ರಾಯಚೂರು:ಬೆಳಕು ಸಾಹಿತ್ತಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ.)ವತಿಯಿಂದ ದಿನಾಂಕ 24-12-2023 ರಂದು ರಾಜ್ಯ ಮಟ್ಟದ ಬೆಳಕು ಸಂಭ್ರಮ ನಗರದ ವೀರ ಶೈವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ರೆಡ್ಡಿ ಕಿರಿಯ ಪ್ರಾಥಮಿಕ ಶಾಲೆ ಸಿಂಧನೂರು ಹಾಗು ಪಿಂಚಣಿ ವಂಚಿತ ನೌಕರರ ಸಂಘದ ಮಹಿಳಾ ಸದಸ್ಯರಾಗಿರುವ ರೇಷ್ಮಾ ಕಂದಕೂರರವರಿಗೆ ರಾಷ್ಟ್ರ ಮಟ್ಟದ ಕಾವ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೇಷ್ಮಾ ಕಂದಕೂರ್ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ಹವ್ಯಾಸ ಬರಹಗಾರರಾಗಿದ್ದು ಹಲವಾರು ಕಥೆ ಕವನಗಳ ರಚನೆ ಮಾಡಿರುತ್ತಾರೆ ಇವರು ರಚಿಸಿರುವ ಕಥೆ ಕವನಗಳು ಹಲವಾರು ದಿನಪತ್ರಿಕೆ,ವಾರಪತ್ರಿಕೆ ಹಾಗೂ ಇನ್ನಿತರ ಕಡೆಗಳಲ್ಲಿ ಪ್ರಕಟಗೊಂಡು ಉತ್ತಮ ಬರಹಗಾರ್ತಿಯಾಗಿ ಹೊರಹಮ್ಮಿದ್ದಾರೆ.ಈ ರಾಷ್ಟ್ರಮಟ್ಟದ ಕಾವ್ಯರತ್ನ ಪ್ರಶಸ್ತಿ ತಮ್ಮನ್ನು ಗುರುತಿಸಿ ಗೌರವ ನೀಡಿದ ಸಂಸ್ಥೆಗೆ ಧನ್ಯವಾದ ತಿಳಿಸುತ್ತಾ ತಮ್ಮ ಹವ್ಯಾಸಿ ಬರಹಕ್ಕೆ ಸಹಕರಿಸಿದ ತಮ್ಮ ಕುಟುಂಬದ ವರ್ಗದವರಿಗೆ ಹಾಗೂ ಸ್ನೇಹಿತ ವರ್ಗಕ್ಕೆ ರೇಷ್ಮಾ ಕಂದಕೂರ ಕೃತಜ್ಞತೆಗಳನ್ನು ತಿಳಿಸಿದರು
ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು,ಹಿರಿಯ ಪತ್ರ ಕರ್ತರಾದ ಭೀಮಾರಾಯ ಹದ್ದಿನಾಳ, ಚನ್ನಬಸವ ಬ್ಯಾಗಲವಾಡ,ಅಭಯಕೃಷ್ಣ, ಅಭಯಶೀಲಾ,ನವನೀತ,ಸುರಕ್ಷಾ ಆಸ್ಪತ್ರೆ ವೈದ್ಯ ಡಾ. ಹರೀಶ,ಎರ್ರಿ ಸ್ವಾಮಿ,ದೊಡ್ಡಪ್ಪ ಪೂಜಾರಿ,ಮಾರುತಿ ಬಡಿಗೇರ,ಬಸವರಾಜ್ ಸೇರಿದಂತೆ ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ಉಪಸ್ಥಿತಿ ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.