ಕಲಬುರಗಿ:ಒಂದು ದೇಶ ರಾಷ್ಟ್ರವಾಗಬೇಕಾದರೆ ರಾಜಕೀಯ ರಚನೆ ಅತಿ ಅವಶ್ಯ,ಭಾರತ 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಮಹಿಳಾ ಶಿಕ್ಷಣದಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಸ್ಥಳೀಯ ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ.ಅಲಿ ರಜಾ ಮೂಸ್ವಿ ಹೇಳಿದರು.
ಅವರು ಕೆಬಿಎನವಿವಿಯ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕೆಬಿಎನ್ ವಿವಿಗೆ ಭೇಟಿ ನೀಡಿದಾಗ ಮಹಿಳಾ ಸಿಬ್ಬಂದಿ ಶೇ 50 ಕ್ಕೂ ಹೆಚ್ಚು ಇರುವುದನ್ನು ಶ್ಲಾಘಸಿದ್ದನ್ನು ಸ್ಮರಿಸಿದರು ಅಚ್ಚು ಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸದ್ದಕ್ಕೆ ಕಲಾ ಭಾಷಾ ಮಾನವೀಕತೆ,ಸಮಾಜ ವಿಜ್ಞಾನ,ಶಿಕ್ಷಣ ಹಾಗೂ ವಿಜ್ಞಾನ ನಿಕಾಯವನ್ನು ಅಭಿನಂದಿಸಿದರು.
ಸ್ವಾತಂತ್ರದ ದ್ಯೋತಕವಾಗಿ ಪಾರಿವಾಳಗಳನ್ನು ಹಾರಿಬಿಡಲಾಯಿತು.
ಸಯ್ಯದ್ ಅಕ್ಬರ್ ಹುಸ್ಸೇನಿ ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರೆ ಕಲಾ,ಭಾಷಾ ಮಾನವೀಕತೆ,ಸಮಾಜ ವಿಜ್ಞಾನ,ವಿಜ್ಞಾನ ನಿಕಾಯದ ವಿದ್ಯಾರ್ಥಿಗಳಿಂದ ಸ್ಕಿಟ್ ಪ್ರದರ್ಶಿಸಿದರು.
ವಿದ್ಯಾರ್ಥಿನಿ ಫರೀಹಾ ಮೇಹ್ವಿನ್ ಸ್ವಾಗತ ಮಾಡಿದರೆ,
ಸುಫಿಯಾನ್ ಖಾದ್ರಿ ಮತ್ತು
ಶಹನಾಜ ಸುಲ್ತಾನ ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಭಾಷಣ ಮಾಡಿದರು.
ವಿದ್ಯಾರ್ಥಿನಿ ಸುಮಿತ್ರಾ ದೇಶ ಭಕ್ತಿ ಗೀತೆ ಪ್ರಸ್ತುತ ಪಡಿಸಿದರೆ ರುಕೈಯ್ಯ ರಫಾ ವಂದಿಸಿದರು.ಭಾಷಾ ನಿಕಾಯದ್ ಸಹಾಯಕ್ ಪ್ರಾಧ್ಯಾಪಕರಾದ
ಸಫಿ ಮತ್ತು ಡಾ.ಅತಿಉಲ್ಲ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಮೆಡಿಕಲ್ ಡೀನ್ ಡಾ.ಸಿದ್ದೇಶ್, ಇಂಜಿನಿಯರ ಡೀನ್ ಡಾ ಅಜಾಮ,ಕಲಾ,ಭಾಷಾ, ಮಾನವೀಕತೆ,ಸಮಾಜ ವಿಜ್ಞಾನ ಮತ್ತು ವಿಜ್ಞಾನ, ಶಿಕ್ಷಣ,ಕಾನೂನು ಡೀನ್ ಡಾ.ನಿಶಾತ್ ಅರಿಫ್ ಹುಸ್ಸೇನಿ,ರಿಸರ್ಚ್ ಡೀನ್ ಡಾ.ರಾಜಶ್ರೀ ಪಾಲದಿ,ಐ ಕ್ಯೂ ಎ ಸಿ ನಿರ್ದೇಶಕ ಡಾ.ಅಬ್ದುಲ್ ಬಸೀರ್, ಮೆಡಿಕಲ್ ಸುಪರಿಟೆಂಡೆಂಟ್ ಡಾ.ಸಿದ್ಧಲಿಂಗ ಚೆಂಗ್ಟಿ, ಡಾ ನಜಿರ್ ಅಹ್ಮದ್,ಡಾ ಮೈನುದ್ದಿನ್,ವಿವಿಯ ಸಮಸ್ತ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
-ಅಪ್ಪಾರಾಯ ಬಡಿಗೇರ