ಮೌನವಾಗಿರು ಮನವೇ.. ಸಮಯ ನಿನ್ನ ಬೆನ್ನ ಹಿಂದೆಯೇ ಇದೆ.
ಇಂದಲ್ಲ ನಾಳೆ ನಿನ್ನೊಟ್ಟಿಗೆ ಬರುವುದು.
ಸಮಯವ ಸಾದಿಸು ನಿನ್ನ ದಾರಿಯೆಡೆಗೆ ನೀ.. ನಡೆ.
ಇದು ಸ್ವಾರ್ಥ ಪ್ರಪಂಚ ಇದ್ದಾಗ ಇರುವರು ನಿನ್ನೊಟ್ಟಿಗೆ
ಇಲ್ಲದಾಗ ಮಧ್ಯದಲ್ಲೇ ಕೈ ಬಿಡುವವರು.
ಬದುಕು ಜಟಕಾ ಬಂಡಿ…
ಬದುಕಬೇಕು ನೀನು ನೀನ್ನೊಳಗಿನ ಆತ್ಮವಾ ನಂಬಿ
ಬದುಕಬೇಕು ನೀನು ನಿನ್ನೊಳಗಿನ ಪ್ರತಿಭೆಯ ನಂಬಿ
ಯಾರಿಗೂ ಯಾರು ಇಲ್ಲ
ಎಲ್ಲವೂ ಇರುವುದು ನಿನ್ನೊಳಗೆ ಎಲ್ಲ.
ಸಾವಧಾನವಾಗಿ ನಡೆ
ಗೆಲುವು ನಿನ್ನದೇ…
ಬದುಕು ಜಟಕಾ ಬಂಡಿ…
ಜಾತ್ರೆ. …
ಕೆಲವರಿಗೆ… ದೇವರ ದರ್ಶನ ಮಾಡಿ ಮೋಜು ಮಸ್ತಿ ಮಾಡೋ ಸ್ಥಳವಾದರೆ ಇನ್ನೂ ಕೆಲವರಿಗೆ ಅದು ಒಂದು ಹೊತ್ತಿನ ಊಟದ ಬುತ್ತಿ ಯಾಗಿರುತ್ತದೆ..
ಇದೆ ಜೀವನ
ಜೀವನ ನಾವು ಅಂದುಕೊಂಡತ್ತೆ ಇಲ್ಲ
ಸೂತ್ರದಾರಿಯ ಆಡಿಸಿದಂತೆ ಆಡುವ ಪಾತ್ರಧಾರಿಗಳು ನಾವು ಅಷ್ಟೇ.
ಬದುಕು ಜಟಕಾ ಬಂಡಿ…
✍️ ನಾಗರಾಜ ದೇವಳಿ

