ಭದ್ರಾವತಿ:ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಎಂ.ಪಿ.ಎಂ.ನ ಪುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ 2023-24 ನೇ ಸಾಲಿನ ಪೂರ್ವವಲಯ ಮಟ್ಟದ ಗೃಹರಕ್ಷಕರ ವೃತ್ತಿಪರ ಮತ್ತು ಕ್ರೀಡಾಕೂಟದಲ್ಲಿ ಮಹಿಳಾ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಮಹಿಳಾ ಸದಸ್ಯರು 4*100ರಿಲೆ,ಹಗ್ಗ ಜಗ್ಗಾಟ,ಪ್ರಥಮ ಚಿಕಿತ್ಸೆ, ರೈಪಲ್ ಸಹಿತ ಸ್ಕ್ವಾಡ್ ಡ್ರಿಲ್ ಗಳಲ್ಲಿ ಪ್ರಥಮ ಸ್ಥಾನದೊಂದಿಗೆ ಈ ಬಾರಿಯ ಮಹಿಳಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಪಡೆದು ಕೊಂಡರು.
ಪುರುಷರ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲಾ ಗೃಹರಕ್ಷಕರ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.
ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿದರು.
ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಗೌರವ ಸಮಾದೇಷ್ಟರು ಚಂದನ್.ಎಂ.ಪಟೇಲ್,ಸ್ಟಾಪ್ ಆಫೀಸರ್ ಹರೀಶ್, ಎಸ್.ಪಾಟೀಲ್,ಉಪ ಸಮಾದೇಷ್ಟರು ಹಾಲಪ್ಪ.ಷ.ಡಾವಣಗೇರಿ ಹಾಗೂ ಚಿತ್ರದುರ್ಗ, ಹಾವೇರಿ,ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಗೌರವ ಸಮಾದೇಶ್ಟರು ಉಪಸ್ಥಿತರಿದ್ದರು.
ಕಾಗದನಗರದ ಎಂ.ಪಿ.ಎಂ ಪುಟ್ ಬಾಲ್ ಮೈದಾನದಲ್ಲಿ ಡಿ.20 ರಿಂದ 22ರ ವರೆಗೆ ನಡೆದ ಕ್ರೀಡಾಕೂಟದಲ್ಲಿ ವಲಯ ವ್ಯಾಪ್ತಿಯ ಹಾವೇರಿ, ಚಿತ್ರದುರ್ಗ,ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಬೋಧಕರು,ಘಟಕಾಧಿಕಾರಿಗಳು ಹಾಗೂ
ಮಹಿಳಾ ಮತ್ತು ಪುರುಷ ಗೃಹರಕ್ಷಕರು ಪಾಲ್ಗೊಂಡಿದ್ದರು.
ಕ್ರೀಡಾಕೂಟಕ್ಕೆ ಅಂತರರಾಷ್ಟ್ರೀಯ ಕ್ರೀಡಾಪಟು ಕು.ಸಿಂಧುಶ್ರೀ ಚಾಲನೆ:
ಅಂತರರಾಷ್ಟ್ರೀಯ ಕ್ರೀಡಾಪಟು ಕು.ಸಿಂಧುಶ್ರೀ ಬುಧವಾರ ಕ್ರೀಡಾಕೂಟದ ಘೋಷಣಾ ವಾಕ್ಯವನ್ನು ಘೋಷಿಸಿ,ಬಲೂನು ಹಾರಿಸುವ ಮೂಲಕ ಮೂರು ದಿನಗಳ ಕ್ರೀಡಾಕೂಟಕ್ಕೇ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಗೌರವ ಸಮಾದೇಷ್ಟರು ಚಂದನ್.ಎಂ.ಪಟೇಲ್,ಉಪ ಸಮಾದೇಷ್ಟರು ಹಾಲಪ್ಪ.ಷ.ಡಾವಣಗೇರಿ,ಮಾಜಿ ಸ್ಟಾಫ್ ಆಫೀಸರ್ ಡಾ.ಎಂ ರವೀಂದ್ರನಾಥ್ ಕೋಟಿ ಉಪಸ್ಥಿತರಿದ್ದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ