ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯುವಜನತೆಯಲ್ಲಿ ನಾಯಕತ್ವ ಗುಣ, ಸಮಾಜಮುಖಿ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಜೆಸಿಐ ಉದ್ದೇಶ : ಜೆಸಿ ಕೆ.ವಿ.ವಸಂತಕುಮಾರ್

ಬಳ್ಳಾರಿ / ಕಂಪ್ಲಿ : ಯುವಜನತೆಯಲ್ಲಿ ನಾಯಕತ್ವ ಗುಣಗಳನ್ನು ಸಮಾಜಮುಖಿ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಜೆಸಿಐ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಜೆಸಿಐ ಸಂಸ್ಥೆಯ ವಲಯ 14ರ ಪೂರ್ವಾಧ್ಯಕ್ಷರಾದ ಜೆಸಿ ಎಚ್ ಜಿ ಎಫ್ ಕೆವಿ ವಂಸತಕುಮಾರ್ ತಿಳಿಸಿದರು.
ಅವರು ಗಂಗಾವತಿಯ ಆನೆಗುಂದಿ ರಸ್ತೆಯಲ್ಲಿರುವ ನೇಚರ್ ಟ್ರಯಾಲ್ಸ್ ರೆಸಾರ್ಟಿನಲ್ಲಿ ಜೆಚಿಐ ಅಲುಮ್ನಿ ಕ್ಲಬ್ ಕಂಪ್ಲಿ ರೀಜನ್ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಬವನ್ನು ಉದ್ಘಾಟಿಸಿ ಮಾತನಾಡಿ, ಕಳೆದ 5 ದಶಕಗಳಿಂದ ಜೆಸಿಐ ಕಂಪ್ಲಿ ಘಟಕವು ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜೆಸಿಐ ವಲಯ 14, 24 ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿದೆ. ಜೆಸಿಐ ಸಂಸ್ಥೆಯು 40 ವರ್ಷದ ವಯಸ್ಸಿನವರೆಗೂ ಸದಸ್ಯತ್ವನ್ನು ಪಡೆಯುತ್ತದೆ. ಜೆಸಿ ಸದಸ್ಯರು ಹಿರಿಯ ಸದಸ್ಯರಾಗಿರುತ್ತಾರೆ. ಆದರೆ ಒಮ್ಮೆ ಜೆಸಿ ಸದಸ್ಯರಾದ ಮೇಲೆ ಜೀವನ ಪೂರ್ತಿ ಅವರು ಜೆಸಿ ಸದಸ್ಯರಾಗಿರಬೇಕು. ಅವರ ಅನುಭವ, ಸಮಾಜಮುಖಿ ಕೆಲಸಕಾರ್ಯಗಳು ಯುವ ಜನತೆಗೆ ಸ್ಪೂರ್ತಿಯಾಗಿರಬೇಕೆನ್ನುವ ನಿಟ್ಟಿನಲ್ಲಿ 2020ರಿಂದ ಎಸ್.ಎಂ.ಎ. ಅಂದರೆ ಸೀನಿಯರ್ ಮೆಂಬರ್ ಅಸೋಷಿಯನ್ ಜನ್ಮ ತಾಳಿತು. ನಂತರ ಕಳೆದ ವರ್ಷದಿಂದ ಜೆಸಿಐ ಅಲುಮ್ನಿ ಕ್ಲಬ್ ರೀಜನ್ ಎಂದು ಜನ್ಮ ತಾಳಿದ್ದು, ಈ ಕ್ಲಬಗೆ 40 ವರ್ಷ ಮೇಲ್ಪಟ್ಟವರೆಲ್ಲಾ ಸದಸ್ಯರಾಗಬಹುದಾಗಿದ್ದು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಬಹುದಾಗಿದೆ ಎಂದ ಅವರು 1998ರಲ್ಲಿ ಜೆಸಿಐ ವಿಜಯನಗರ ಕಂಪ್ಲಿ ಹೆಸರಿನಲ್ಲಿ ಆರಂಭವಾಗಿ ಅಂದು ಜೆಸಿ ಡಿ.ಮೌನೇಶ್ ಅವರಿಗೆ ಪದಗ್ರಹಣ ಕಾರ್ಯಕ್ರಮದ ಪ್ರಮಾಣ ವಚನ ಬೋಧಿಸಲು ವಲಯ 14ರ ಅಧ್ಯಕ್ಷನಾಗಿ ಆಗಮಿಸಿದ್ದೆ. ಇಂದು ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ರೀಜನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಮೌನೇಶ್ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಲು ಆಗಮಿಸಿರುವುದು ಕಾಕತಾಳೀಯವೆಂದು ಅಂದಿನ ದಿನಗಳನ್ನು ಹಾಗೂ ಅಂದಿನಿಂದ ಇಂದಿನವರೆಗೂ ಜೆಸಿಐ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ಕಂಪ್ಲಿಯ ಹಿರಿಯ ಜೆಸಿ ಸದಸ್ಯರನ್ನು ಸ್ಮರಿಸಿಕೊಂಡರು. ಸಂಸ್ಥೆಯಿಂದ ಸಣ್ಣ,ಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸದೇ ಪಟ್ಟಣಕ್ಕೆ, ಜನತೆಗೆ ಉಪಯೋಗವಾಗುವ ಸದಾ ಜನಮಾನಸದಲ್ಲಿ ಉಳಿಯುವಂತ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದರು.
ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ರೀಜನ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಜೆಸಿ ಡ.ಮೌನೇಶ್ ಮಾತನಾಡಿ ಕಳೆದ ಮೂರುವರೆ ದಶಕಗಳಿಂದ ಜೆಸಿಐ ಸಂಸ್ಥಯೊಂದಿಗೆ ಗುರುತಿಸಿಕೊಂಡಿರುವುದು ಸಮಾಜ ಮುಖಿ ಕೆಲಸಗಳನ್ನು ಮಾಡಲು, ಇದರೊಂದಿಗೆ ತಾವು ಬೆಳೆಯಲು ಅದ್ಬುತ ಅವಕಾಶಗಳನ್ನು ಕಲ್ಪಿಸಿದ್ದು, ಇಂತಹ ಅವಕಾಶ ಪುನಃ ಸಿಕ್ಕಿದ್ದು, ಪಟ್ಟಣದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.
ಜೆಸಿಐ ಅಲುಮ್ನಿ ಕ್ಲಬ್ ವಲಯ ಚೇರಮನ್ ಜೆಸಿ ಪಿಡಿಎಂ ಮಾಹಬಲೇಶ್ವರ ಅವರು ನೂತನ ಅಧ್ಯಕ್ಷರಾದ ಜೆಸಿ ಡಿ.ಮೌನೇಶ್ ಅವರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಜೆಸಿ ನಿರಂಜಗುಪ್ತ, ಜೆಸಿ ಎಸ್.ಎಂ.ನಾಗರಾಜಸ್ವಾಮಿ ಮಾತನಾಡಿ ನೂತನ ಅಧ್ಯಕ್ಷರನ್ನು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ವಲಯ ಉಪಾಧ್ಯಕ್ಷರಾದ ಜೆಎಫ್ ಎಫ್ ಪಿಡಿಎಂ ಪ್ರಸದ್ ಗಡಾದ್ ನೂತನ ಪದಾಧಿಕಾರಿಗಳಿಗೆ ಜೆಸಿಐ ಪಿನ್ ಗಳನ್ನು ನೀಡಿ ರ್ಗೌವಿಸಿದರು. ಪದಗ್ರಹಣ ಸಮಾರಂಭದಲ್ಲಿ ಜೆಸಿಐ ಅಲುಮ್ನಿ ಕ್ಲಬ್ ಪದಾಧಿಕಾರಿಗಳಾದ ಶಾಂತಿಲಾಲ್, ಸಿಂಘ್ವಿ, ರಮೇಶ್ ರೆಡ್ಡಿ, ಮಾಧುಸ್ವಾಮಿ, ಕೊಟ್ಯಾನ್, ಪೂರ್ಣಿಮಾ, ದಿವ್ಯಾ, ಹಿರಿಯ ಸದಸ್ಯರಾದ ಡಾ.ಜಂಬುನಾಥಗೌಡ, ರಾಮರಾಜು, ಡಾ.ಸುಧಾಕರ್, ಕೆ.ಎಂ.ವಾಗಿಶ್, ರುದ್ರಪ್ಪ, ರಾಘವೇಂದ್ರ, ಡಾ.ಭರತ್ ಪದ್ಮಶಾಲಿ, ಮಂಜೇಶ್, ಹಗರಿಬೊಮ್ಮನಹಳ್ಳಿಯ ರಾಘವೇಂದ್ರ, ಜೆಸಿ ಬ್ರಹ್ಮಾನಂದಾ, ಜೆಸಿ ಜಿ.ಚಂದ್ರಶೇಖರಗೌಡ, ಡಿ.ಮಂಜೇಶ್, ಮಹಿಳಾ ಸದಸ್ಯರಾದ ಡಿ.ವೀಣಾ ಮೌನೇಶ, ಚೈತ್ರ ಪ್ರಸಾದ ಗಡಾದ್, ಸುನಿತಾ, ಕಾಂಚನಾ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!