ಕಲ್ಬುರ್ಗಿ ಸುದ್ದಿ:ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ಅವರ ತವರು ಕ್ಷೇತ್ರದಲ್ಲಿಯೆ ಹಗರಣ ನಡೆದಿದ್ದು ಈ ವಿಷಯದ ಕುರಿತು ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕುರಿತು
ಆಳಂದ ತಾಲೂಕಿನ ಹೀರೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ಲೋಪವೆಸಗಿದ ಪಿಡಿಓನನ್ನು ಅಮಾನತ್ತುಗೊಳಿಸುವಂ
ತೆ ಮತ್ತು ಆಂದೋಲಾ,ಆಲೂರು,ಹಿಪ್ಪರಗಾ(ಎಸ್ ಎನ್),ಸಾಥಖೇಡ ಗ್ರಾಮ ಪಂಚಾಯತಿಗಳಲ್ಲಿ ಅವ್ಯವಹಾರ ನಡೆಸಿದ ಭ್ರಷ್ಟ ಪಿಡಿಓ ಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಹಾಗೂ ಸಾರ್ವಜನಿಕರ ಹಾಗೂ ಸರ್ಕಾರ ದುಡ್ಡನ್ನು ಕೊಳ್ಳೆ ಹೊಡೆದು ಸರ್ಕಾರಕ್ಕೆ ವಂಚಿಸಿದ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯತ ಕಾರ್ಯಾಲಯದ ಎದುರುಗಡೆ ಹಮ್ಮಿಕೊಳ್ಳಲಾದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಇಂದು 3 ನೇ ದಿನಕ್ಕೆ ಕಾಲಿಟ್ಟಿದೆ.ಇದಕ್ಕೆ ಸಂಬಂಧಪಟ್ಟ ಮುಖ್ಯ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಣಾಧಿಕಾರಿಗಳು ಇದುವರೆಗೂ ಯಾವುದೇ ರೀತಿಯಿಂದ ಸೂಕ್ತ ಕ್ರಮ ಜರುಗಿಸಿರುವುದಿಲ್ಲ ಕೂಡಲೇ ಸಂಬಂಧಪಟ್ಟ ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ನಮ್ಮ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ ಎಂದು ಶ್ರೀರಾಮ ಸೇನೆಯ ಹೋರಾಟಗಾರರಾದ ಶರಣಪ್ಪರೆಡ್ಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
