವಾಬ್ದಾರಿ ವಹಿಸುವುದರೊಂದಿಗೆ ನಿರಂತರವಾಗಿ ಬ್ಯಾಂಕಿನಲ್ಲಿ ಕಾರ್ಯಚಟುವಟಿಕೆಗಳು ನಡೆಯುವಂತೆ ಪ್ರೋತ್ಸಾಹಿಸಿದ ಭಾಗವಾನ ಸಮಾಜ ಒಳ್ಳೆಯ ನಿರ್ಧಾರವನ್ನು ಕೈಗೊಂಡಿದೆ ಎಂದ ಅವರು ಮುಂಬರುವ ದಿನಗಳಲ್ಲಿ ಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ಸಮಾಜದಲ್ಲಿ ಎಸ್ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವಂತಹ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದ ಅವರು ಈಗಿನ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಶಿಕ್ಷಣವಿಲ್ಲದಿದ್ದರೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಶಿಕ್ಷಣದಿಂದ ಇಡೀ ಜಗತ್ತನ್ನೇ ಗೆಲ್ಲಬಹುದಾಗಿದೆ ಹೀಗಾಗಿ ಮಕ್ಕಳಿಗೆ ಶಿಕ್ಷಣ ಒದಗಿಸುವ ಕಡೆಗೆ ಲಕ್ಷ್ಯ ವಹಿಸಬೇಕೆಂದು ಕಿವಿಮಾತು ತಿಳಿಸಿದರು.
ಇನ್ನೋರ್ವ ದಿ ಭಾಗವಾನ ಮೈನಾರಿಟಿ ಕೊ-ಆಫ್ ಕ್ರೆಡಿಟ್ ಸೊಸೈಟಿಯ ನೂತನ ಅಧ್ಯಕ್ಷ ಶಮಶುದ್ದೀನ ನಾಲಬಂದ ಅವರು ಮಾತನಾಡಿ ಬಾಗವಾನ ಸಮಾಜದ ಬ್ಯಾಂಕಿನ ಎಲ್ಲಾ ನಿರ್ದೇಶಕರ ಮಂಡಳಿಯವರನ್ನು ಅವಿರೋಧವಾಗಿ ಆಯ್ಕೆ ಮಾಡುವುದರೊಂದಿಗೆ ನನಗೆ ಅಧ್ಯಕ್ಷ ಸ್ಥಾನವನ್ನು ವಹಿಸಿ ದೊಡ್ಡ ಜವಾಬ್ದಾರಿಯನ್ನು ನೀಡಿದೆ ಸಮಾಜವು ನೀಡಿದ ಜವಾಬ್ದಾರಿಯನ್ನು ಎಲ್ಲಾ ನಿರ್ದೇಶಕರ ಮಂಡಳಿಯ ಸಹಕಾರದೊಂದಿಗೆ ಬ್ಯಾಂಕನ್ನು ಅಭಿವೃದ್ಧಿಯ ದಾರಿಯತ್ತ ಕೊಂಡಯ್ಯುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ಎಚ್.ಎಂ.ನಾಯಕ್ ಹಾಗೂ ದಿ ಬಾಗವಾನ ಕೋ-ಆಪ್ ಬ್ಯಾಂಕಿನ ನಿರ್ದೇಶಕ ಮಂಡಳಿಯವರಾದ ಶ್ರೀ ನಬಿಸಾಬ ಜಾಲಬೆಂಚಿ,
ಅಬ್ದುಲಗನಿ ಬಾಗೇವಾಡಿ,ಲಾಡಜಿಸಾಬ ಚೌದ್ರಿ,ಅಮಿನಸಾಬ ಬೀಳಗಿ,ಬಡೇಸಾಬ ಚೌದ್ರಿ,ಬಾವಸಾಬ ಚೌದ್ರಿ,ಹುಶೇನಸಾಬ ನಾಲ್ತವಾಡ,ಶ್ರೀಮತಿ ಬಿಯಾಮಾ ಆನೇಸುರ,
ನೂರಜಾನ ಚೌದ್ರಿ,
ಹಾಗೂ ಬಾಗವಾನ ಸಮಾಜದ ಅಧ್ಯಕ್ಷ ಹುಶೇನಸಾಬ ಬೀಳಗಿ
ಮುಖಂಡರುಗಳಾದ ನೂರಅಹ್ಮದ ಬೀಳಗಿ,ರಾಜೇಸಾಬ ಬಾಗೇವಾಡಿ,ಬಾಬುಸಾಬ ಬಾಗೇವಾಡಿ,ಅಮಿನಸಾಬ ಬೀಳಗಿ
ಅಕ್ಕಿ ಫೌಂಡೇಶನ್ ನಿರ್ದೇಶಕರಾದ ವೀರೇಶಗೌಡ ಅಸ್ಕಿ,ದ್ಯಾಮಣ್ಣ ಸೋಮನಾಳ,ಮಹೇಶ ತಳವಾರ
ಆಶೀಪ್ ಕೆಂಭಾವಿ,ರಾಮನಗೌಡ ಹೊಸಮನಿ,ಗೋಪಾಲ ಕಟ್ಟಿಮನಿ
ಮೊದಲಾದವರು ಇದ್ದರು
ಸಂಘದ ಕಾರ್ಯದರ್ಶಿ ಅಶೋಕ್ ಕುಲಕರ್ಣಿ, ಎಲ್ಲರೂ ಸನ್ಮಾನಿಸಿದವರಾಗಿದ್ದರು.
ವರದಿ-ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ