ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಳೆ ಇಲ್ಲದೆ ಬಾಡಿಹೋದ ಬೆಳೆಗಳನ್ನು ವೀಕ್ಷಿಸಿದ ವಿಜಯನಗರ ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್, ಮನ್ನಿಕೆರೆ

ಕೊಟ್ಟೂರು : ತಾಲೂಕಿನದ್ಯಾಂತ ಮುಂಗಾರು ಮಳೆ ಬರುವುದೆಂದು ಅಲ್ಲಲ್ಲಿ ಕೆಲವು ರೈತರು ಧೈರ್ಯ ಮಾಡಿ ತಮ್ಮ ಹದ ಮಾಡಿದ ಹೊಲಗಳಲ್ಲಿ ಅಲ್ಪ ಸ್ವಲ್ಪ ಬಂದ ಮಳೆಯನ್ನು ನೆಚ್ಚಿಕೊಂಡು ಬೀಜ ಬಿತ್ತಿರುವ ಹೊಲಗಳಲ್ಲಿ ಅಲ್ಲೊಂದು ಇಲ್ಲೊಂದು ಬೆಳೆ ಬೆಳೆದು ನಿಂತಿವೆ ಆದರೆ ಸಂಪೂರ್ಣ ಮಳೆ ಬಾರದ ಕಾರಣ ಅಲ್ಲೊಂದು ಇಲ್ಲೊಂದು ಬೆಳೆದು ನಿಂತ ಬೆಳೆಗಳು ಸಂಪೂರ್ಣವಾಗಿ ಬಾಡಿಹೋಗಿವೆ.
ಈ ಬಾಡಿಹೋದ ಬೆಳೆಗಳನ್ನು ವಿಜಯನಗರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಎಸ್. ಮನ್ನಿಕೇರೆ ರವರು ಕೊಟ್ಟೂರು ತಾಲೂಕಿನ ಗಜಾಪುರ ಕಂದಾಯ ಗ್ರಾಮದಲ್ಲಿ ಸ ನಂ. 541 A , 541 B ಹಾಗೂ 564 C ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ವೀಕ್ಷಣೆ ಮಾಡಿದರು, ಸ್ಥಳದಲ್ಲಿದ್ದ ಸದ್ರಿ ಗ್ರಾಮದ ರೈತರ ಸಂಗಡ ಮಳೆಯಿಲ್ಲದೆ ಬಾಡಿಹೋದ ಬೆಳೆಗಳ ಬಗ್ಗೆ ಚರ್ಚಿಸಿ ರೈತರಿಂದ ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸಿ. ಇ. ಒ. ಮತ್ತು ಕೃಷಿ ಅಧಿಕಾರಿಗಳು, ತಾಲೂಕು ತೋಟಗಾರಿಕಾ ಅಧಿಕಾರಿಗಳು ಹಾಗೂ ಇನ್ನಿತರೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು, ಹರಪನಹಳ್ಳಿ ತಾಲೂಕು ದಂಡಾಧಿಕಾರಿಗಳು, ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಕಂದಾಯ ನಿರೀಕ್ಷಕರು , ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಇನ್ನಿತರೆ ತಾಲೂಕು ಅಧಿಕಾರಿ ವರ್ಗದವರು ಹಾಜರಿದ್ದರು.

ವರದಿ: ಕೆ. ಗೋಣೆಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!