ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ 2014 ಮತ್ತು 2019ರ ಲೋಕಸಭಾ ಚುನಾವಣೆ ವೇಳೆಯೇ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು.ಮೊದಲ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ,2016ರ ಜುಲೈ 19ರಂದು ಈ ಮಸೂದೆಯನ್ನು ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡನೆ ಮಾಡಿತ್ತು ಅದನ್ನು ಆ ವರ್ಷವೇ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು.
ಸಮಿತಿಯು 2019ರ ಜನವರಿಯಲ್ಲಿ ತನ್ನ ವರದಿ ನೀಡಿದ್ದು,ಅದರ ಮಾರನೇ ದಿನವೇ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿ ಪಾಸಾಗಿತ್ತು.ಆದರೆ ಆಗ ರಾಜ್ಯಸಭೆಯಲ್ಲಿ ಮಂಡನೆಯಾಗಿರಲಿಲ್ಲ ನಂತರ ಸರ್ಕಾರದ ಅವಧಿ ಮುಗಿಯಿತು. ಹೀಗಾಗಿ ಮಸೂದೆ ರದ್ದಾಯಿತು ಆದ್ದರಿಂದ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಮೇಲೆ ಎರಡನೇ ಬಾರಿ ಮಸೂದೆ ಮಂಡಿಸಲಾಗಿದೆ.ಅದನ್ನು ಡಿಸೆಂಬರ್ 9ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.ಇನ್ನು ರಾಜ್ಯಸಭೆಯಲ್ಲಿ ಕೂಡಾ ಅದನ್ನು ಅಂಗೀಕರಿಸಬೇಕಾಗಿದೆ.
ಕಾಯ್ದೆ ಜಾರಿಗೆ ಕಾರಣವಾದರೂ ಏನು:
ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಿಂದ ದೇಶದಲ್ಲಿರುವ ಅಕ್ರಮ ಬಾಂಗ್ಲಾ ಇಸ್ಲಾಂ ಧರ್ಮದ ವಲಸಿಗರನ್ನು,ರೋಹಿಂಗ್ಯಾ ಮುಸಲ್ಮಾನರನ್ನು ದೇಶದಿಂದ ಹೊರಹಾಕುವ ಸಲುವಾಗಿ “ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ”ಯನ್ನು ಜಾರಿಗೆ ತಂದಿದೆ. ಒಂದು ಅಂದಾಜಿನ ಪ್ರಕಾರ ಬಾಂಗ್ಲಾದೇಶ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಭಾರತಕ್ಕೆ ಬಂದು ನೆಲೆಸಿರುವ ನಿರಾಶ್ರಿತರ ಸಂಖ್ಯೆ ಬರೋಬ್ಬರಿ 20 ಲಕ್ಷಕ್ಕೂ ಅಧಿಕ. ಹೀಗೆ ಅಕ್ರಮವಾಗಿ ದೇಶಕ್ಕೆ ನುಸುಳಿದವರು ಇದೀಗ ದೇಶದ ನಾನಾಮೂಲೆಗಳಲ್ಲಿ ನೆಲೆಸಿದ್ದಾರೆ.
ಆದರೆ,ಈ ಅಕ್ರಮ ವಲಸಿಗರಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಹಿಂದೂಗಳು ಹಾಗೂ ಬೌದ್ಧರೂ ಇದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯ ಪ್ರಕಾರ ಇವರೆಲ್ಲ ಇದೀಗ ಭಾರತವನ್ನು ತ್ಯಜಿಸುವುದು ಅನಿವಾರ್ಯ.ಆದರೆ, ಎನ್ಆರ್ಸಿ ಕಾಯ್ದೆಯ ಮೂಲಕ ಹಿಂದೂಗಳನ್ನು ದೇಶದಿಂದ ಹೊರಗೆ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಸುತಾರಾಂ ಇಷ್ಟವಿಲ್ಲ. ಇದೇ ಕಾರಣಕ್ಕೆ ಹಿಂದೂಗಳನ್ನು ದೇಶದಲ್ಲೇ ಉಳಿಸಿಕೊಂಡು ಮುಸ್ಲೀಮರನ್ನು ಮಾತ್ರ ದೇಶದಿಂದ ಗಡಿಪಾರು ಮಾಡುವ ಸಲುವಾಗಿ ಕೇಂದ್ರ ಸರ್ಕಾರ “ಪೌರತ್ವ ತಿದ್ದುಪಡಿ ಮಸೂದೆ”ಯನ್ನು ಜಾರಿಗೆ ತರಲು ಮುಂದಾಗಿದೆ ಎನ್ನಲಾಗುತ್ತಿದೆ.
ಈ ಮಸೂದೆಯಲ್ಲಿ ನಿರಾಶ್ರಿತರು ಅಕ್ರಮವಾಗಿ ದೇಶ ಪ್ರವೇಶ ಮಾಡಿದ್ದರೂ ಕೇವಲ ನೆರೆ ರಾಷ್ಟ್ರದ ಅಲ್ಪ ಸಂಖ್ಯಾತರಾದರೆ ಸಾಕು ಎಂಬ ನಿಯಮ ಬರೋಬ್ಬರಿ 5 ರಿಂದ 6 ಲಕ್ಷ ಹೆಚ್ಚುವರಿ ಹಿಂದೂ ನಿರಾಶ್ರಿತರನ್ನು ದೇಶದಲ್ಲೇ ಉಳಿಸಲಿದೆ. ಇದೇ ಕಾರಣಕ್ಕೆ ಈ ಮಸೂದೆ ಮುಸ್ಲೀಂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂಬುದು ಭಾರತೀಯ ಅಲ್ಪ ಸಂಖ್ಯಾತ ಸಮುದಾಯದ ಮೊದಲ ಆರೋಪ.
ಪರವಾದ :
ಮುಸ್ಲಿಂ ಪ್ರಧಾನ ರಾಷ್ಟ್ರಗಳಲ್ಲಿದ್ದ ಅಲ್ಪಸಂಖ್ಯಾತರು ಅಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದಿದ್ದಾರೆ.ದೆಹಲಿ,ರಾಜಸ್ಥಾನ ಸೇರಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಮೇಲಿನ ಮೂರು ರಾಷ್ಟ್ರಗಳಿಂದ ವಲಸೆ ಬಂದ ಹಿಂದು,ಸಿಖ್,ಜೈನ, ಬೌದ್ಧ,ಪಾರ್ಸಿ,ಕ್ರಿಶ್ಚಿಯನ್ ಧರ್ಮದವರಿದ್ದು,ಅವರ ಬದುಕು ತೀವ್ರ ಸಂಕಷ್ಟದಲ್ಲಿದೆ.ನಾಲ್ಕೈದು ವರ್ಷಗಳ ಹಿಂದೆ ಅವರೆಲ್ಲರೂ ಧರಣಿ ನಡೆಸಿ ತಮ್ಮನ್ನು ಭಾರತದ ಶಾಶ್ವತ ಪ್ರಜೆಗಳನ್ನಾಗಿ ಮಾಡಿ ಎಂದು ಮನವಿ ಕೂಡ ಮಾಡಿದ್ದರು.
ಆದರೆ ಭಾರತದಲ್ಲಿ ಎಷ್ಟುಪ್ರಮಾಣದಲ್ಲಿ ಅಕ್ರಮ ವಲಸಿಗರಿದ್ದಾರೆ ಎಂಬ ಬಗ್ಗೆ ಸ್ಪಷ್ಟಅಂಕಿ-ಅಂಶಗಳಿಲ್ಲ. ಆದರೆ,ಮೂರೂ ದೇಶಗಳಿಂದ ಬಂದ ಅಕ್ರಮ ವಲಸಿಗರಲ್ಲಿ ಬಹುಪಾಲು ಇಸ್ಲಾಂ ಧರ್ಮದವರೇ ಇದ್ದಾರೆ. ಅಕ್ರಮ ವಲಸಿಗರು ಮಸ್ಲಿಮರಾಗಿದ್ದರೆ ಅವರಿಗೆ ಅವರ ದೇಶದಲ್ಲಿ ಇಸ್ಲಾಂ ಧರ್ಮವೇ ಬಹುಸಂಖ್ಯಾತ ಧರ್ಮವಾದ್ದರಿಂದ ಅಲ್ಲಿಗೆ ಹೋಗಿ ಬದುಕಲು ಯಾವುದೇ ತೊಂದರೆಯಿಲ್ಲ. ಆದರೆ, ಅಕ್ರಮ ವಲಸಿಗರು ಇತರ ಧರ್ಮದವರಾಗಿದ್ದರೆ ಅವರಿಗೆ ಅವರ ದೇಶಕ್ಕೆ ಮರಳಿ ಹೋಗಿ ಬದಕಲು ಆಗುವುದಿಲ್ಲ. ಅವರು ಮೊದಲೇ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಆಶ್ರಯ ಕೇಳಿ ಬಂದಿರುತ್ತಾರೆ ಎಂಬುದು ಕೇಂದ್ರ ಸರ್ಕಾರದ ನಿಲುವು.
ವಿರೋಧ ವಾದ :
ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟಿರುವುದು ಅಥವಾ ಧರ್ಮದ ಆಧಾರದ ಮೇಲೆ ಪೌರತ್ವ ನೀಡುತ್ತಿರುವುದು ಈ ತಿದ್ದುಪಡಿ ವಿರೋಧಕ್ಕೆ ಮೊದಲ ಕಾರಣ. ಇದು ಸಂವಿಧಾನದ 14ನೇ ವಿಧಿ (ಸಮಾನತೆ)ಯನ್ನು ಉಲ್ಲಂಘಿಸುತ್ತದೆ. ಭಾರತ ಜಾತ್ಯತೀತ ರಾಷ್ಟ್ರ. ಹಾಗಾಗಿ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸುತ್ತಿವೆ.
ಹಾಗೆಯೇ ಕೇಂದ್ರ ಸರ್ಕಾರ ನೆರೆಯ ರಾಷ್ಟ್ರಗಳಿಂದ ಕಿರುಕುಳ ಅನುಭವಿಸಿ ವಲಸೆ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ಈ ತಿದ್ದುಪಡಿ ಮಸೂದೆಯು ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳನ್ನು ಮತ್ತು ಎಲ್ಲಾ ನೆರೆಯ ರಾಷ್ಟ್ರಗಳನ್ನು ಒಳಗೊಂಡಿಲ್ಲ. ಪಾಕಿಸ್ತಾನದಲ್ಲಿ ಅಹ್ಮದಿಯಾ ಮತ್ತು ಶಿಯಾ ಮುಸ್ಲಿಂ ಸಮುದಾಯಗಳೂ ತಾರತಮ್ಯ ಅನುಭವಿಸುತ್ತಿವೆ. ಬರ್ಮಾದಲ್ಲಿ ರೋಹಿಂಗ್ಯಾ ಮುಸ್ಲಿಮರು ಮತ್ತು ಹಿಂದುಗಳು ಕಿರುಕುಳ ಅನುಭವಿಸುತ್ತಿದ್ದಾರೆ. ಶ್ರೀಲಂಕಾದಲ್ಲಿ ಹಿಂದುಗಳು, ಕ್ರಿಶ್ಚಿಯನ್ನರು ಮತ್ತು ತಮಿಳರು ತಾರತಮ್ಯ ಅನುಭವಿಸುತ್ತಿದ್ದಾರೆ ಎಂಬುದು ಇನ್ನೊಂದು ವಾದ.
ಪ್ರತಿವಾದ ವಿರೋದ ವಾದಗಳ ನಡುವೆ ಪೌರ್ವ ಮಸೂದ ಕಾಯ್ದೆಯಾಗಿ ಜಾರಿಗೆ ಬಂದಿದೆ..ಬಾರದ ದೇಶದ ಸಂವಿಧಾನಾತ್ಮಕ ಕಾನೂನಿನ್ವಯ ಬದುಕಬೇಕಾದ್ದು ನಮ್ಮ ಆಧ್ಯ ಕರ್ತವ್ಯ..ಕಾನೂನನ್ನು ಪಾಲಿಸೋಣ..ಧೇಶದ ಸಂವಿಧಾನಕ್ಕೆ ತಲೆಬಾಗೋಣ
ಲೇಖಕಿ-ನೇತ್ರಾ ರುದ್ರಾಪೂರಮಠ