ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕುಖ್ಯಾತ ಮನೆ ಕಳ್ಳನ ಬಂಧಿಸುವಲ್ಲಿ ಯಶಸ್ವಿ, ನಿಟ್ಟುಸಿರು ಬಿಟ್ಟ ಕೆಂಭಾವಿ ಜನತೆ

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಸುತ್ತಮುತ್ತಲಿನ ಹಾಗೂ
ಹುಣಸಗಿ ತಾಲೂಕಿನ ಹಳ್ಳಿಗಳಲ್ಲಿ ಕಳ್ಳತನ ಹೆಚ್ಚಾಗಿತ್ತು. ಹಗಲು ರಾತ್ರಿ ಎನ್ನದೆ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಕೆಂಭಾವಿ ಪೊಲೀಸ್ ಠಾಣೆ ಹಾಗೂ ಹುಣಸಗಿ ವೃತ್ತದ ವ್ಯಾಪ್ತಿಯಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನದ ಪ್ರಕರಣ ದಾಖಲಾಗಿತ್ತು.ಈ ಪ್ರಕರಣವನ್ನು ಬೇಧಿಸಲು ಜಿ.ಸಂಗೀತಾ ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ ಹಾಗೂ ಧರಣೇಶ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ, ಜಾವೀದ್ ಇನಾಂದಾರ್ ಪೊಲೀಸ ಉಪ ಅಧೀಕ್ಷಕರು ಸುರಪುರ ಉಪವಿಭಾಗ ಮಾರ್ಗ ದರ್ಶನದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಂಡ ರಚಿಸಲಾಗಿತ್ತು.
ಸಚಿನ್ ಚಲವಾದಿ ಸಿಪಿಐ ಹುಣಸಗಿ ರವರ ನೇತೃತ್ವದಲ್ಲಿ ರಾಜಶೇಖರ ರಾಠೋಡ ಪಿ.ಎಸ್.ಐ (ಕಾ&ಸು) ಕೆಂಭಾವಿ ಠಾಣೆ,ವೆಂಕಣ್ಣ ಪಿ.ಎಸ್.ಐ ಕೆಂಭಾವಿ,ಮೋನಪ್ಪ ಎ.ಎಸ್.ಐ ಹಾಗೂ ಸಿಬ್ಬಂದಿ ಯವರನ್ನೊಳಗೊಂಡ ತಂಡ
ಜ.15 ರಂದು ಚಾಮನಾಳ ಕ್ರಾಸ್‌ದಲ್ಲಿ ಆರೋಪಿ ಅಣ್ಣಪ್ಪ ಅನೀಲ ತಂದೆ ಸಿದ್ದಪ್ಪ ಜೇರಟಗಿ ಸಾ: ಗೋಲಿಬಾರ್ ಮಡ್ಡಿ ಅವನನ್ನು ಬಂಧಿಸಿ,ಸಿಂದಗಿ ಪೊಲೀಸರು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ 7-8 ತಿಂಗಳಿನಿಂದ ವರದಿಯಾಗಿದ್ದ ಕೆಂಭಾವಿ ಠಾಣೆಯ 6 ಮನೆ ಹಗಲು ಕಳ್ಳತನ,ಕೊಡೆಕಲ್ ಠಾಣೆಯ 1-ಹಗಲು ಮನೆ ಕಳ್ಳತನ,ಸುರಪುರ ಠಾಣೆಯ 1-ರಾತ್ರಿ ಮನೆಕಳ್ಳತನ,ಗೋಗಿ ಠಾಣೆಯ 1-ಹಗಲು ಮನೆ ಕಳ್ಳತನ ಹೀಗೆ ಮನೆಕಳ್ಳತನ ಪ್ರಕರಣಗಳಲ್ಲಿ ಆರೋಪಿಯಿಂದ ಒಟ್ಟು 26 ತೊಲೆ ಬಂಗಾರದ ಆಭರಣಗಳು ಹಾಗೂ 1,78,000 ರೂಪಾಯಿ ನಗದು ಹಣ ಹೀಗೆ ಒಟ್ಟು-17,38,000 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಮತ್ತು ನಗದು ಹಣವನ್ನು ವಶಪಡಿಸಿಕೊಂಡು,ಅವನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಅಪರಾಧಿ ಪತ್ತೆ ಮಾಡಿದ ತಂಡದಲ್ಲಿ ಸಿ.ಪಿ.ಐ ಹುಣಸಗಿ ವೃತ್ತ ಪಿ.ಎಸ್.ಐ ಕೆಂಭಾವಿ,ಪಿ.ಎಸ್.ಐ ಕೆಂಭಾವಿ,ಎ.ಎಸ್.ಐ ಬಸನಗೌಡ,ಎ.ಎಸ್.ಐ, ಬಲರಾಮ ಹಾಗೂ ಪರಮಾನಂದ ಹೆಚ್.ಸಿ, ಬಸವರಾಜ ಪಿ.ಸಿ,ಹಣಮಂತ್ರಾಯ ಪಿ.ಸಿ,ಆನಂದ ಪಿ.ಸಿ,ಮಾಳಪ್ಪ ಪಿ.ಸಿ,ವಿಜಯನಂದ ಪಿ.ಸಿ ರವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ