ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಕ್ತರ ದುಶ್ಚಟ ಬೇಡುವ ಚಿತ್ತರಗಿ ಮಠ

ಚಿತ್ತರಗಿ ಶ್ರೀ ವಿಜಯ ಮಾಂತೇಶ್ವರ ಮಠ ಬಸವ ತತ್ವಗಳ ಭದ್ರಬುನಾದಿಯಾಗಿ ಸುಮಾರು ಶತಮಾನಗಳ ಇತಿಹಾಸನ ಹೊಂದಿದೆ 19ನೇ ಪೀಠಾಧಿಪತಿಗಳಾದ ಲಿಂಗೈಕ ಶ್ರೀ ಚಿತ್ತರಗಿ ವಿಜಯ ಮಾಂತೇಶ್ವರರು ಸಂಪೂರ್ಣ ಬಸವ ತತ್ವ ಜೀವನದುದ್ದಕ್ಕೂ ಮೈಗೂಡಿಸಿಕೊಂಡು ಬಸವ ಬೆಳಗು ಪತ್ರಿಕೆ ಪ್ರಾರಂಭಿಸಿ ಬಸವತತ್ವದಿಂದಲೇ ನಾಡಿನ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದರು ಮಠಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೆ ಕಠೋರವಾಗಿ ಮಾತನಾಡುವ ಬಸವ ತತ್ವದ ಪರಿಪಾಲಕರಾಗಿ ಲಿಂಗವನ್ನು ಕಟ್ಟಿಕೊಂಡರೆ ಮಾತ್ರ ನನ್ನ ದರ್ಶನಕ್ಕೆ ಬನ್ನಿ ಎಂದು ಭಕ್ತರಿಗೆ ಧೈರ್ಯದಿಂದ ಹೇಳುವಂತಹ ಅಪರೂಪದ ವಿಜಯ ಮಹಾಂತರು ಲಿಂಗು ಇಲ್ಲದೆ ದರ್ಶನಕ್ಕೆ ಬರುವ ಅದೆಷ್ಟೋ ಭಕ್ತರಿಗೆ ಲಿಂಗವ ಕಟ್ಟಿ ಲಿಂಗ ಪೂಜೆ ಹೇಗೆ ಮಾಡಬೇಕು ಎಂದು ಉಪದೇಶ ಹೇಳಿ ಕಳುಹಿಸುತ್ತಿದ್ದ ಬಸವ ತತ್ವದ ಪರಿಚಯಕರಾಗಿ ಬಸವ ತತ್ವದ ಬುನಾದಿಯೇ ತಮ್ಮ ಜೀವನದುದ್ದಕ್ಕೂ ಮೈಗೂಡಿಸಿಕೊಂಡು ಪಾಲನೆ ಮಾಡಿ ತೋರಿಸಿದರು ಮದುವೆ ಪೂಜೆಗೆ ತೆರಳುವ ಸಂದರ್ಭದಲ್ಲಿ ಭಕ್ತರ ಮನೆ ಬಸವ ತತ್ವ ನಿಷ್ಠೆ ಪರಿಪಾಲನೆ ಹೊಂದಿರಬೇಕು ಎನ್ನುವ ಆಶಾಭಾವ ಹೊಂದಿದ್ದ ಲಿಂಗೈಕ್ಯ ಚಿತ್ತರಗಿ ವಿಜಯ ಮಹಾಂತ ಸ್ವಾಮೀಜಿರವರು ತೆರಳುವ ಮದುವೆಗಳಲ್ಲಿ ವಧು-ವರರಿಗೆ ಅಕ್ಕಿಕಾಳು ಹೊಗೆಯುವಂತಿಲ್ಲ ಪೂಜೆ ಪುನಸ್ಕಾರ ಮಾಡುವಂತಿಲ್ಲ ಶ್ರೀಗಳು ತೆರಳುವ ಭಕ್ತರ ಮನೆಯಲ್ಲಿ ದೇವರ ಪೂಜೆ ಮಾಡುವಂತಿಲ್ಲ ಎನ್ನುವ ಕಟ್ಟಪಣ್ಣೆನಿಗೆ ಒಪ್ಪಿದರೆ ಮಾತ್ರ ನಿಮ್ಮ ಮನೆಗೆ ಬರುತ್ತೇನೆ ಎಂದು ನಿಷ್ಠುರವಾದಿಗಳಾಗಿ ಭಕ್ತರಿಗೆ ಹೇಳುವ ಧೈರ್ಯವಂತ ಏಕೈಕ ಸ್ವಾಮೀಜಿ ವಿಜಯಮಾಹಾಂತ ಶ್ರೀಗಳು ಬಸವ ತತ್ವ ಭಾವನೆಯ ಜೊತೆ ಜೊತೆಗೆ ರಾಜ್ಯ ಹಾಗೂ ಅಂತರಾಜ್ಯ ಸಂಚರಿಸಿ ಅನೇಕ ಸಭೆ ಸಮಾರಂಭ ಹಾಗೂ ಭಕ್ತರ ಮನೆ ಮನೆಗೆ ತೆರಳಿ ಕಾಣಿಕೆ ದುಡ್ಡು ದುಗ್ಗಾನಿ ನನಗೇನು ಬೇಡ ನೀವು ಮಾಡುವ ದುಶ್ಚಟ ಪಾಕೆಟ್ ಸಿಗರೇಟ್ ಗುಟ್ಕಾ ಚಿಟ್ ಗಳನ್ನು ನನ್ನ ಜೋಳಿಗೆಗೆ ಹಾಕಿ ಚಟ ಬಿಟ್ಟರೆ ಅದೇ ನನಗೆ ದೊಡ್ಡ ಕಾಣಿಕೆ ಎಂದು ಜನರ ದುಶ್ಚಟ ಬಿಡಿಸಿ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸಿದ ಅಪರೂಪದ ಸ್ವಾಮೀಜಿ ನಾಡಿನಾದ್ಯಂತ ಜನರ ದುಶ್ಚಟ ಬಿಡಿಸಲು ಭಕ್ತರಲ್ಲಿಗೆ ತೆರಳಿ ತಮ್ಮ ಜೋಳಿಗೆ ತುಂಬಾ ದುಶ್ಚಟ ತುಂಬಿಸಿದರು ಜನರ ದುಶ್ಚಟ ಬಿಡಿಸಲು ಪಣತೊಟ್ಟ ಜನರಿಗಾಗಿ ಸದ್ಗುಣ ತೋರಿದ ಮಹಾತ್ಮ ಮಹಾಂತರಾದರು ಮಠವನ್ನು ಬಸವ ತತ್ವದ ತಳದಿಯ ಮೇಲೆ ಇಳಕಲ್ ಮಠವನ್ನು ಎರಡನೆಯ ಅನುಭವ ಮಂಟಪ ಎನ್ನುವಷ್ಟರ ಮಟ್ಟಿಗೆ ಬಸವ ಬಸವ ತತ್ವದ ಮಠವನ್ನಾಗಿ ಪರಿವರ್ತನೆ ಮಾಡಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವಿಜಯ ಮಹಾಂತರು ತಮ್ಮ ಮುಂದಿನ ಪೀಠಾಧಿಪತಿ ನೇಮಕವಾಗುವ ಸಂದರ್ಭದಲ್ಲಿ ಕೆಲವು ಜನ ವಿರೋಧದ ಮಧ್ಯೆಯು ಸಮಾಜಕ್ಕೋಸ್ಕರ ಬಸವಣ್ಣನ ತತ್ವಗಳ ಪಾಲನೆ ಮಾಡುವ ಕಟಿ ಬದ್ಧಕ್ಕೆ ಬಿದ್ದು ಬಸವಣ್ಣನ ತತ್ವಗಳನ್ನು ಸಮಾಜದಲ್ಲಿ ಜಾರಿಗೆ ತರಬೇಕಲೇಬೇಕು ಎಂಬ ಉದ್ದೇಶಕ್ಕಾಗಿ ಪಟ್ಟಾಭಿಷೇಕದ ಸಂದರ್ಭದಲ್ಲಿ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಕೈವಾಡದಿಂದ ಕಲ್ಲುಗಳನ್ನು ತೂರಿದರೂ ಬಸವ ತತ್ವ ಪಾಲನೆ ಮಾಡುವ ಹಠ ನಿರ್ಧಾರವನ್ನು ಕೈ ಬಿಡಲಿಲ್ಲ ಇಂತಹ ಬಸವ ತತ್ವ ಆಚರಣೆಯಿಂದಲೇ ಇತಿಹಾಸದಲ್ಲಿಯೇ ಇಲಕಲ್ ಮಠವನ್ನು ಬಸವ ತತ್ವದ ಮಠವನ್ನಾಗಿ ಪರಿವರ್ತನೆ ಮಾಡಿದ್ದಾರೆ ದುಶ್ಚಟ ಬಿಡಿಸಲು ನಾಡಿನಾದ್ಯಂತ ಮಹಾಂತ ಜೋಳಿಗೆಯ ಹಾಕಿಕೊಂಡು ಸಂಚರಿಸಿ ಸಮಾಜದಲ್ಲಿ ಮಹತ್ವದ ಬದಲಾವಣೆ ಮಾಡಿದ ಶ್ರೀಗಳ ಸೇವೆ ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ವಿಜಯ ಮಹಾಂತರ ಜನ್ಮ ದಿನವನ್ನೇ ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಘೋಷಣೆ ಮಾಡಿ ಸಮಾಜದ ದುಶ್ಚಟ ಬಿಡಿಸಲು ಪಣ ತೊಟ್ಟಿದ್ದ ಸ್ವಾಮೀಜಿಗೆ ಸರ್ಕಾರ ಗೌರವ ಸಲ್ಲಿಸಿತು ಮಹಾಂತ ಸ್ವಾಮೀಜಿ ಹಾದಿಯಲ್ಲಿಯೇ ಕನಸಿನ ಕರುಣೆಯ ಕಂದರು ಗುರು ಹಾಕಿಕೊಟ್ಟ ಬಸವ ತತ್ವ ಆದರ್ಶಗಳ ಮೈಗೂಡಿಸಿಕೊಂಡ ಗುರುಮಹಾಂತ ಶ್ರೀಗಳು ಮಠವನ್ನು ಮುನ್ನಡೆಸಿಕೊಂಡು ಪೂರ್ಣ ಬಸವ ತತ್ವದ ಅನುಯಾಯಿಗಳಾಗಿ ಜೋಳಿಗೆ ಹಿಡಿದುಕೊಂಡು ರಾಜ್ಯಾದ್ಯಂತ ಸಂಚರಿಸಿ ಜನರ ದುಶ್ಚಟ ಬೇಡುವ ಪರಂಪರೆಯನ್ನು ಇವತ್ತಿನ ಆಧುನಿಕ ಯುಗದಲ್ಲಿ ಧುಚ್ಛಟ ಮಾಡುವ ಯುವಕರ ಪುರುಷರ ಕುಟುಂಬಗಳನ್ನು ದುಶ್ಚಟಗಳ ಮುಕ್ತ ಕುಟುಂಬ ದುಶ್ಚಟಗಳ ಮುಕ್ತ ಗ್ರಾಮ ಮಾಡಲು ಶ್ರಮಿಸುತ್ತಿದ್ದಾರೆ ದುಶ್ಚಟ ಎನ್ನುವುದು ಸಮಾಜಕ್ಕೆ ಮಾರಕವಾಗಿರುವುದನ್ನು ಮನಗೊಂಡ ಗುರುಮಾಹಾಂತರು ಭಕ್ತರ,ಜನರ ದುಶ್ಚಟ ಬಿಡಿಸುವ ಗೋಸ್ಕರ ಜೀವ ತ್ಯಾಗ ಮಾಡುತ್ತಿರುವ ದುಶ್ಚಟ ಬಿಡಿಸುವ ಶಪಥ ಮಾಡಿ ಸಾಧ್ಯವಾದಷ್ಟು ಮಟ್ಟಿಗೆ ಜನರಿಗೆ ಅಂಟಿರುವ ಮಾರಕವಾದ ರೋಗವೆಂದರೆ ಬಿಡಿ ಸಿಗರೇಟ್ ಮಧ್ಯಪಾನ ಕುಡಿಯುವುದು ಇಂತಹ ದುಶ್ಚಟ ಎಂಬ ರೋಗವನ್ನು ದೇಹದಿಂದ ತೆಗೆಯುವಂತೆ ತಾವು ತೆರಳುವ ಸಮಾರಂಭಗಳಲ್ಲಿ ಜನರಿಗೆ ಮನವರಿಕೆ ಮಾಡಿ ದುಚ್ಚಟ ಜೋಳಿಗೆಗೆ ಹಾಕಿ ಎಂದು ಜನರಿಂದ ದುಚ್ಛಟ ಭಿಕ್ಷೆ ಬೇಡುತ್ತಾರೆ ಚಟಗಾರರನ್ನು ದುಃಖದಿಂದ ಮುಕ್ತಗೊಳಿಸಿ ಮಠದ ಭಕ್ತರನ್ನಾಗಿ ಮಾಡಿ ಸಂಪೂರ್ಣ ಜೀವನ ಪರಿವರ್ತನೆಗಾಗಿ ಶ್ರಮಿಸುತ್ತಿರುವ ಇವತ್ತಿನ ಗುರು ಮಾಹಾಂತ ಶ್ರೀಗಳು ಆಧುನಿಕ ಕಾಲದ ದುಚ್ಛಟ ಮುಕ್ತ ಮಾಡಿಸುವ ಸ್ವಾಮೀಜಿ ಎಂದು ಹೆಸರವಾಸಿಯಾಗಿದ್ದಾರೆ ಇಂತಹ ಅಪರೂಪದ ಶ್ರೀಗಳು ಯಾವುದೇ ಸಭೆ ಸಮಾರಂಭಗಳಿಗೆ ಬಂದರೆ ಮೊದಲು ದೇಶ ಕಟ್ಟುವ ಯುವಕರ ಬಗ್ಗೆ ಯೋಚಿಸುತ್ತಾ ದುಶ್ಚಟ ಮಾಡುವ ಯುವಕರಲ್ಲಿಗೆ ಹೋಗಿ ತಮ್ಮ ಜೋಳಿಗೆಯಲ್ಲಿ ಭವತಿ ಭಿಕ್ಷಾಂದೇಹಿ ಎನ್ನುವಂತೆ ಭವತಿ ದುಶ್ಚಟ ಎಂದು ಬೇಡಿಕೊಳ್ಳುತ್ತಾರೆ ತಮ್ಮ ಜೋಳಿಗೆ ಯುವಕರಿಗೆ ಕೊಟ್ಟು ಯುವಕರು ದುಶ್ಚಟ ಬಿಟ್ಟರೆ ಕುಟುಂಬ ಉದ್ಧಾರವಾಗುತ್ತೆ ಓಣಿ,ಮನೆ,ಊರು,ಜಿಲ್ಲೆ ರಾಜ್ಯ ಹೀಗೆ ಇಡೀ ಸಮಾಜವೇ ಬದಲಾವಣೆ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಮನವರಿಕೆ ಮಾಡಿ ವಿನಂತಿಸಿಕೊಳ್ಳುತ್ತಾರೆ.
ತನ್ನ ಗುರು ಲಿಂಗೈಕರಾದ ನಂತರ ವಿಜಯಮಾಹಾಂತ ಶ್ರೀಗಳ ಹಾದಿಯಲ್ಲಿ ನಡೆಯುತ್ತಿರುವ 20ನೇ ಪೀಠಾಧಿಪತಿಗಳಾದ ಶ್ರೀ ಗುರು ಮಹಾಂತ ಸ್ವಾಮೀಜಿ ಬಸವ ತತ್ವದ ಪರಿಪಾಲಕರಾಗಿ ಬಸವ ತತ್ವ ಮೈಗೂಡಿಸಿಕೊಂಡು ತಾವು ತೆರಳುವ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಬಸವ ತತ್ವದ ಪಾಲನೆ ಮಾಡುತ್ತಾ ಬಸವತತ್ವದ ಅನುಯಾಯಿಗಳಾಗಿ ಬಸವ ತತ್ವ ಜಗತ್ತಿಗೆ ಸಾರುವಂತೆ ಮುನ್ನುಡಿ ಬರೆಯುತ್ತಿದ್ದಾರೆ ಬಸವ ತತ್ವ ಆಚರಣೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಶ್ರೀಗಳು ಸಹಿಸುವುದಿಲ್ಲ ನನ್ನ ಗುರುಗಳು ಬಸವ ತತ್ವ ನನಗೆ ರಕ್ತದ ಕಣಕಣದಲ್ಲೂ ಆವರಿಸಿ ಹೋಗಿದ್ದಾರೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ನಾನು ಬಸವ ತತ್ವ ಆಚರಣೆ ಹಾಗೂ ಸಮಾಜದ ಯುವಕರನ್ನು ದುಚ್ಛಟ ಬೀಡಿಸುವ ಹಟ ಎಂದೂ ಕುಗ್ಗುವುದಿಲ್ಲ ಎಂದು ವಾಗ್ದಾನದ ಮೂಲಕ ಪಟ್ಟಾಧಿಕಾರ ವಹಿಸಿಕೊಂಡಿರುವ ಗುರುಮಾಹಾಂತ ಶ್ರೀಗಳವರು ಲಿಂಗೈಕ ಚಿತ್ತರಗಿ ವಿಜಯಮಾಂತ ಶ್ರೀಗಳವರ ಕನಸುಗಳನ್ನು ಇವತ್ತಿನ ಸಮಾಜದಲ್ಲಿ ಸಾಕಾರ ಗೊಳಿಸುತ್ತಾ ದುಶ್ಚಟ ಬಿಡಿಸುವ ಹಠ ಮೈಗೂಡಿಸಿಕೊಂಡು ತಾವು ಹೋದ ಕಾರ್ಯಕ್ರಮಗಳಿಗೆಲ್ಲ ದುಶ್ಚಟ ಬಿಡಿಸುವ ಜೋಳಿಗೆ ತೆಗೆದುಕೊಂಡು ಹೋಗುವ ಶ್ರೀಗಳವರು ಯಾರಾದರೂ ದಾನ ಧರ್ಮ ಕಾಣಿಕೆ ದವಸ ಧಾನ್ಯಗಳನ್ನು ನೀಡಲು ಬಂದರೆ ನನಗೆ ಅವು ಯಾವು ಬೇಡ ನಿನ್ನಲ್ಲಿರುವ ದುಶ್ಚಟ ನನ್ನ ಜೋಳಿಗೆಗೆ ಹಾಕು, ಅದೇ ನನಗೆ ನೀವು ಕೊಡುವ ದೊಡ್ಡ ಕಾಣಿಕೆ ಎಂದು ಸಮಾಜದಲ್ಲಿ ಸಂಚಾರ ಮಾಡುತ್ತಾ ಸಮಾಜದಲ್ಲಿ ಯುವಕರು ದುಶ್ಚಟಗಳಿಂದ ಹಾಳಾಗಬಾರದು ಯುವಕರು ಕುಡಿತದಿಂದ ಕುಟುಂಬದ ಸದಸ್ಯರನ್ನು ಹೊಡೆಯುವದು ಬಡೆಯುವದಾಗಲಿ ಮಾಡದೆ ಸಮಾಜದ ಸ್ವಾಸ್ಥ ಕಾಪಾಡಿಕೊಂಡು ಜೀವನ ರೂಪಿಸಿಕೊಳ್ಳಲು ಮತ್ತು ನಿರ್ಮಿಸುವ ನಿಟ್ಟಿನಲ್ಲಿ ಶ್ರೀಗಳವರು ಆಗಲಿರುಳಎನ್ನದೆ ಯುವಕರ ಸಾರ್ವಜನಿಕರ ನಾಗರಿಕರ ದಚ್ಚಟ ದೂರ ಮಾಡಲು ಅವಿರತವಾಗಿ ಶ್ರಮಿಸುತ್ತಿರುತ್ತಾರೆ.ಈ ನಿಟ್ಟಿನಲ್ಲಿ ಗುರುಮಾಹಾಂತ ಶ್ರೀಗಳು ತಮ್ಮ ಮಠದ ಎಲ್ಲಾ ಶಾಖ ಮಠಗಳಲ್ಲೂ ಹಾಗೂ ಅಂಗ ಸಂಸ್ಥೆಗಳ ಪ್ರಮುಖ ದ್ವಾರಬಾಗಲುಗಳಲ್ಲಿ ಹಾಗೂ ಶಾಲಾ ಕಾಲೇಜುಗಳ ಮುಖ್ಯ ರಸ್ತೆಗಳಲ್ಲಿ ಮಹಾಂತ ಜೋಳಿಗೆ ಹಾಕಿರುತ್ತಾರೆ ದುಚ್ಛಟ ಮಾಡುವ ಯುವಕರು ಕುಡಿತದಿಂದ ಗುಟ್ಗಾ ಅಗಿಯುವದು ಸಿಗರೇಟ ಸೇದುವದರಿಂದ ಯಾವುದೇ ಕಾರಣಕ್ಕೂ ಜೀವ ಕಳೆದುಕೊಳ್ಳಬಾರದು ಎನ್ನುವ ಭವಿಷ್ಯದ ಚಿಂತೆಗಾಗಿ ಇವತ್ತಿನ ಯುವಕರೇ ನಾಳಿನ ದೇಶ ಸಾಗಿಸುವ ನಾಗರಿಕರಾಗುವ ಪ್ರಯುಕ್ತ ಈಗಿನಿಂದಲೇ ಯುವಕರು ದುಚ್ಚಟಗಳನ್ನು ತೊರೆದು ಸನ್ಮಾರ್ಗದಲ್ಲಿ ನಡೆಯಲಿ ಎನ್ನುವ ಉದ್ದೇಶದಿಂದ ತಮ್ಮ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಇಳಕಲ್ಲಿನ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮಹಾಂತ ಜೋಳಿಗೆ ಜೋಳಿಗೆ ಹಾಕಿ ಯುವಕರೆಲ್ಲರೂ ದುಷ್ಟ ಚಟಗಳನ್ನು ಬಿಟ್ಟು ಒಳ್ಳೆಯ ಸನ್ಮಾರ್ಗದವರಿಗೆ ನಡೆಯುವಂತೆ ಜೀವನ ರೂಪಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುವಂತೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮುಖ್ಯ ರಸ್ತೆಗಳಲ್ಲಿ ಜೋಳಿಗೆ ಇರುವುದರಿಂದ ದಿನಾಲು ಮಹಾಂತ ಜೋಳಿಗೆ ನೋಡುವ ಯುವಕರು ಪ್ರೇರಣೆಗೊಂಡಾದರೂ ದುಶ್ಚಟ ದೂರ ಮಾಡಲಿ ಎನ್ನುವ ದೂರ ದೃಷ್ಟಿಯಿಂದ ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವೊಂದು ಸಾರ್ವಜನಿಕ ಸ್ಥಳಗಳಲ್ಲಿ ಮಹಾಂತ ಜೋಳಿಗೆಯನ್ನು ಆಕೆ ಗೊತ್ತಿದ್ದು ಗೊತ್ತಿಲ್ಲದೆಯೋ ದುಶ್ಚಟ ಮಾಡುವ ಯುವಕ ಮಿತ್ರರು ತಿಳಿದೊ ತಿಳಿಲಾರದವೋ ತಮ್ಮ ಚಟಗಳನ್ನು ಜೋಡಿಗೆ ಹಾಕಿ ಹಾಕಿ ಚಟ ಮುಕ್ತರಾಗಿ ಬದುಕು ಸಾಗಿಸಿರಿ ಎಂಬ ಸಂದೇಶ ಸಾರುತ್ತ ನಾಡಿನಾದ್ಯಂತ ಸಂಚರಿಸುತ್ತಿದ್ದಾರೆ ಇಳಕಲ್ ನಗರದಲ್ಲಿ ಮಾಡಿರುವ ಜೋಳಿಗೆ ಅಭಿಯಾನ ಜಾಗೃತಿ ಇಡೀ ರಾಜ್ಯಾದ್ಯಂತ ಪಸರಿಸಿದರೆ ರಾಜ್ಯದ ಅದೆಷ್ಟೋ ಯುವಕರು ಶ್ರೀ ಗುರು ಮಾಹಾಂತರ ಮನವಿಗೆ ಪ್ರೇರಣೆಗೊಂಡು ಚಟಗಳಿಂದ ದೂರಾಗಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇವತ್ತಿನ ಆಧುನಿಕ ಯುಗದಲ್ಲೂ 12ನೇ ಶತಮಾನದಲ್ಲಿ ಆಗಿ ಹೋದ ಬಸವಣ್ಣನ ತತ್ವಗಳನ್ನು ಅತ್ಯಂತ ಕಠೋರವಾಗಿ ಕಟ್ಟಿಬದ್ಧವಾಗಿ ಆಚರಣೆ ಮಾಡುತ್ತಿರುವ ಮಠ ಯಾವುದಾದರೂ ಇದ್ದರೆ ಅದು ಚಿತ್ತರಗಿ ಶ್ರೀ ಲಿಂಗೈಕ್ಯ ವಿಜಯ ಮಾಂತೇಶ್ವರ ಮಠ ಎಂದರೆ ತಪ್ಪಾಗಲಾರದು ಇವತ್ತಿಗೂ ಪ್ರತಿಯೊಂದು ಬಸವ ತತ್ವ ಆಧಾರದ ಮೇಲೆ ಪಾಲನೆ ಮಾಡುವ ಗುರುಮಹಾಂತ ಶ್ರೀಗಳು ಪೂಜೆ ಹೋಮ ಹವನ ತಿರಸ್ಕರಿಸುವ ದೇವರಿಗೆ ಕುಂಕುಮ ವಿಭೂತಿ ಹಚ್ಚುವ ಪದ್ಧತಿಯಿಂದ ದೂರು ಉಳಿದಿರುವ ಹಾಗೂ ಯಾವುದೇ ವಸ್ತು ದೇವರ ಹೆಸರಿನಲ್ಲಿ ಹಾಳಾಗೋಬಾರದು ಎನ್ನುವ ಅಭಿಲಾಷೆ ಹೊಂದಿದ ಗುರು ಮಹಾಂತ ಶ್ರೀಗಳು ದೇವರ ಹೆಸರಿನಲ್ಲಿ ನಡೆಯುವ ಪೂಜೆ ಪುನಸ್ಕಾರ ಹೋಮ ಹವನ ಪ್ರಾಣಿ ಬಲಿಯಂತಹ ಪದ್ಧತಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ಶ್ರೀಗಳು ಬಸವ ತತ್ವ ಆಧಾರದ ಮೇಲೆಯೇ ಇವತ್ತಿನ ಆಧುನಿಕ ಯುಗದಲ್ಲಿ ಎಲ್ಲಾ ತಿಳಿದುಕೊಂಡವರಾಗಿದ್ದ ನಾವು ಪೂಜೆಗಳ ಹೆಸರಿನಲ್ಲಿ ವಸ್ತುಗಳನ್ನು ಹಾನಿ ಮಾಡುವುದಾಗಲಿ ಹಾಳು ಮಾಡುವುದಾಗಲಿ ಮಾಡಬಾರದು ಎಂದು ಜನರಿಗೆ ಹೇಳುತ್ತಾ ಬಂದಿದ್ದಾರೆ ನಾಗರ ಪಂಚಮಿಯಲ್ಲಿ ಜನರೆಲ್ಲರೂ ನಾಗಪ್ಪನಿಗೆ ಹಾಲು ಹಾಕಿ ಹಬ್ಬ ಆಚರಣೆ ಮಾಡಿದರೆ ಗುರು ಮಹಾಂತ ಶ್ರೀಗಳು ನಾಗರಪಂಚಮಿ ಹೆಸರಿನಲ್ಲಿ ಶ್ರೀಮಠದಲ್ಲಿ ಹಾಲು ಕುಡಿಯುವ ಹಬ್ಬ ಆಚರಣೆ ಮಾಡುತ್ತಾರೆ ಹಾಲನ್ನು ಜೀವ ಇಲ್ಲದ ನಾಗಪ್ಪನಿಗೆ ಹಾಕುವ ಬದಲು ನಮ್ಮ ಮಠಕ್ಕೆ ತಂದುಕೊಡಿ ನಾವು ಅದೇ ಹಾಲನ್ನು ಮಕ್ಕಳಿಗೆ ಕೊಡಿಸುತ್ತೇವೆ ಎಂದು ವಾಗ್ದಾನ ಮಾಡಿ ಪ್ರತಿ ನಾಗರ ಪಂಚಮಿ ದಿವಸ ಹಾಲು ಕುಡಿಯುವ ಹಬ್ಬವನ್ನಾಗಿ ಆಚರಣೆ ಮಾಡುವುದು ಈ ಮಠದ ಇನ್ನೊಂದು ವಿಶೇಷ ಇದೇ ರೀತಿ ಪ್ರತಿಯೊಂದು ವಿಷಯದಲ್ಲೂ ಬಸವ ತತ್ವ ಅನುಯಾಯಿಗಳಾಗಿ ಇಲಕಲ್ ಹಾಗೂ ಸುತ್ತಮುತ್ತ ಜನರು ಭಕ್ತರನ್ನು ಸಂಪೂರ್ಣ ಬಸವ ತತ್ವ ಆಚರಣೆ ಮಾಡುವಂತಹ ಮನೋಭಾವ ಜನರಲ್ಲಿ ಬೇರೂರುವಂತೆ ಮಾಡಿರುತ್ತಾರೆ ಇದೇ ನಿಟ್ಟಿನಲ್ಲಿ ನಮ್ಮ ನಗರ ನಮ್ಮ ಸುತ್ತಮುತ್ತಲಿರುವ ಜನರು ಅಷ್ಟೇ ದುಚ್ಚಟ ಬಿಟ್ಟರೆ ಸಾಲದು, ರಾಜ್ಯವನ್ನೇ ದುಶ್ಚಟ ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎನ್ನುವ ಕನಸು ಬೇಗನೆ ನನಸಾಗಲಿ ಎನ್ನುವ ಭಾವನೆ ಹೊಂದಿರುವ ಶ್ರೀಗಳು ದುಶ್ಚಟ ಬಿಡಿಸುವುದುಗೋಸ್ಕರ ಹಗಲಿರುಳು ಶ್ರಮಿಸುತ್ತಿರುವ ಏಕೈಕ ಸ್ವಾಮೀಜಿ ಗುರು ಮಹಾಂತರ ಶ್ರೀಗಳ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಎಲ್ಲರೂ ದುಚ್ಛಟ ಮಾಡುವ ನಿರ್ಧಾರ ಕೈಬಿಟ್ಟರೆ ಸರಕಾರಗಳು ತಾವೇ ತಯಾರಿಸುವ ದುಶ್ಚಟ ಪದಾರ್ಥಗಳನ್ನು ತಯಾರಿಸಿ ಜನರನ್ನು ದುಚ್ಚಟ ಮಾಡಲು ದಾರಿ ತೋರಿಸುತ್ತಿರುವ ಸರ್ಕಾರಕ್ಕೆ ಚಾಟಿ ಏಟು ಬೀಸಿದಂತಾಗುತ್ತದೆ

•••ಜಗದೀಶ.ಎಸ್.ಗಿರಡ್ಡಿ
ಹವ್ಯಾಸಿ ಬರಹಗಾರರು,9902470856.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ