ಹನೂರು:ತಾಲೂಕಿನ ಕಾಡಂಚಿನ ಗ್ರಾಮಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿದ ಸಂದರ್ಭದಲ್ಲಿ ಹೂಗ್ಯಂ ನಿಂದ ಜಲ್ಲಿಪಾಳ್ಯಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಚರಂಡಿ ತುಂಬಿ ಗಬ್ಬೆದ್ದು ನೀರು ನಿಂತಿರುವುದು ಮತ್ತು ಕಸದ ರಾಶಿ ಬಿದ್ದಿರುವುದನ್ನು ಕಂಡು ಹನೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ರವರಿಗೆ ಶಾಸಕರು ತರಾಟೆಗೆ ತೆಗೆದುಕೊಂಡರು ಹಾಗೂ ಸ್ಥಳೀಯ ಸಾರ್ವಜನಿಕರು ಗ್ರಾಮ ಪಂಚಾಯತ್ ವಿರುದ್ಧ ಶಾಸಕರಿಗೆ ದೂರಿದ್ದಾರೆ ನಮ್ಮ ಪಂಚಾಯತ್ ನಲ್ಲಿ ಕಸ ವಿಲೇವಾರಿ ವಾಹನ ಕಳೆದ 1 ವರ್ಷದಿಂದ ಕೆಟ್ಟು ನಿಂತಿದೆ ಗ್ರಾಮ ಪಂಚಾಯತ್ ನವರು ಬೇಜವಾಬ್ದಾರಿತನ ತೋರುತ್ತಿದ್ದಾರೆ ಹಾಗೂ ಗ್ರಾಮದ ಸ್ವಚ್ಛತೆ ಬಗ್ಗೆ ಕಾಳಜಿ ಇಲ್ಲ ಕಸ ಅಲ್ಲಲ್ಲೇ ಬಿದ್ದು ಕೊಳೆಯುತ್ತಿದೆ ವಿದ್ಯುತ್ ಕಂಬಗಳಿಗೆ ಎಷ್ಟು ಬಾರಿ ಹೇಳಿದರೂ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿಲ್ಲ ಬೇಕಾ ಬಿಟ್ಟಿ ಕೆಲಸ ಮಾಡಿ ಹೋಗುತ್ತಿದ್ದಾರೆ ಎಂದು ಶಾಸಕ ಮಂಜುನಾಥ್ ರವರಿಗೆ ಆರೋಪಿಸಿದರು ಶಾಸಕ ಮಂಜುನಾಥ್ ಪಕ್ಕದಲ್ಲೇ ಇದ್ದ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ರವರನ್ನು ತರಾಟೆಗೆ ತೆಗೆದುಕೊಂಡು ಶೀಘ್ರದಲ್ಲೇ ಗ್ರಾಮ ಸ್ವಚ್ಛತೆಯಾಗಬೇಕು ಹಾಗೂ ನೂತನವಾಗಿ ಚರಂಡಿ ನಿರ್ಮಾಣ ಮಾಡಲು ಆಕ್ಷನ್ ಪ್ಲಾನ್ ನಲ್ಲಿ ಸೇರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಹೂಗ್ಯಂ ಪಂಚಾಯತಿ ಅಧ್ಯಕ್ಷ ಮುರುಗೇಶ್,ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳೀಯ ಮುಖಂಡರುಗಳು ಸಾರ್ವಜನಿಕರು ಉಪಸ್ಥಿತರಿದ್ದರು .
ವರದಿ:ಉಸ್ಮಾನ್ ಖಾನ್