ಹನೂರು:ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರ ಮಕ್ಕಳನ್ನು ಲಾಲನೆ ಪಾಲನೆ ಮಾಡಲು ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಸ್ಥಾಪಿಸಿರುವ ಕೂಸಿನ ಮನೆ ಕೇಂದ್ರವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ತಾಲ್ಲೂಕಿನ ಹಳೆ ಮಾರ್ಟಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಮಿ೯ಸಿರುವ ಕೂಸಿನ ಮನೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕೂಸಿನ ಮನೆ ಕಾರ್ಯಕ್ರಮ ಸರ್ಕಾರದ ಒಂದು ಮಹತ್ತರ ಯೋಜನೆಯಾಗಿದ್ದು ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಡಿ ಕೂಲಿ ಕಾರ್ಮಿಕರಾಗಿ ಕೆಲಸ ನಿವಾ೯ಹಿಸುವ ಜನರು ಕೂಸಿನ ಮನೆ ತಮ್ಮ ಮಕ್ಕಳನ್ನು ಬಿಟ್ಟು ಕೆಲಸ ಮಾಡಬಹುದು ಮಕ್ಕಳ ಲಾಲನೆ ಪಾಲನೆ ಪಂಚಾಯ್ತಿ ನೋಡಿಕೊಳ್ಳಲಿದೆ ಹಾಗಾಗಿ ಎಲ್ಲಾ ವಗ೯ದ ಕೂಲಿ ಕಾಮಿ೯ಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ನರೇಗಾದಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯರು ಮೂರು ವರ್ಷದೊಳಗಿನ ಮಕ್ಕಳನ್ನು ಪೋಷಣೆ ಮಾಡಲು ಕೂಸಿನ ಮನೆಯನ್ನು ತೆರೆಯಲಾಗಿದೆ ಆ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸಲು ಈ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಮಹಿಳೆಯರು ಹೆಚ್ಚು ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಶಯದಿಂದ ಅವರ ಮಕ್ಕಳನ್ನು ನೋಡಿಕೊಳ್ಳಲು ತಮ್ಮ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೇರ್ ಟೇಕರ್ಸ್ಗಳನ್ನು ನೇಮಿಸಲಾಗಿದೆ ಯಾವುದೇ ತೊಂದರೆ ಆಗದಂತೆ ಈ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಬೇಕು ಎಂದು ಶಾಸಕರು ತಿಳಿಸಿದರು.
ಈ ವೇಳೆಯಲ್ಲಿ ತಾ.ಪಂ. ಇಓ ಉಮೇಶ್ ನರೇಗಾ ಸಹಾಯಕ ನಿದೇ೯ಶಕ ರವೀಂದ್ರ ಗ್ರಾ.ಪಂ.ಪಿಡಿಓ ಶಿವಣ್ಣ,ಕಾಯ೯ದಶಿ೯ ನಾಗರಾಜು,ಅಧ್ಯಕ್ಷರು,ಉಪಾಧ್ಯಕ್ಷರು_ಸದಸ್ಯರುಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್