ಕೊಟ್ಟೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನರವರ ನೇತ್ರತ್ವದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾ.ನಿ.ಪ ಧ್ವನಿ ವತಿಯಿಂದ ದಿನಾಂಕ 23-12-2023 ರಂದು ನೆಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಸಾನಿದ್ಯ ವಹಿಸಲಿರುವ ಕೊಟ್ಟೂರು ತಾಲೂಕಿನ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ್ವರ ಶ್ರೀ ಅಭಿನವ ಸಿಧ್ದಲಿಂಗ ರಾಜದೇಶಿಕೇಂದ್ರ ಶಿವಚಾರ್ಯ ಭಗವತ್ಪಾದಕರು ಸ್ವಾಮಿಜೀಗಳಿಗೆ ಕಾ.ನಿ.ಪ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರು ಬಂಗ್ಲೆ ಮಲ್ಲಿಕಾರ್ಜನ ರವರು ಅಹ್ವಾನ ಪತ್ರ ನೀಡಿ ಕೊಟ್ಟೂರು ಪಟ್ಟಣದ ಆರಾಧ್ಯ ದೇವರಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದು ಸ್ವಾಮಿಯ ಕಾರ್ತಿಕ ಪಲ್ಲಕ್ಕಿ ಉತ್ಸವದಲ್ಲಿ ಬಂಗ್ಲೆ ಮಲ್ಲಕಾರ್ಜುನ ಅವರ ಶ್ರೀಮತಿ ಹಾಗೂ ಜಗಳೂರಿನ ಹಿರಿಯ ಪತ್ರಕರ್ತರಾದ ಲಕ್ಷ್ಮಣರಾವ್ ಪಾಲ್ಗೊಂಡಿದ್ದರು.
