ಬೀದರ್:ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಡೆಸುವ 23 ವರ್ಷದೊಳಗಿನ ಟಿ-20 ಕ್ರಿಕೆಟ್ನ ಕರ್ನಾಟಕ ತಂಡಕ್ಕೆ ಜಿಲ್ಲೆಯ ಇಬ್ಬರು ಬಾಲಕಿಯರು ಆಯ್ಕೆಯಾಗಿದ್ದಾರೆ.ಬೀದರ್ ನಗರದ ಸಾಕ್ಷಿ ಡೈಜೋಡೆ ಹಾಗೂ ಭಾಲ್ಕಿ ಪಟ್ಟಣದ ಆದಿತಿ ಬಕ್ಕಾ ಅವರು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಆದಿತಿ ಬಕ್ಕಾ ಆಲ್ ರೌಂಡರ್ ಹಾಗೂ ಸಾಕ್ಷಿ ವಿಕೆಟ್ ಕಿಪರ್ ಮತ್ತು ಬ್ಯಾಟ್ಸಮನ್ ಆಗಿದ್ದಾರೆ. 2023-24ನೇ ಸಾಲಿನ ಆಯ್ಕೆ ಇದಾಗಿದೆ. ಛತ್ತೀಸ್ಗಡ್ನ ರೈಪುರನಲ್ಲಿ ಡಿ.10ರಿಂದ 19 ರವರೆಗೆ ಟಿ-20 ಪಂದ್ಯಗಳು ನಡೆಯಲಿವೆ.
ಗಡಿ ಜಿಲ್ಲೆ ಬೀದರ್ನ ಇಬ್ಬರು ಬಾಲಕಿಯರು ಇದೇ ಮೊದಲ ಬಾರಿಗೆ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದು ಹೆಮ್ಮೆ ತರಿಸಿದಿದೆ ಎಂದು ಕೆಎಸ್ಸಿಎ ರಾಯಚೂರು ವಲಯದ ಬೀದರ್ ಜಿಲ್ಲಾ ಸಂಚಾಲಕ ಕುಶಾಲ ಪಾಟೀಲ್ ಗಾದಗಿ,ಗಜಾನನ ಕ್ರಿಕೆಟ್ ಕ್ಲಬ್ನ ಸಂಜಯ ಜಾಧವ್,ಯುವರಾಜ ಉನ್ನೆ ವಿಕ್ಕ ಅಥವಾಲ್,ಅನಿಲಕುಮಾರ ದೇಶಮುಖ್ ಹಾಗೂ ಡೈಜೋಡೆ ಕುಟುಂಬದವರಾದ ತಂದೆ ಕ್ರೀಷ್ಣ ಡೈಜೋಡೆ ತಾಯಿ ಸರಿತಾ ಡೈಜೋಡೆ,ಹಿರಿಯರಾದ ಚಂಪಾಬಾಯಿ ಡೈಜೋಡೆ ಶಶಿನಾರಾಯಣ ಡೈಜೋಡೆ,ಚಂದ್ರಕಲಾ ಡೈಜೋಡೆ, ಭದ್ರಿನಾರಾಯಣ ಡೈಜೋಡೆ,ವೈಶಾಲಿ ಡೈಜೋಡೆ, ಸಂಜುಕುಮಾರ ಡೈಜೋಡೆ,ಸಹೊದರರಾದ ಅಮರ ಡೈಜೋಡೆ,ಸಾಗರ ಡೈಜೋಡೆ,ವಿಘ್ನೇಶ ಡೈಜೋಡೆ,ಸಹೋದರಿಯರಾದ ಪೂಜಾ,ಪ್ರಿಯ, ಈಷಾ ಹಾಗೂ ಕುಟುಂಬದ ಸದಸ್ಯರೆಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ:ಸಾಗರ ಪಡಸಲೆ