ಭದ್ರಾವತಿ:ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದ ಆಟೊ ಚಾಲಕನಿಗೆ ಭದ್ರಾವತಿ ನ್ಯಾಯಾಲಯ ಭಾರೀ ದಂಢ ವಿಧಿಸಿದೆ.
ನಗರದ ಚನ್ನಗಿರಿ ರಸ್ತೆಯಲ್ಲಿ ಡಿ.25ರಂದು ಸಂಚಾರಿ ಠಾಣೆ ಪೊಲೀಸರು ವಾಹನ ತಪಾಸಣೆ ಸಂದರ್ಭದಲ್ಲಿ ಪರವಾನಗಿ ಇಲ್ಲದೆ ಆಟೋ ಚಲಾಯಿಸುತ್ತಿರುವುದು ಕಂಡು ಬಂದಾಗ ಸಂಚಾರಿ ಠಾಣೆ ಪಿ ಎಸ್ ಐ ಶಾಂತಲಾ ರವರು ಭಾರತೀಯ ಮೋಟಾರ್ ಕಾಯ್ದೆ192(ಎ) ಅನ್ವಯ ಪ್ರಕರಣ ದಾಖಲಿಸಿ ಭದ್ರಾವತಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಭದ್ರಾವತಿ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಡಿ.26ರಂದು ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶರು ತಪ್ಪಿತಸ್ಥ ಆಟೋ ಚಾಲಕನಿಗೆ 10,500 ರೂ. ಭಾರೀ ದಂಡ ವಿಧಿಸಿದ್ದಾರೆ.
ವರದಿ:ಕೆ ಆರ್ ಶಂಕರ್,ಭದ್ರಾವತಿ