ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಒಬ್ಬ ನಾಯಕ ಎಷ್ಟು ಕಾಲ ಇರುತ್ತಾರೆ ಎಂಬುದು ಮುಖ್ಯವಾಗಿರುವುದಿಲ್ಲ ಎಷ್ಟು ಪ್ರಭಾವ ಬೀರುತ್ತಾರೆ ಎಂಬುದು ಮುಖ್ಯ-ಹೆಚ್.ಕೆ ಪಾಟೀಲ್

ಸೊರಬ:ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ನವರ 12 ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಬಂಗಾರದಾಮದಲ್ಲಿ ಬಂಗಾರಪ್ಪ ವಿಚಾರ ವೇದಿಕೆ,ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ಬಂಗಾರಪ್ಪ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ‘ಬಂಗಾರಪ್ಪ ಸವಿನೆನಪು’ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಗಾರಪ್ಪನವರ ಆದರ್ಶವಾದ ಚಿಂತನೆಗಳು ಎಂದಿಗೂ ಜೀವಂತವಾಗಿರುತ್ತವೆ ಅವರ ಒಡನಾಟ, ಮಾರ್ಗದರ್ಶನ ನಮಗೆ ಆದರ್ಶಪ್ರಾಯ ವಾದುದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಇಂದು ನೆಡೆಯುತ್ತಿದ್ದೆವೆ.ತಂದೆ ತಾಯಿಯರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿ ಸ್ಮಾರಕವನ್ನು ನಿರ್ಮಿಸಿರುವ ಮಧು ಬಂಗಾರಪ್ಪನವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಸಂಸದೀಯ ವ್ಯವಹಾರ ಹಾಗೂ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ ಒಬ್ಬ ನಾಯಕ ಎಷ್ಟು ಕಾಲ ಇರುತ್ತಾರೆ ಎಂಬುದು ಮುಖ್ಯ ವಾಗಿರುವುದಿಲ್ಲ ಪ್ರಭಾವ ಬೀರುತ್ತಾರೆ ಎಂಬುದು ಮುಖ್ಯ ವಾಗುತ್ತದೆ ಅವರು ‌ಸಮಾಜವಾದಿ ಹೋರಾಟ ಗಳಲ್ಲಿ ರೈತರಿಗೆ ನ್ಯಾಯ ದೊರಕಿಸಿಕೊಡಲು ದುಡಿದು ನಾಯಕರೆಂದೆ ಗುರುತಿಸಿಕೊಂಡು ರಾಜಕೀಯವಾಗಿ ಎತ್ತರಕ್ಕೆ ಬೆಳೆದವರು ಎಂದ ಅವರು ಬಂಗಾರಪ್ಪನವರು ನಮ್ಮ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಬಂಗಾರಪ್ಪನವರು ವರ್ಣಮಯ ವ್ಯಕ್ತಿತ್ವ,ಬಡವರ ಬಗ್ಗೆ ಕಾಳಜಿ,
ಹೊಂದಿದವರಾಗಿದ್ದರು ಬಂಗಾರಪ್ಪನವರ ಈ ಬಂಗಾರಧಾಮ ಅಧ್ಯಯನ ಪೀಠವಾಗಬೇಕು ಎಂದರು ಬಂಗಾರಪ್ಪನವರು ಜನನಾಯಕರಾಗಿ ಮೆರೆದಿದ್ದರು ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ ಬಂಗಾರಪ್ಪ ಸಕ್ರಿಯ ರಾಜಕಾರಣ ಮಾಡಿದವರು ಅವರು ಬಿಜೆಪಿ ಪಕ್ಷಕ್ಕೆ ಬಂದಾಗ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರಕಿತ್ತು ಅವರು ಯಾವಾಗಲೂ ಜನರ ಮದ್ಯೆ ಇರುವ ನಾಯಕರಾಗಿದ್ದರು ಜನರ ಭಾವನೆಗಳಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು ಕೆಳವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುಣ ಹೊಂದಿದ್ದರು ಸ್ವಾಭಿಮಾನಕ್ಕೆ ಧಕ್ಕೆಯಾದಾಗ ತಮ್ಮ ರಾಜಕೀಯ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದರು ದಲಿತರ ಹಿಂದುಳಿದವರ ಪರವಾದ ಆಡಳಿತವನ್ನು ನೀಡಿ.ಬಡ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಶಾಲಾ ಮಕ್ಕಳಿಗೆ ದಿನಕ್ಕೆ ಒಂದು ರೂಪಾಯಿ ನೀಡುವ ಯೋಜನೆ ಜಾರಿಗೆ ತಂದಿದ್ದರು, ಕಾವೇರಿ ವಿಷಯದಲ್ಲಿ ಎದೆಗಾರಿಕೆ ನಿರ್ಣಯ ಕೈಗೊಂಡ ಧೀಮಂತ ನಾಯಕರಾಗಿದ್ದರು ತಂದೆ ಹಾದಿಯಲ್ಲಿ ನೆಡೆಯುತ್ತಿರುವ ಮಧು ಬಂಗಾರಪ್ಪ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಬಂಗಾರಪ್ಪ ನವರ ಚಿಂತನೆ ವಿಚಾರಗಳು ನಾಡಿನ ಜನತೆಗೆ ತಲುಪಬೇಕು ಈ ಸ್ಮಾರಕವನ್ನು ನಿರ್ಮಿಸಲು ಹೆಚ್ಚು ಅವಧಿಯನ್ನು ತೆಗೆದುಕೊಂಡಿದ್ದಕ್ಕೆ ಕ್ಷಮೆಯನ್ನು ಕೇಳುತ್ತೇನೆ ಈ ಧಾಮವು ಸ್ಪೂರ್ತಿಯ ನೆಲೆಯಾಗಬೇಕು ಎಂದ ಅವರು ಬಂಗಾರಪ್ಪ ನವರ ಜನತೆಯ ನಡುವೆ ಇರುವ ನಾಯಕರಾಗಿದ್ದರು. ಅವರ ಹೆಸರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಕಾರ್ಯವನ್ನು ಮಾಡುತ್ತೆನೆ ಬಂಗಾರಪ್ಪನವರ ಚಿಂತನೆ ಒಂದು ಅಧ್ಯಯನ ಪೀಠವಾಗಬೇಕು ಎಂದರು.

ಈ ಸಂದರ್ಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್,ಮಾಜಿ ಶಾಸಕ ಆರ್ ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್,ಕಲಗೋಡು ರತ್ನಾಕರ,ರಮೇಶ್,ವೆಂಕಟೇಶ್,ವೇಣುಗೋಪಾಲ್ , ಅಣ್ಣಪ್ಪ ಡಿ.ಬಿ,ಯಲ್ಲಪ್ಪ,ಸದಾನಂದಗೌಡ,ಗಣಪತಿ ಹೆಚ್, ಶೇಖರ್.ಎಂ.ಡಿ.ಕೆ.ವಿ.ಗೌಡ,ಕೆ.ಪಿ.ರುದ್ರಗೌಡ,ಆರ್.ಸಿ.ಪಾಟೀಲ್ ಸೇರಿದಂತೆ ಮೊದಲಾದವರಿದ್ದರು.

ವರದಿ-ಸಂದೀಪ ಯು.ಎಲ್,ಸೊರಬ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ