ಕಲ್ಬುರ್ಗಿ:ಆಳಂದ ತಾಲೂಕಿನ ಹೀರೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯಲೋಪವೆಸಗಿದ ಪಿಡಿಓ ಅವರನ್ನು ಅಮಾನತ್ತುಗೊಳಿಸುವಂತೆ ಮತ್ತು ಆಂದೋಲಾ,ಆಲೂರು,ಹಿಪ್ಪರಗಾ (ಎಸ್ ಎನ್), ಸಾಥಖೇಡ ಗ್ರಾಮ ಪಂಚಾಯತಿಗಳಲ್ಲಿ ಅವ್ಯವಹಾರ ನಡೆಸಿದ ಭ್ರಷ್ಟ ಪಿಡಿಓ ಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯತ ಕಾರ್ಯಾಲಯದ ಎದುರುಗಡೆ ಹಮ್ಮಿಕೊಳ್ಳಲಾದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ದಿನಾಂಕ 9/1/2024ರಂದು 08 ನೇ ದಿನಕ್ಕೆ ಕಾಲಿಟ್ಟಿದೆ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಇದುವರೆಗೂ ಕ್ರಮ ಕೈಗೊಂಡಿರುವುದಿಲ್ಲ ಕಾಣದ ಕೈಗಳ ಕೈವಾಡ ಏನಾದರೂ ಇದೆಯೇ ಎಂಬುದು ಕೌತುಕದ ಸಂಗತಿಯಾಗಿದೆ ಇದಕ್ಕೆ ಸಂಬಂಧಪಟ್ಟ ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆಯವ್ರು ಹಾಗೂ ತಾಲೂಕಿನ ಶಾಸಕರು ಯಾವ ರೀತಿಯ ಶಿಸ್ತುಕ್ರಮ ಕೈಗಳುತ್ತಾರೆಯೋ ಕಾದು ನೋಡಬೇಕಾಗಿದೆ ತಪ್ಪು ಮಾಡಿದ ಭ್ರಷ್ಟರಿಗೆ ಶ್ರೀ ಕೃಷ್ಣನ ಜನ್ಮಸ್ಥಾನಕ್ಕೆ ಕಳಿಸುವ ವ್ಯವಸ್ಥೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾಡುತ್ತಾರೆಯೋ!ಇಲ್ಲವೋ ಗೊತ್ತಿಲ್ಲ ಹೋರಾಟಗಾರರಿಗೆ ನ್ಯಾಯ ಸಿಗುವರೆಗೂ ತಪಿತಸ್ತರಿಗೆ ಶಿಕ್ಷೆ ಆಗುವವರೆಗೂ ಜನರ ತೆರಿಗೆ ದುಡ್ಡು ಲೂಟಿ ಮಾಡಿ ಮೋಜು ಮಸ್ತಿ ಮಾಡಿದ ಭ್ರಷ್ಟರಿಗೆ ತಕ್ಕ ಶಾಸ್ತಿ ಆಗುವವರೆಗೂ ಈ ಸ್ಥಳವನ್ನು ಬಿಟ್ಟು ಕದಲುವುದಿಲ್ಲ ಎಂದು ಮುಖಂಡರಾದ ಶರಣಪರೆಡ್ಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.