ಯಾದಗಿರಿ:ಶೋಷಿತರ,ದೀನ ದಲಿತರ,ಅಸ್ಪೃಶ್ಯರ, ಏಳಿಗೆಗಾಗಿ ಶ್ರಮಿಸಿ ಶಿಕ್ಷಣ,ಸಂಘಟನೆಯ ಜೊತೆಗೆ ಹೋರಾಟದ ಪರಿಕಲ್ಪನೆಯನ್ನು ನಮ್ಮೆಲ್ಲರಿಗೂ ತೋರಿಸಿಕೊಟ್ಟ ಮಹಾನ್ ಮೇಧಾವಿ ಭಾರತ ರತ್ನ ಡಾ:ಬಿ.ಆರ್.ಅಂಬೇಡ್ಕರರು ಎಂದು ಹಿರಿಯ ಹಾಗೂ ಬಂಡಾಯ ಸಾಹಿತಿ ವಿಶ್ವನಾಥರೆಡ್ಡಿ ಗೊಂದಡಗಿ ಹೇಳಿದರು.
ನಗರದ ಕೊಲ್ಲೂರು ಮಲ್ಲಪ್ಪ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಭಾರತ ರತ್ನ ಡಾ:ಬಿ.ಆರ್. ಅಂಬೇಡ್ಕರ್ ಅವರ ಓದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು ದೇವರನ್ನು ಗೌರವಿಸುವ ಬದಲು ಸಂವಿಧಾನವನ್ನು ಗೌರವಿಸಿದರೆ ಈ ದೇಶ ಮತ್ತಷ್ಟು ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂವಿಧಾನ ಓದದವನು ಸಂವಿಧಾನ ತಿಳಿದುಕೊಳ್ಳಲಾರ,ಆದ್ದರಿಂದ ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಸಂವಿಧಾನ ಓದಿಕೊಂಡು,ಅರ್ಥೈಸಿಕೊಂಡು,ಅಂಬೇಡ್ಕರ್ ಅವರ ಆದರ್ಶ,ತತ್ವ,ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಪ್ರಗತಿ ಪರ ಚಿಂತಕರಾದ ಗುಂಡಪ್ಪ ಕಲಬುರ್ಗಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಮಾರಂಭದ ವೇದಿಕೆಯ ಮೇಲೆ ದಲಿತ ಮುಖಂಡರಾದ ಮಲ್ಲಿಕಾರ್ಜುನ್ ಅನಸೂಗೂರು, ಯುವ ಸಾಹಿತಿ ಚಂದ್ರು.ಆರ್.ಪಾಟೀಲ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ ಹಾಗೂ ಉಪನ್ಯಾಸಕ ಸಿಬ್ಬಂದಿಗಳಾದ ಪವಿತ್ರ,ಸ್ವಾತಿ,ಅಂಬರೀಶ್, ಉಪಸ್ಥಿತರಿದ್ದರು ಭೀಮಣ್ಣ ಅನುಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ರವರ ಬದುಕು, ಬರಹ,ಹೋರಾಟ,ಶಿಕ್ಷಣ,ಸಂಘಟನೆ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಾದ ರೇಣುಕಾ ಭೀಮರಾಯ ಪ್ರಥಮ ಸ್ಥಾನ,ದೇವಿಂದ್ರಮ್ಮ ಸಾಬಣ್ಣ ದ್ವಿತೀಯ ಸ್ಥಾನ, ಮಮತಾ ಮರಿಯಪ್ಪ ತೃತೀಯ ಸ್ಥಾನ ಪಡೆದರೆ. ಅನಿಲ್ ಭೀಮರಾಯ ಮತ್ತು ಸಮಾಧಾನಕರ ಬಹುಮಾನ ಪಡೆದುಕೊಂಡರು ಕಾರ್ಯಕ್ರಮದ ಪ್ರಾರಂಭದಲ್ಲಿ ಕು.ಭಾಗ್ಯಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು,ಉಪನ್ಯಾಸಕರಾದ ನಿಂಗಪ್ಪ ನಿರೂಪಿಸಿ ವಂದಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್