ಯಾದಗಿರಿ:ಕೆಲವು ದಿನಗಳ ಹಿಂದೆ ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೇ ಜಿ ಅವರೆ ಪ್ರಧಾನಿ ಆಗಲಿ ಎಂದು ಹಲವು ರಾಜ್ಯದ ಮುಖ್ಯಮಂತ್ರಿಗಳು ಹೇಳುತ್ತಿರುವಾಗ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೇಸ್ ಪಕ್ಷದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರೇ ಪ್ರಧಾನಿ ಆಗಲಿ ಎಂದು ತಮ್ಮ ನಿಲುವು ತಿಳಿಸಿದ್ದಾರೆ ಕಾಂಗ್ರೇಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ೫೦ ವರ್ಷಗಳಕಾಲ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸಿದ್ದಾರೆ ಕರ್ನಾಟಕ ಮುಖ್ಯಮಂತ್ರಿಯಾಗಲು ರಾಜ್ಯದ ನಾಯಕರು ಮೂರು ಸಲ ತಪ್ಪಿಸಿದ್ದಾರೆ ಡಾ.ಜಿ ಪರಮೇಶ್ವರ ಅವರಿಗೆ ೨ ಬಾರಿ ತಪ್ಪಿಸಿದ್ದಾರೆ ದೇಶದ ಹಲವು ರಾಜ್ಯದ ಮುಖ್ಯಮಂತ್ರಿಗಳು ಮಲ್ಲಿಕಾರ್ಜುನ ಖರ್ಗೇ ಜಿ ಅವರೆ ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಹೇಳುತ್ತಿರುವಾಗ ಇತ್ತ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರು ಪ್ರಧಾನಿ ಆಗಲಿ ಎಂದು ಹೇಳುವ ಮೂಲಕ ತಾವು ದಲಿತ ವಿರೋಧಿ ಎಂಬುದು ಸಾಬೀತುಪಡಿಸಿದ್ದಾರೆ ತಾವು ಅಹಿಂದ ನಾಯಕರೆಂದು ರಾಜ್ಯದ ದಲಿತ ಸಮಾಜದ ನಾಯಕರಿಗೆ ಬೆಂಬಲ ಕೊಡದೆ ತಮಗಿಂತ ಮೇಲೆ ಯಾರೂ ಹೋಗಬಾರದು ಎಂದು ದಲಿತರಿಗೆ ರಾಜಕಿಯ ದಾರಿ ತಪ್ಪಿಸುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ನಿಂಗಣ್ಣ ಕರಡಿ ಆಕ್ರೋಷವ್ಯಕ್ತಪಡಿಸಿದ್ದಾರೆ ಸಿದ್ದರಾಮಯ್ಯ ಅವರ ಬಾಯಿಂದ ಹಾಗೂ ಇನ್ನಿತರ ರಾಜಕಾರಣಿಗಳಿಂದ ದಲಿತ ಮುಖ್ಯಮಂತ್ರಿ ಪ್ರಧಾನ ಮಂತ್ರಿ ಆಗಲಿ ಎಂದು ಬರುವುದೆ ಇಲ್ಲ ಮತ್ತು ಬೆಂಬಲಿಸುವುದಿಲ್ಲ ಮಾನ್ಯ ಸಿದ್ದರಾಮಯ್ಯನವರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಲೋಕಸಭಾ ಚುನಾವಣೆ ಮುಗಿದ ನಂತರ ಮುಖ್ಯಮಂತ್ರಿ ಸ್ಥಾನದಿಂದ ರಾಜಿನಾಮೆ ಕೊಟ್ಟು ತಮ್ಮ ಆಪ್ತರಾಗಿರುವ ಎಚ್ ಸಿ ಮಹಾದೇವಪ್ಪ ಅಥವಾ ಡಾ.ಜೀ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಆಗ್ರಹಿಸಿದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ




















