ಬಸವಕಲ್ಯಾಣ:ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಕಲಬುರಗಿ ಜಿಲ್ಲೆಯ ಕೊಟನೂರ್ (ಡಿ) ಯಲ್ಲಿ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣವೆ ಪೊಲೀಸ ಇಲಾಖೆಯು ಬಂಧಿಸುವಲ್ಲಿ ವಿಫಲವಾದರೆ ಇದೇ ಜನವರಿ 25 ರಂದು ಬಸವಕಲ್ಯಾಣ ನಗರ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ದಲಿತ ಮುಖಂಡ ಹಾಗೂ ಮಾನವ ಬಂಧುತ್ವ ವೇದಿಕೆಯ ತಾಲೂಕ ಸಂಚಾಲಕರಾದ ಪಿಂಟು ಕಾಂಬಳೆ ಎಚ್ಚರಿಸಿದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶದ ಸಂವಿಧಾನವನ್ನು ಬರೆದು ಎಲ್ಲಾ ಜಾತಿಯ ಜನಾಂಗದವರಿಗೆ ಬದುಕಿನ ದಾರಿ ಕಲ್ಪಿಸಿಕೊಟ್ಟಿದ್ದಾರೆ ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆಗೆ ಕಿಡಿಗೇಡಿಗಳು ಅವಮಾನ ಮಾಡಿರುವುದು ಬೇಸರದ ಸಂಗತಿಯಾಗಿದೆ.ಇಂತಹ ಘಟನೆಗಳು ಇಡೀ ದೇಶಕ್ಕೆ ಅವಮಾನ ಉಂಟು ಮಾಡುತ್ತವೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಗುಂಪು ಮತ್ತು ಕಿಡಿಗೇಡಿಗಳು ಪದೇ ಪದೇ ಮಹಾತ್ಮರ ಪ್ರತಿಮೆಗಳಿಗೆ ಅವಮಾನಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಇಂತಹ ಕಿಡಿಗೇಡಿಗಳನ್ನು ಸರ್ಕಾರ ತಕ್ಷಣ ಕಡಿವಾಣ ಹಾಕಿ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಮಹಾತ್ಮರ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಒಂದು ವೇಳೆ ಪೊಲೀಸ ಇಲಾಖೆಯು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾದರೆ ದಿನಾಂಕ: 25/01/2024 ರಂದು ವಿವಿಧ ದಲಿತ ಸಂಘಟನೆಗಳ ವತಿಯಿಂದ ಬಸವಕಲ್ಯಾಣ ನಗರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ವರದಿ: ಸಂದೀಪ್ ಕುಮಾರ್