ಕೊಟ್ಟೂರು:ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಸಂಘದಿಂದ ಮೂರು ತಿಂಗಳ ಉಚಿತ ಮಾಹಿತಿ ತರಬೇತಿ ಟೈಲರಿಂಗ್ ಶಿಬಿರ ಕಾರ್ಯಗಾರದ ಸದುಪಯೋಗ ಪಡಿದುಕೊಂಡು ಉತ್ತಮ ಜೀವನ ನಡೆಸಲು ಸಹಾಕರಿಯಾಗಿದೆ ಎಂದು ನವೀನ್ ಕುಮಾರ್ ಎಚ್ ಯೋಜನಾ ಅಧಿಕಾರಿಗಳು ಹೇಳಿದರು ತಾಲೂಕಿನ ಕೊಟ್ಟೂರು ವಲಯದ ಕಂದಗಲ್ಲು ಕಾರ್ಯಕ್ಷೇತ್ರದ ವರಸಿದ್ದಿವಿನಾಯಕ ಜ್ಞಾನ ವಿಕಾಸ ಕೇಂದ್ರದಲ್ಲಿ ಬುಧವಾರ ಟೈಲರಿಂಗ ತರಬೇತಿ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಕೇಂದ್ರದ ಹಿರಿಯರಾದ ಅನುಸೂಯಮ್ಮ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯೆ ಗೀತಾ,ಗ್ರಾ ಪಂ ಮಾಜಿ ಅಧ್ಯಕ್ಷರಾದ ಶಿವ ಕುಮಾರ ಗೌಡ್ರು,ಒಕ್ಕೂಟದ ಅಧ್ಯಕ್ಷ ಗಂಗಾ ನಾಯ್ಕ್ ,ಜ್ಞಾನ ವಿಕಾಸ ಸಮನ್ವಯಧಿಕಾರಿ ಸಾವಿತ್ರಿ ಎನ್ ಜೆ ವಲಯದ ಮೇಲ್ವಿಚಾರಕರಾದ ರುದ್ರೇಶ್ ಸೇವಾಪ್ರತಿನಿಧಿ ಗಂಗಮ್ಮ ಸಿ ಎಸ್ ಸಿ, ಸೇವಾದಾರರಾದ ಸವಿತಾ ಹಾಗೂ ಕೇಂದ್ರದ ಸರ್ವ ಸದಸ್ಯರ ಸಮ್ಮುಖದಲ್ಲಿ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.