ರಬಕವಿ-ಬನಹಟ್ಟಿ:ರಬಕವಿಯ ಬಾಲಕಿಯರ ಪ್ರೌಢಶಾಲೆ ಲಿಂಗೈಕ್ಯ ಶ್ರೀಮತಿ ಸಿದ್ದವ್ವತಾಯಿ ಮಡಿವಾಳಪ್ಪ ಪಟ್ಟಣ ಅವರ 41 ನೇ ಪುಣ್ಯ ಸ್ಮರಣೋತ್ಸವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನವನ್ನು 26.01.24 ರಂದು ಸಂಜೆ 5.00 ಗಂಟೆಗೆ ಉದ್ಘಾಟಿಸಿ ಮಾತನಾಡುತ್ತಾ,ಬಾಳೆಯ ಎಲೆ ಮೇಲೆ ಮುಳ್ಳ ಬಿದ್ರು,ಮುಳ್ಳ ಮೇಲೆ ಬಾಳೆಯ ಎಲೆಬಿದ್ರು ಹಾಳಾಗುವುದು ಬಾಳೆ ಎಲೆಯ ಹಾಗೂ ಹಿರಿಯರ ಮಾತು ಕೇಳಿ ನೀವು ಕಲಿತ ಶಾಲೆಗೂ ಮನೆಯ ಹಿರಿಯರಿಗೆ ಕೀರ್ತಿ ತರಬೇಕು ಮತ್ತು “ನೀವೆಲ್ಲರೂ ಬಾಲಕಿಯರು ಯಾವುದು “ಬ್ಯಾಡ್ ಟಚ್,ಗುಡ್ ಟಚ್ ಬಗ್ಗೆ ಅರಿವಿರಲಿ ಎಂದು ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಢಾ.ಸಪ್ನಾ ಎಸ್.ಅನಿಗೊಳ ಹೇಳಿದರು,ಇನ್ನೋರ್ವ ಅತಿಥಿಗಳು ಶಾಲೆಯ ಹಳೆ ವಿದ್ಯಾರ್ಥಿನಿ ಬೆಂಗಳೂರಿನ ಕೋರಮಂಗಲದಲ್ಲಿ ಪಿ.ಎಸ್. ಐ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಜ್ಯೋತಿ ತ.ಉದಪುಡಿ ರವರು ಮಾತನಾಡಿ ಎಲ್ಲಾ ಬಾಲಕಿಯರು ಸಾಧನೆ ಮಾಡುವತ್ತ ಗಮನ ಹರಿಸಬೇಕು ಯಾವುದೇ ಕಠಿಣ ಸಂದರ್ಭದಲ್ಲಿ ತಾವು ಯಾವುದೇ ಸಂಕೋಚವಿಲ್ಲದೆ ಪೊಲೀಸ್ ಸಹಾಯವಾಣಿ 112 ನ್ನು ಉಪಯೋಗಿಸಬೇಕು ಪೊಲೀಸರು ನಿಮ್ಮ ಗೆಳತಿಯಂತೆ ಸಮಸ್ಯೆ ಬಗೆಹರಿಸಿ ಕೊಡುವರು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಸಂಘದ ಚೇರ್ ಮನ್ ಶ್ರೀ ಬಿ.ಎನ್.ದುರಡಿ,ಶ್ರೀ ಎ.ಕೆ. ಬಸಣ್ಣವರ,ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಮೇಶ ಅವಟಿ ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಶ್ರೀಶೈಲ ಬರ್ಲಿ ECO ಮತ್ತು ನೋಡಲ್ ಅಧಿಕಾರಿಗಳು ಜಮಖಂಡಿ ಮತ್ತು ನೆದೇಶಕರು,ಶಿಕ್ಷಕರು,ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ:ಆನಂದ ಮ.ಹೂಗಾರ