26,67,056 ರೂ. ವಿಮಾ ಹಣದ ಚೆಕ್ ವಿತರಣೆ
ಯಾದಗಿರಿ ನಗರದ ನಿವಾಸಿ ದೇವಿಂದ್ರ ಚವ್ಹಾಣ್ ಎಂಬ ವ್ಯಕ್ತಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ಯಾದಗಿರಿ-2 ಗ್ರಾಮೀಣ ಕೆನರಾ ಬ್ಯಾಂಕಿನಲ್ಲಿ ದೇವಿಂದ್ರ ಚವ್ಹಾಣ್ ಅವರು ಮನೆ ಕಟ್ಟಲು 28,00,000 ಲಕ್ಷ ಗೃಹ ಸಾಲವನ್ನು ಪಡೆದಿದ್ದರು .
ಗೃಹ ಸಾಲದ ಜೊತೆಗೆ ಕೆನರಾ ಬ್ಯಾಂಕ್ ನ HSBC Group, ಲೈಫ್ ಇನ್ಸುರೆನ್ಸ್ ಅಡಿಯಲ್ಲಿ
ರೂ 79,825 ಏಕಕಾಲದ ಪ್ರೀಮಿಯಂ ಪಾಲಿಸಿ ವಿಮೆಯನ್ನು ಮಾಡಿದ್ದರು.
ಆದರೆ ದುಃಖದ ಸಂಗತಿಯೆಂದರೆ ದೇವಿಂದ್ರ ಚವ್ಹಾಣ್ ಅವರು ಆಕಸ್ಮಿಕವಾಗಿ ನಿಧನರಾದರು. ಈ ಅನಿರೀಕ್ಷಿತ ನಿಧನದಿಂದ ಕುಟುಂಬಕ್ಕೆ ಭಾರಿ ಆಘಾತ ಉಂಟಾಯಿತು. ಗೃಹ ಸಾಲಕ್ಕೆ ವಿಮೆ ಹೊಂದಿದ್ದ ಕಾರಣದಿಂದ ವೀಮಾ ಕಂಪನಿಯಿಂದ ಕುಟುಂಬಕ್ಕೆ ಆರ್ಥಿಕ ಸಹಾಯ ದೊರಕುವಂತಾಯಿತು.
ಕೆನರಾ ಬ್ಯಾಂಕಿನ ಹೆಚ್.ಎಸ್.ಬಿಸಿ ಸಂಸ್ಥೆಯು ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವ್ಯಕ್ತಿ ಮರಣ ಹೊಂದಿದ 15 ದಿನಗಳಲ್ಲಿ ತಕ್ಷಣ ಕ್ರಮ ಕೈಗೊಂಡು 26,67,056 ಮೊತ್ತವನ್ನು ಮಂಜೂರು ಮಾಡಿತು. ಈ ಮೊತ್ತದ ಚೆಕ್ಕನ್ನು ಕೆನರಾ ಬ್ಯಾಂಕ್ ಯಾದಗಿರಿ ಬ್ರ್ಯಾಂಚ್ ಮ್ಯಾನೇಜರ್ ಮೋಹಿತ್ ತಿವಾರಿ, ಮತ್ತು ಕ್ಲಸ್ಟರ್ ಬ್ಯುಸಿನೆಸ್ ಹೆಡ್ ಕಿರಣ್ ವಿಭೂತಿ , ಮತ್ತು ಕ್ರೆಡಿಟ್ ಆಫೀಸರ್ ಅಜಯ್ ಅವರ ಸಮ್ಮುಖದಲ್ಲಿ ಮೃತ ದೇವಿಂದ್ರ ಚವ್ಹಾಣ್ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಯಾದಗಿರಿ ಬ್ರ್ಯಾಂಚ್ ಮ್ಯಾನೇಜರ್ ಮೋಹಿತ್ ತಿವಾರಿ ಅವರು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಬ್ಯಾಂಕ್ ನ ಧ್ಯೇಯ.
ಗೃಹ ಸಾಲ ಪಡೆದ ಪ್ರತಿಯೊಬ್ಬ ಗ್ರಾಹಕರಿಗೂ ಭವಿಷ್ಯದ ಭದ್ರತೆ ಕಲ್ಪಿಸುವ ಉದ್ದೇಶದಿಂದ ನಾವು ವೀಮಾ ಯೋಜನೆಗಳನ್ನು ಅನುಸರಿಸುತ್ತಿದ್ದೇವೆ ಇಂತಹ ಆಕಸ್ಮಿಕ ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಮೃತರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವುದು ಬ್ಯಾಂಕ್ ಹಾಗೂ ವಿಮಾ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ಎಂದರು. ನಮ್ಮಲ್ಲಿ Housing loan, Education loans, Vehicle loan, ಹಾಗೂ Personal loan ಸೌಲಭ್ಯಗಳಿವೆ. ಲೋನ್ ಪಡೆದ ವ್ಯಕ್ತಿ ಪ್ರಕೃತಿ ವಿಕೋಪ, ಆತ್ಮಹತ್ಯೆ, ಅಪಘಾತ, ಸೇರಿದಂತೆ ಇತರೇ ಯಾವುದೇ ಅನಾಹುತದಿಂದ ಮೃತಪಟ್ಟಿದ್ದರೂ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಮೃತರ ಪತ್ನಿ ಹಣಿಮ್ಮಿಬಾಯಿ ಮಾತನಾಡಿ ನನ್ನ ಗಂಡನ ಅಕಾಲಿಕ ಮರಣ ನಮ್ಮೆಲ್ಲರಿಗೂ ಆಘಾತ ತಂದಿದ್ದು, ಅವರ ಕೆನರಾ ಬ್ಯಾಂಕ್ ಹಾಗೂ ಹೆಚ್ಎಸ್ಬಿಸಿ ಸಂಸ್ಥೆಯು ತಕ್ಷಣ ಕ್ರಮ ಕೈಗೊಂಡು ನಮ್ಮ ಕುಟುಂಬಕ್ಕೆ ಆರ್ಥಿಕ ನೆರವು ನೀಡಿರುವುದು ಶ್ಲಾಘನೀಯ.
ಈ ನೆರವು ನಮ್ಮ ಜೀವನದ ದಾರಿಗೆ ಸಹಾಯವಾಗಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಬಿ ಹೆಚ್. ಹೆಡ್ ಕಿರಣ್, ಚೀಪ್ ಮ್ಯಾನೇಜರ್ ಮೋಹಿತ್ ವಿಭೂತಿ, ಅಜಯ್ ಕುಮಾರ್ ಚೌಧರಿ ಸೇರಿದಂತೆ ಮೃತರ ಕುಟುಂಬಸ್ಥರು ಇದ್ದರು.
- ಕರುನಾಡ ಕಂದ ಸುದ್ದಿ




















