ಹನೂರು:ಬೆಳಗಾವಿ ಅಧಿವೇಶನದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಧ್ವನಿಯೆತ್ತಿದ ಶಾಸಕ ಎಂ.ಆರ್.ಮಂಜುನಾಥ್ ಅವರು ಅರಣ್ಯಹಕ್ಕು ಕಾಯ್ದೆ 2006 ರನ್ವಯ ಬಿ ರಾಜಯ್ಯನವರ ಕಾಲದಲ್ಲಿ ನಮ್ಮ ಕ್ಷೇತ್ರದಲ್ಲಿ ಸುಮಾರು 1437 ಕುಟುಂಬಗಳಿಗೆ ಅರಣ್ಯ ಕಾಯ್ದಡಿ ಒಂದರಿಂದ ಎಂಟು ಎಕರೆ ಅರಣ್ಯ ಭೂಮಿಗೆ ಹಕ್ಕು ಪತ್ರ ಪಡೆದಿರುವ ಪರಿಶಿಷ್ಟ ಪಂಗಡದ ಬುಡಕಟ್ಟು ಸೋಲಿಗ ಸಮುದಾಯದ ರೈತರು ಮತ್ತು ಇತರೆ ಸಮುದಾಯದ ರೈತರು ಸರ್ವೇ ನಂಬರ್ ಇರದ ಕಾರಣ ರಾಜ್ಯದ ಇತರೆ ರೈತರು ಪಡೆಯುತ್ತಿರುವ ವಿವಿಧ ಇಲಾಖೆಗಳ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೆ ತರಲಾಯಿತು.
ಅರಣ್ಯ ಕಾಯ್ದಡಿ ರೈತರಿಗೆ ನೀಡಲಾಗಿರುವ ಜಮೀನಿಗೆ ಬ್ಲಾಕ್ ನಂಬರ್ ನೀಡಲಾಗಿದೆ,ಆ ರೈತರು ಯಾವುದೇ ರೀತಿಯ ಸರ್ಕಾರ ಸೌಲಭ್ಯ ಪಡೆಯಲು ಆಗುತ್ತಿಲ್ಲ,ಆ ರೈತರ ಜಮೀನಿಗೆ ಯಾವುದೇ ರೀತಿಯ ಸರ್ವೇ ನಂಬರ್ ಇರುವುದಿಲ್ಲ ಆದರಿಂದ ಕಂದಾಯ ಸಚಿವರು ನಮ್ಮ ಕ್ಷೇತ್ರದ ರೈತರ ಕಡೆಗೆ ಗಮನ ನೀಡಬೇಕಾಗಿ ಕೋರಿದರು.
ಕಂದಾಯ ಸಚಿವ ಸಿ.ಕೃಷ್ಣ ಬೈರೇಗೌಡ ಅವರು ಅರಣ್ಯದಿಂದ ಬಿಡುಗಡೆಗೊಳಿಸಿದ ಪ್ರದೇಶದ ಗಡಿಯನ್ನು ಗುರುತಿಸಿ,ಆ ಗಡಿಯಿಂದ ಹೊರಗಡೆ ಇರುವಂತ ರೈತರಿಗೆ ಶಾಶ್ವತ ಪರಿಹಾರ ಕೊಡಲಾಗುವುದು,ಯಾವ ಜಮೀನು ಅರಣ್ಯದೊಳಗಿದೆ ಅಂತಹ ಜಮೀನುಗಳಿಗೆ ಪರಿಹಾರ ನೀಡುವುದು ಕಷ್ಟವಾಗುತ್ತದೆ, ಇವುಗಳನ್ನು ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಮಾಡಲಾಗುತ್ತದೆ ಎಂದರು.
ವರದಿ:ಉಸ್ಮಾನ್ ಖಾನ್