ಬಸವಕಲ್ಯಾಣ:ಮಹಾರಾಷ್ಟ್ರದಿಂದ ತಮಿಳುನಾಡಿನ ಚೆನ್ನೈಗೆ ಮಾದಕ ವಸ್ತು ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಬಸವಕಲ್ಯಾಣ ತಾಲೂಕಿನ ಮಂಠಾಳ ಠಾಣೆಯ ಪೊಲೀಸರ ತಂಡ ಓರ್ವ ಆರೋಪಿಯನ್ನು ಬಂಧಿಸಿದರು.ಬಂಧಿತ ಆರೋಪಿ ರಾಜಸ್ಥಾನದ ಬಾರಮೀರ್ ಜಿಲ್ಲೆಯ ಮೂಲದ ಸವಾಯಿರಾಮ 40ವರ್ಷ.
ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ-65 ರಿಂದ ಮನ್ನಳ್ಳಿ ಬಾರ್ಡರ್ ಮೂಲಕ ಸಾಗುತಿದ್ದ ಕಂಟೇನರ್ ಒಂದು ಸರಕಾರದಿಂದ ಯಾವುದೇ ರೀತಿಯ ಅನುಮತಿ ಇಲ್ಲದೆ ಅಕ್ರಮವಾಗಿ ಓಪಿಯಮ್ ಪೊಪಿ ಸ್ಟ್ರಾ ಮಾದಕ ಪದಾರ್ಥ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಹುಮನಾಬಾದನ ಡಿ.ವೈ.ಎಸ್ಪಿ.
ಜೆ.ಎಸ್.ನ್ಯಾಮಗೌಡ ಅವರ ನೇತೃತ್ವದಲ್ಲಿ ಮಂಠಾಳ ವೃತ ಸಿ.ಪಿ.ಐ ಶ್ರೀ ಕೃಷ್ಣಕುಮಾರ ಪಾಟೀಲ್ ಹಾಗೂ ಸಿಬ್ಬಂದಿಗಳಾದ
ಶ್ರೀ ಶಿವಾನಂದ,ಶ್ರೀ ಅನೀಲ,ಶ್ರೀ ಪ್ರತಾಪ,
ಶ್ರೀ ತಾತೇರಾವ್ ಚವಾಣ್,
ಶ್ರೀ ವೆಂಕಟ್ ಯಾದವ್ ಹಾಗೂ
ಶ್ರೀ ಶಿವಕುಮಾರ ಅವರನ್ನೊಳಗೊಂಡ ಪೊಲೀಸರ ತಂಡ
ಮನ್ನಳ್ಳಿ ಬಾರ್ಡರನ ಅಬಕಾರಿ ಚೇಕ್ ಪೊಸ್ಟ್ ಹತ್ತಿರ ಕಂಟೇನರನ್ನು ಪರಿಶೀಲಿಸಿ,ಕಂಟೇನರದಲ್ಲಿದ್ದ 17.50 ಕೆ.ಜಿ ಓಪಿಯಮ್ ಪೊಪಿ ಸ್ಟ್ರಾ ಮಾದಕ ಪದಾರ್ಥ ಜಪ್ತಿ ಮಾಡಿಕೊಂಡು ಆರೋಪಿ ಹತ್ತಿರದಿಂದ ಒಂದು ಮೊಬೈಲ್ ಮತ್ತು ನಗದು ಹಣ ಹೀಗೆ ಒಟ್ಟು 57 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ವರದಿ:ಸಂದೀಪ್ ಕುಮಾರ್