ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾವಯವ ಕೃಷಿಗೆ ಆದ್ಯತೆ ನೀಡಬೇಕು:ಸತೀಶ ನೆನ್ನೂರೆ

ಬೀದರ್/ಚಿಟಗುಪ್ಪಾ:ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಾವಯವ ಕೃಷಿ ಪರಿವಾರದ ರಾಜ್ಯ ನಿರ್ದೇಶಕ ಸತೀಶ್ ನನ್ನೊರೆ ಹೇಳಿದರು.
ತಾಲೂಕಿನ ಬನ್ನಳ್ಳಿ ಗ್ರಾಮದ ಹಣಮಂತರಾವ ಪಾಟೀಲ ರವರ ಹೊಲದಲ್ಲಿ ಶ್ರೀ ವೀರಭದ್ರೇಶ್ವರ ಸಾವಯವ ಕೃಷಿ ಪರಿವಾರದ ವತಿಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾವಯವ ಕೃಷಿಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅಗ್ಗದ ಕೃಷಿ ತಂತ್ರಜ್ಞಾನವಾಗಿದೆ.ಸಾಂಪ್ರದಾಯಿಕ ತಂತ್ರಜ್ಞಾನಕ್ಕಿಂತ ಭಿನ್ನವಾಗಿ,ಇದಕ್ಕೆ HYV ಬೀಜಗಳು,ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳು ಮುಂತಾದ ದುಬಾರಿ ಒಳಹರಿವಿನ ಅಗತ್ಯವಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಸಾವಯವ ಕೃಷಿಕರಾದ ಗುರುಲಿಂಗಪ್ಪ ಮೆಲದೊಡ್ಡಿ ಮಾತನಾಡಿ ರಾಸಾಯನಿಕ ಕೃಷಿಗೆ ಹೋಲಿಸಿದರೆ ಸಾವಯವ ಕೃಷಿಯು ಆರೋಗ್ಯಕರ ಮತ್ತು ರುಚಿಯಾದ ಆಹಾರವನ್ನು ನೀಡುತ್ತದೆ.ಸಂಯುಕ್ತ ಕೃಷಿಯ ಆಹಾರಕ್ಕಿಂತ ನೈಸರ್ಗಿಕವಾಗಿ ಅಭಿವೃದ್ಧಿಪಡಿಸಿದ ಆಹಾರವು ಹೆಚ್ಚು ಪೌಷ್ಟಿಕವಾಗಿದೆ ಎಂದು ಹೇಳಿದರು.
ಸಾವಯವ ಕೃಷಿ ಪರಿವಾರದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿ ಮಾತನಾಡಿ
ಸಾವಯವ ಕೃಷಿಯು ಸುಸ್ಥಿರ ಕೃಷಿ ವ್ಯವಸ್ಥೆಯಾಗಿದ್ದು.
ಇದು ಭೂಮಿಯ ದೀರ್ಘಕಾಲಿಕ ಫಲವತ್ತತೆಯನ್ನು ಕಾಪಾಡುತ್ತದೆ.ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ಉತ್ಪಾದಿಸಲು ಸೀಮಿತ ಭೂ ಸಂಪನ್ಮೂಲಗಳನ್ನು ಬಳಸುತ್ತದೆ.ಜೈವಿಕ ತಂತ್ರಜ್ಞಾನದ ಅಭಿವೃದ್ಧಿ,ಬಹು ವಿಜ್ಞಾನಗಳ ಜ್ಞಾನ,ಬೆಳೆ ತಳಿ, ಪಶುಸಂಗೋಪನೆ ಮತ್ತು ಪರಿಸರ ವಿಜ್ಞಾನ ಇತ್ಯಾದಿಗಳ ಸಂಯೋಜಿತ ಫಲಿತಾಂಶವೇ ಈ ಸಾವಯವ ಕೃಷಿಯಾಗಿದೆ ಈ ನಿಟ್ಟಿನಲ್ಲಿ ಸಾವಯವ ಕೃಷಿ ಪರಿವಾರವು ರೈತರ ಅಭ್ಯುದಯಕ್ಕಾಗಿ ಹಗಲಿರುಳು ದುಡಿಯುತ್ತಿದೆ ಎಂದರು.
ಜಿಲ್ಲಾ ಸಾವಯವ ಕೃಷಿ ಪರಿವಾರದ ನಿರ್ದೇಶಕ ಸಿದ್ದಣ್ಣ ಬೂಶೆಟ್ಟಿ ಮಾತನಾಡಿ ಸಾವಯವ ಕೃಷಿಯು ಮರಗಳು ಮತ್ತು ಕಾಡು ಪ್ರಾಣಿಗಳ ವೈವಿಧ್ಯತೆಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ,ತಾಲೂಕು ಕೃಷಿ ಪರಿವಾರದ ಅಧ್ಯಕ್ಷ ಹಣಮಂತರಾವ ಪಾಟೀಲ ಮಾತನಾಡಿ ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಪ್ರಕಾಶ್ ಕೋರಿ ಬೆಳಕೇರಾ,ಗೋಪಾಲರಡ್ಡಿ ಕೊಡಂಬಲ,ಮಲ್ಲಿಕಾರ್ಜುನ ಭೂರನಾಪುರ ಕೊಡಂಬಲ,ಶಿವಕುಮಾರ ಹಲಬರ್ಗಾ ನೀರ್ಣಾವಾಡಿ, ರಾಮರೆಡ್ಡಿ ಚೌಲಾ ಬನ್ನಳ್ಳಿ ರೈತರಿಗೆ ಗೌರವ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿವಕುಮಾರ ಹುಣಚಗೇರಾ, ರಾಮರಾವ್ ಕುಲಕರ್ಣಿ,ಕಾಶಿನಾಥ ಚಿಕ್ಕಪಾಟೀಲ,
ರವಿ ನಿಂಗಣ್ಣಿ,ಅಜೀತ ಪಾಟೀಲ,ಕಾಶಿನಾಥ ಸಲಗರ, ಮಂಜುನಾಥ,ಬಸವರಾಜ ಬಿದಿ ಸೇರಿದಂತೆ ಸಾವಯವ ಪರಿವಾರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ