ಚಿತ್ರದುರ್ಗ:ಮಿಂಚೇರಿ ಗಾದ್ರಿಪಾಲನಾಯಕ ಸ್ವಾಮಿ ಎತ್ತಿನ ಬಂಡಿಗಳ ಪುರ ಪ್ರವೇಶಕ್ಕೆ ನಿನ್ನೆ ಮಧ್ಯಾಹ್ನ 2:30 ಸುಮಾರಿಗೆ ನಗರದ ಬಿಗ್ ಬಾಸ್ ಹೋಟೆಲ್ ಹತ್ತಿರ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಹಾಗೂ ಬಿ ಕಾಂತರಾಜ್ ಪೂಜೆ ಸಲ್ಲಿಸುವ ಮೂಲಕ ಬರ ಮಾಡಿಕೊಂಡರು.
ನಗರದ ರೈಲ್ವೆ ಗೇಟ್,ಆಜಾದ್ ನಗರ,ಗಾಂಧಿನಗರ,ಅಂಬೇಡ್ಕರ್ ಸರ್ಕಲ್ ಹೀಗೆ ನಗರದ ಸುತ್ತ ಸಾಗಿದ ಮೆರವಣಿಗೆ ನಂತರ ಕೆಳಗೋಟೆ ಚೆನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಚ್ಚಬೋರನಹಟ್ಟಿ ಗ್ರಾಮಕ್ಕೆ ಮೆರವಣಿಗೆ ಸಾಗಿತು.
