ಕಲಬುರಗಿ:ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 25-12-2023 ರಂದು ಲೇಖಕ ಶ್ರೀ ಸಿದ್ಧರಾಮ ಸಿ ಸರಸಂಬಿಯರು ರಚಿಸಿದ ಕಿರು ನಾಟಕ ಮತ್ತು ಕಥಾ ಸಂಕಲನ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಕಲಬುರಗಿ ಸಹಯೋಗದಲ್ಲಿ ಶಾಂತಿಪ್ರಿಯ ಪ್ರಕಾಶನ ಪ್ರಕಟಿಸಿದ “ನಸುಕು ಹರಿದು ಬೆಳಕಾಯಿತು” ನಾಟಕಗಳ ಸಂಕಲನ “ಬಿತ್ತಿ ಹೋದ ಭಾವನೆಗಳು”ಕಥಾ ಸಂಕಲನ
ಲೋಕಾರ್ಪಣೆ ಸಮಾರಂಭ ಏರ್ಪಡಿಸಲಾಯಿತು.
ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಷ ಬ್ರ ವೀರಮಹಾಂತ ಶಿವಾಚಾರ್ಯರು ಶ್ರೀ ಧರ್ಮಕ್ಷೇತ್ರ ಮಹಾಂತಪೂರ ಚಿನ್ಮಯಗಿರಿ ಚೌವಡಾಪೂರ ರವರು ನಾಟಕಗಳ ಸಂಕಲನ ಮತ್ತು ಕಥಾ ಸಂಕಲನದ ಬಗ್ಗೆ ಮಾತನಾಡಿ ಲೇಖಕರಿಗೆ ಹರಿಸಿ ಆಶೀರ್ವದಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ ಸನ್ಮಾನ್ಯ ಶ್ರೀ ಎಮ್.ವಾಯ್. ಪಾಟೀಲ,ಶಾಸಕರು,ಅಫಜಲಪೂರ
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸನ್ಮಾನ್ಯ ಶ್ರೀ ಅಲ್ಲಮಪ್ರಭು ಪಾಟೀಲ ಶಾಸಕರು ದಕ್ಷಿಣ ಮತಕ್ಷೇತ್ರ. ಕಲಬುರಗಿ ಇವರಿಂದ ನಾಟಕಗಳ ಸಂಕಲನ “ನಸುಕು ಹರಿದು ಬೆಳಕಾಯಿತು”ಹಾಗೂ”ಬಿತ್ತಿ ಹೋದ ಭಾವನೆಗಳು “ಪುಸ್ತಕ ಲೋಕಾರ್ಪಣೆ ಮಾಡಲಾಯಿತು.
ಶ್ರೀ ಸಿ.ಎಸ್.ಮಾಲಿ ಪಾಟೀಲ ಅಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು,ಕಲಬುರಗಿ ಘಟಕ ಹಾಗೂ
ಉಪಸ್ತಿತರಾದ ಶ್ರೀ ಶಿವಶರಣಪ್ಪ ವ್ಹಿ ಹಿರಾಪೂರ ಮಾಜಿ ಎ.ಪಿ. ಎಂ.ಸಿ ಹಾಗೂ ಜಿ.ಪಂ.ಸದಸ್ಯರು, ಕಾರಭೋಸಗಾ
ಶ್ರೀ ಪ್ರಕಾಶ್ ಜಮಾದಾರ ಮಾಜಿ ಜಿ.ಪ.ಸದಸ್ಯರು ಅಫಜಲಪೂರ ಶ್ರೀ ರವಿಕುಮಾರ ಎಸ್.ಸರಸಂಬಿ ಗೌರವಾನ್ವಿತ ಜಂಟಿ ಕಾರ್ಯದರ್ಶಿಗಳು, ಎಚ್.ಕೆ.ಸಿ.ಸಿ.ಐ.,ಕಲಬುರಗಿ
ಶ್ರೀ ಚಂದ್ರಶೇಖರ ಕರ್ಜಗಿ ಅಧ್ಯಕ್ಷರು ವೀರಶೈವ ಲಿಂಗಾಯತ ಅಫಜಲಪುರ ವಿಶೇಷ ಗೌರವ ಸಮರ್ಪಣೆ ಶ್ರೀ ಎ.ಕೆ.ರಾಮೇಶ್ವರ ಸಾಮಾಜಿಕ ಚಿಂತಕರು ಖ್ಯಾತ ಹಿರಿಯ ಮಕ್ಕಳ ಸಾಹಿತಿಗಳು, ಕಲಬುರಗಿ ಹಾಗೂ ಇವರ ಸೊಸೆ ಶ್ರೀಮತಿ ಸುಜಾತ ಮೇಡಂ ಶಿಕ್ಷಕರು ಕಲಬುರ್ಗಿ,
ಹಾಗೂ ಉತ್ತಮ ವಿಮರ್ಶಕರು ಹಿರಿಯ ಸಾಹಿತಿಗಳಾದ ಡಾ।।ಗವಿಸಿದ್ದ ಪಾಟೀಲ ಮತ್ತು ಪತ್ನಿ ಡಾ||ಜಯದೇವಿ ಗಾಯಕವಾಡ ದಂಪತಿಗಳಿಗೂ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು,
ಗೆಳೆಯರ ಬಳಗದವತಿಯಿಂದ ಲೇಖಕ ಶ್ರೀ ಸಿದ್ಧರಾಮ ಸಿ ಸರಸಂಬಿ ಇವರಿಗೆ ಸನ್ಮಾನ ಮಾಡಲಾಯಿತು.
ಶ್ರೀ ಶಿವಕುಮಾರ ಬೆಡ್ಜಿರಿಗಿ,ಖ್ಯಾತ ಗವಾಯಿಗಳು, ಕಲಬುರಗಿ ಇವರಿಂದ ಪ್ರಾರ್ಥನಾ ಗೀತೆ ನೆರವೆರಿತು, ತಬಲಾ ವಾದಕರಾದ ಶ್ರೀ ಮೌನೇಶ ಪಂಚಾಳ, ಕಲಬುರಗಿ ಸಾಥ್ ನೀಡಿದರು.
ಇದೆ ವೇಳೆ ಸಾಹಿತ್ಯ ಆಸಕ್ತರಾದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಶ್ರಮವಹಿಸಿದ ಆತ್ಮಿಯ ಮಿತ್ರರು ಶ್ರೀ ಅಶೋಕ ರೆವಣಿ,ದತ್ತಣ್ಣಾ ಜಮಶೆಟ್ಟಿ, ಪ್ರಕಾಶ್ ಪಟ್ಟಣ,ವೀರಣ್ಣಾ ಡಿ ಪಟ್ಟಣ ವೀರಭದ್ರಪ್ಪ ಗುರುಮಿಟಕಲ್,ಶರಣರೆಡ್ಡಿ ಕೊಡ್ಲಾ,ಶ್ರೀನಿವಾಸ ಧಾಮಜಿಘರ,ಕಾಶಿನಾಥ್ ಮೂಲಗೆ ಕಾರ್ಯಕ್ರಮ ಯಶಸ್ವಿಗೆ ಕಾರಣರಾದರು ಹಾಗೂ ಯುವ ಸಾಹಿತಿಗಳು ಸ್ನೇಹಿತರು,ಬಂಧು ಬಳಗ ಮತ್ತು ಗ್ರಾಮದವರು ಉಪಸ್ಥಿತರಿದ್ದರು.
ಡಿ.ಪಿ.ಸಜ್ಜನಶೆಟ್ಟಿ,ಸಂಘಟನಾ ಕಾರ್ಯದರ್ಶಿಗಳು ಕರ್ನಾಟಕ ಜಾನಪದ ಪರಿಷತ್ತು,ಕಲಬುರಗಿ ಇವರಿಂದ ಸ್ವಾಗತ ಮತ್ತು ಪ್ರಾಸ್ತವಿಕ ನುಡಿಗಳು
ಶ್ರೀಮತಿ ರೇಣುಕಾ ಶ್ರೀಕಾಂತ,ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಬಳಗ ಕಲಬುರಗಿ ನಿರೂಪಿಸಿದರು
ಶ್ರೀ ಬಾಬುಮಿಯಾ ಅ.ಪ್ರಲಾರಿ,ಗೌರವ ಅಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಬಳಗ ಕಲಬುರಗಿ ಇವರು ವಂದಿಸಿದರು.
ವರದಿ:ಸಾಗರ ಪಡಸಲೆ