ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಕರ್ನಾಟಕದ ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಯ ಪ್ರಯುಕ್ತ ಹಳ್ಳಿಕಾರ್ ಎತ್ತುಗಳನ್ನು ಶೃಂಗರಿಸಿ ಅವುಗಳಿಗೆ ವಿವಿಧ ರೀತಿಯ ಅಲಂಕಾರವನ್ನು ಮಾಡಿ ಎತ್ತುಗಳನ್ನು ಮದುವೆಯ ವಧುವಿನ ರೀತಿ ಶೃಂಗಾರ ಮಾಡಿ ಎತ್ತುಗಳನ್ನು ಪೂಜಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು ಗ್ರಾಮಸ್ಥರು ಎತ್ತುಗಳಿಗೆ ಆರತಿ ಎತ್ತಿ ಗ್ರಾಮದ ಎಲ್ಲಾ ಬೀದಿಗಳು ಮತ್ತು ಎಲ್ಲಾ ಮನೆಯ ಮುಂಭಾಗ ಎತ್ತುಗಳನ್ನು ಪೂಜಿಸಿ,ದೃಷ್ಟಿ ತೆಗೆದು ಮಾರುತಿ ಸರ್ಕಲ್ ನಲ್ಲಿ ಗ್ರಾಮಸ್ಥರು ಎತ್ತುಗಳ ಮಾಲೀಕರನ್ನು ಸನ್ಮಾನಿಸಿ ಅವುಗಳನ್ನು ಪ್ರೋತ್ಸಾಹಿಸಿದರು.ಇಲ್ಲಿ ಯಾವುದೇ ಜಾತಿ ಧರ್ಮವಿಲ್ಲದೆ ಪ್ರತಿಯೊಬ್ಬರೂ ಗ್ರಾಮದಲ್ಲಿ ಹಬ್ಬ ರೀತಿ ಆಚರಣೆ ಮಾಡಿರುವುದು ಒಂದು ವಿಶೇಷವಾಗಿ ಇರುವುದು ಕಂಡುಬಂದಿತು.ಎತ್ತುಗಳ ಮಾಲೀಕರಾದ ಭಾಸ್ಕರ್ ಕುಮಾರ್,ದೇವರಾಜ,ಸತೀಶ್ ಆರ್ ಇವರುಗಳು ಡಿಜೆ ಸೌಂಡ್ ವ್ಯವಸ್ಥೆ ಮಾಡಿದ್ದರು.ಇವರನ್ನು ಹಂಡಿತವಳ್ಳಿ ಗ್ರಾಮಸ್ಥರು ಯುವಕರು ಯಜಮಾನ್ರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದು ಇವರಿಗೆ ಶುಭ ಹಾರೈಸಿದರು ಇದೇ ರೀತಿ ಹಳ್ಳಿಕಾರ್ ಎತ್ತು ಮತ್ತಷ್ಟು
ಸಂಖ್ಯೆ ಹೆಚ್ಚಿ ನಮ್ಮ ಸಂಸ್ಕೃತಿ ಉಳಿಯುವಂತಾಗಲಿ ಎಂದು ಎಲ್ಲಾ ಗ್ರಾಮಸ್ಥರು ಹಾರೈಸಿದರು.
ವರದಿ-ಆರ್.ಶಂಕರ್ ಹಂಡಿತವಳ್ಳಿ