ಬಾಗಲಕೋಟೆ:ನಗರದ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ 2023-24 ರ ಸಾಲಿನಲ್ಲಿ ಫೆಬ್ರವರಿ 10 ರಿಂದ 12 ರವರೆಗೆ ತೋಟಗಾರಿಕೆ ಮೇಳ ಆಯೋಜಿಸಿದೆ.ತೋಟಗಾರಿಕೆ ವಿ.ವಿ.ಯ ವ್ಯಾಪ್ತಿಯಲ್ಲಿನ 24 ಜಿಲ್ಲೆಗಳಿಗೆ ಪ್ರತಿಯೊಂದು ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆಯನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.ರೈತ ಅಥವಾ ರೈತ ಮಹಿಳೆಯರು ಅರ್ಜಿಯನ್ನು ಡೀನ್,ತೋಟಗಾರಿಕೆ ಮಹಾವಿದ್ಯಾಲಯ,ಬಾಗಲಕೋಟೆ ಕಚೇರಿಯಿಂದ ಅಥವಾ ವಿಸ್ತರಣಾ ಮುಂದಾಳು,ವಿಸ್ತರಣಾ ನಿರ್ದೇಶನಾಲಯದಿಂದ ಅಥವಾ ತೋವಿವಿ ಅಂತರ್ಜಾಲದಿಂದ https://uhsbagalkot.karnataka.gov.in ದ ಮೂಲಕ ಪಡೆದು ಜ.10 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ
ಮೊ:9480696381, 9845655856 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವರದಿ:ಆನಂದ.ಮ.ಹೂಗಾರ



















