ಬಿಜಾಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಕರಾಟೆ ತಂಡಕ್ಕೆ ಕರಾಟೆ ತರಬೇತುದಾರರಾಗಿ ಅಂತರಾಷ್ಟ್ರೀಯ ಕರಾಟೆಪಟು ಮತ್ತು ನ್ಯಾಷನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಕಲಬುರ್ಗಿಯ ಮನೋಹರ ಕುಮಾರ್ ಬೀರನೂರ ಮೂರನೇ ಬಾರಿ ಆಯ್ಕೆ.
ಕಲ್ಬುರ್ಗಿ ಸುದ್ದಿ:ದಿನಾಂಕ 15 ರಿಂದ 21 ಜನೇವರೀ 2024 ರಂದು ಭೂಪಾಲ್ ಮಧ್ಯ ಪ್ರದೇಶದಲ್ಲಿ ನಡೆಯುವ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಕರಾಟೆ ಚಾಂಪಿಯನ್ ಶಿಪ್ ಬಿಜಾಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಕರಾಟೆ ತಂಡಕ್ಕೆ ಕಲಬುರ್ಗಿಯ ಕಲ್ಯಾಣ ಕರ್ನಾಟಕದ ಭಾಗದ ಹೆಸರಾಂತ ಅಂತರಾಷ್ಟ್ರೀಯ ಕರಾಟೆಪಟು ನ್ಯಾಷನಲ್ ಕಿಕ್ಕಬಾಕ್ಸಿಂಗ್ ಚಾಂಪಿಯನ್ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕಲಬುರ್ಗಿ ಜಿಲ್ಲೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೇ ಮತ್ತು ಕರ್ನಾಟಕಕ್ಕೇ ಹೆಸರು ತಂದುಕೊಟ್ಟಂತಹ
ಮನೋಹರ್ ಕುಮಾರ್ ಬೀರನೂರು ರವರು ಆಯ್ಕೆಯಾಗಿರುವುದು ಕಲಬುರ್ಗಿ ಜಿಲ್ಲೆಗೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆಯ ವಿಷಯ ಮತ್ತು ಇವರಿಗೆ ಆಲ್ ಇಂಡಿಯಾ ಶಿಟೋ ರಿಯೋ ಕರಾಟೆ ಸಂಸ್ಥೆ ಮತ್ತು ಅಖಿಲ ಕರ್ನಾಟಕ ಸ್ಪೋಟ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ.ಎಸ್ ಅರುಣ ಮಾಚಯ್ಯ, ವಿಧಾನ ಪರಿಷತ ಸದಸ್ಯರಾದ ಸನ್ಮಾನ್ಯ ಶ್ರೀ ಶಶಿಲ್ ಜಿ ನಮೋಶಿ,ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿ ಮೂಡ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ನಿತಿನ್ ವಿ ಗುತ್ತೇದಾರ್, ಬಿಜೆಪಿ ಮುಖಂಡರಾದ ಚಂದು ಪಾಟೀಲ್, ಕಲ್ಯಾಣ ಕರ್ನಾಟಕ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ದಶರಥ್ ದುಮ್ಮನಸುರ್, ಶ್ರೀ ಸಂಗಮ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಬಸವರಾಜ್ ಇಮದಾಪುರ್ ಮತ್ತು ಹೆವೆನ್ ಫೈಟರ್ಸ್ ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್ ಇಂಡಿಯಾ ಸಂಸ್ಥೆಯ ಪದಾಧಿಕಾರಿಗಳು ರಾಜಕೀಯ ಮುಖಂಡರು ಅಧಿಕಾರಿವರ್ಗದವರು ಕ್ರೀಡಾಭಿಮಾನಿಗಳು ಶುಭಕೋರಿದ್ದಾರೆ ಎಂದು ಸಂಸ್ಥೆಯ ಅಭಯ್ ಚೌಹಾನ್ ,ದರ್ಶನ್ ಬಳಿಚಕ್ಕರ್, ಶರಣರೆಡ್ಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.