ವಿಜಯಪುರ:ವಿದ್ಯಾವರ್ಧಕ ಸಂಘ ಬನ್ಸಿಲಾಲ್ ವಿಟ್ಟಲ್ ದಾಸ್ ದರ್ಬಾರ್ ಡಿಗ್ರಿ ಕಾಲೇಜ್ ಮಹಾವಿದ್ಯಾಲಯದಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನೆ ರೆಡ್ ಕ್ರಾಸ್ ಮತ್ತು ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಜಿಲ್ಲಾ ಏಡ್ಸ್ ನಿಯಂತ್ರಕ ಹಾಗೂ ಪ್ರತಿಬಂಧಕ ಘಟಕ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ಆರಾಧ್ಯ ದೈವರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಪುಣ್ಯ ಸ್ಮರಣೀಯ ನಿತ್ಯ ರಕ್ತದಾನ ಶಿಬಿರ ಕೈಗೊಳ್ಳಲಾಯಿತು ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಕೆ ದರ್ಬಾರ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾಲೇಜಿನ ಜಿಎಚ್ ಮಣ್ಣೂರ್ ಗುರುಗಳು ರಕ್ತದಾನದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು. ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿಯಾದ ಡಾಕ್ಟರ್ ನಮಿತಾ ಹೊನ್ನೂಟಗಿ ರಕ್ತದಾನ ಮಾಡುವುದರಿಂದ ಆಗುವ ಅನುಕೂಲಗಳ ಕುರಿತು ಮಾತನಾಡಿದರು ಡಿ ಎ ಪಿ ಸಿ ಯು ಜಿಲ್ಲಾ ಮೇಲ್ವಿಚಾರಕರಾದ ತಲ್ವಾರ್ ಸಂಸ್ಕೃತಿಕ ಕಾರ್ಯದರ್ಶಿ ಡ ಪ್ರೊ ಎಂ ಎಚ್ ಕೋಟ್ಯಾಳ್ ರಿಬ್ಬನ್ ಮುಖ್ಯಸ್ಥ ಪ್ರೊ ಭಾಸ್ಕರ ಮರಾಕಲ್ ಎನ್ಎಸ್ಎಸ್ ಘಟಕದ ಅಧಿಕಾರಿಯಾದ ಪ್ರೊ ರಾಜು ಕಪಾಲಿ ಸ್ವಾಗತಿಸಿದರು ಐ ಕ್ಯೂ ಎಸ್ ಸಿ ಮುಖ್ಯಸ್ಥ ಡಾಕ್ಟರ್ ಸುನಿಲ್ ಕುಮಾರ್ ಯಾದವ್ ವಂದಿಸಿದರು ಪ್ರೊ ಕಾಶಿನಾಥ್ ಕೊಣೆನವರ ಕಾರ್ಯಕ್ರಮ ನಿರೂಪಿಸಿದರು ಕುಮಾರಿ ವರ್ಣಿಮಾ ಪ್ರಾರ್ಥನಾ ಗೀತೆ ಹಾಡಿದರು ಪ್ರೊಫೆಸರ್ ಜಗದೀಶ್ ಸಾತಳ್ ದೈಹಿಕ ನಿರ್ದೇಶನ ಕಲಾವತಿ ಅಪರಾಜ್,ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತಿಯಲ್ಲಿದ್ದರು.
ವರದಿ-ಆಕಾಶ ಹೂಗಾರ ವಿಜಯಪುರ