ವಿಜಯ ನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ವಿಜೃಂಭಣೆಯಿಂದ ನಡೆಯಿತು.ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ದಲಿತ ಸಂಘಟನೆ ಜಿಲ್ಲಾ ಸಂಚಾಲಕರಾದ ತೆಗ್ಗಿನಕೇರಿ ಕೊಟ್ರೇಶ್ ರವರು ಚಾಲನೆ ನೀಡಿದರು ನಂತರ ಭೀಮ ಕೋರೆಂಗಾವ್ ಯುದ್ಧದ ವಿಜಯೋತ್ಸವ ನಗರದ ಶ್ರೀ ಗುರು ಬಸವೇಶ್ವರ ಮಹಾದ್ವಾರದಿಂದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಭೀಮ ಕೋರೆಗಾವ್ ದಂಗೆ 1-1-1818 ಸಿಪಾಯಿ ದಂಗೆಗಿಂತ ಮೊದಲೇ ನಡೆದ ಅಸ್ಪೃಶ್ಯ ಮಹಾದಂಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಎಷ್ಟೆ ಕೆಲಸ ಇದ್ದರುu ಜಗತ್ತಿನ ಯಾವುದೇ ಮೂಲೆಲಿದ್ದರೂ ಅಲ್ಲಿಂದ ಹೊರಟು ಜನವರಿ ೧ನೇರಂದು ಕೋರೆಗಾಂವ್ ತಮ್ಮ ಕುಟುಂಬ ಸಮೇತರಾಗಿ ಬಂದು ಅಲ್ಲಿರುವ ಹುತಾತ್ಮ ಅಸ್ಪೃಶ್ಯ ಯೋಧರ ಸ್ಮಾರಕಕ್ಕೆ ಸ್ತಂಭಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು.
1817ರಲ್ಲಿ ರಾಜ್ಯಭಾರ ನಡೆಸುತ್ತಿದ್ದ ಪೇಶ್ವೆರಾಜ ಎರಡನೇ ಬಾಜಿರಾಯನಲ್ಲಿ ಅಸ್ಪೃಶ್ಯರು ಒಂದು ಒಂದು ಬೇಡಿಕೆಯನ್ನು ಇಟ್ಟು ಸವರ್ಣೀಯ ಪೇಶ್ವೆಗಳು ಅಸ್ಪೃಶ್ಯರ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುವುದನ್ನು ತಡೆಯಬೇಕು ಎಂದು ವಿನಂತಿ ಮಾಡಿಕೊಂಡರು ಅದಕ್ಕೆ ಬಾಜರಾಯನು ನೀವುಗಳು ಹುಟ್ಟಿರುವುದೇ ನಮ್ಮಗಳ ಗುಲಾಮಗಿರಿ ಮಾಡುವುದಕ್ಕೆ ನಿಮ್ಮ ಹೆಂಗಸರು ಇರುವುದೇ ನಮ್ಮನ್ನು ಸುಖ ಪಡಿಸುವುದಕ್ಕಾಗಿ ಇದೇ ಮನು ಸಂವಿಧಾನ ಎಂದು ಅಸ್ಪೃಶ್ಯರಿಗೆ ಖಡಕ್ಕಾಗಿ ತಿಳಿಸಿದನು. ಕೊನೆಗೆ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಹೋದರು ಅಂತಿಮವಾಗಿ ಈ ಯುದ್ಧದಲ್ಲಿ ಅಸ್ಪೃಶ್ಯ ಸೈನಿಕರು ಪ್ರಚಂಡ ಜಯಗಳಿಸುತ್ತಾರೆ. ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಕಾಲದಲ್ಲಿ 5000ಕ್ಕೂ ಹೆಚ್ಚು ಪೇಶ್ವೆ ಸೈನಿಕರು ಯುದ್ಧ ಭೂಮಿಯಲ್ಲಿ ಸಾವನಪ್ಪಿದ್ದರೆ ಕೇವಲ 22 ಜನ ಅಸ್ಪೃಶ್ಯ ಯೋಧರು ವೀರ ಮರಣವನ್ನಪ್ಪಿದರು.
ಈ ಯುದ್ಧದಲ್ಲಿ ಅಸ್ಪೃಶ್ಯ ಯೋಧರ ಪಡೆಯ ನಾಯಕನಾಗಿದ್ದ ಸಿದ್ಧನಾಕನು ಸಹ ವೀರ ಮರಣವನ್ನು ಅಪ್ಪುತ್ತಾನೆ ಎಂದು ಡಿಎಸ್ಎಸ್ ಜಿಲ್ಲಾ ಸಂಚಲಕರಾದ ಬಿ ಮರಿಸ್ವಾಮಿ ಭೀಮ ಕೋರೆಗಾಂವ್
ವಿಜಯೋತ್ಸವವನ್ನು ಕುರಿತು ಮಾತನಾಡಿದರು.
ಹೀಗಾಗಿ ಇಂದಿನ ಯುವಕರು ನಮ್ಮ ಪೂರ್ವಜರ ಇತಿಹಾಸವನ್ನು ತಿಳಿಯುವುದರ ಮೂಲಕ ಇತಿಹಾಸವನ್ನು ಪುನಃ ಸ್ಥಾಪಿಸಬೇಕು ಜೈ ಭೀಮ್ ಎಲ್ಲರಿಗೂ ಭೀಮ ಕೋರೆಗಾಂವ್ 206ನೇ ವರ್ಷದ ವಿಜಯೋತ್ಸವ ಆಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ವಕೀಲರು ತಾಲೂಕು ಸಂಚಾಲಕರು ಡಿಎಸ್ಎಸ್,ಬಿ ದುರ್ಗೇಶ್,ಡಿಎಸ್ಎಸ್ ಕೊಟ್ಟೂರು ಘಟಕದ ಸಂಚಾಲಕರು ಶಿವರಾಜ್ ಬಣಕಾರ್,ಪಟ್ಟಣ ಪಂಚಾಯತಿಯ ಸದಸ್ಯರಾದ ತಗ್ಗಿನಕೇರಿ ಜಗದೀಶ್, ಕೆಂಗಪ್ಪ,ದಲಿತ ಸಂಘಟನೆ ಪದಾಧಿಕಾರಿಗಳಾದ ಪ್ರಭಾಕರ್ ಅಜ್ಜಯ್ಯ ವಿಷ್ಣು ಮಣಿಕಂಠ ಪರಶುರಾಮ್ ಮತ್ತು ಯುವಕರು ಮತ್ತಿತರರು ಹಾಜರಿದ್ದರು.
ವರದಿ:ವೈ.ಮಹೇಶ್ ಕುಮಾರ್,ಕೊಟ್ಟೂರು