ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದ ಶ್ರೀ ಸಿದ್ದರಾಮ ಸ್ವಾಮೀಜಿ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 75 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಮಾರಂಭದ ಘನ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಶಂಭುಲಿಂಗ ವಿರಕ್ತಮಠ ಸ್ವಾಮೀಜಿಗಳು ವಹಿಸಿಕೊಂಡಿದ್ದರು. ಧ್ವಜಾರೋಹಣವನ್ನು ಸಂಸ್ಥೆಯ ಹಿರಿಯರಾದ ಶ್ರೀ ಎಸ್.ಬಿ.ಚಿಂಚೋಳಿ ಸರ್ ಅವರು ನೆರವೇರಿಸಿದರು. ಸಂಸ್ಥೆಯ ಸದಸ್ಯರಾದ ಶ್ರೀ ಎಂ.ಐ.ಮಾರಲ ಬಾವಿ,ಶ್ರೀ ಮಂಜುನಾಥ್ ಕೆ.ಪತ್ತಾರ ಸಾ.ಕಾರವಿನಾಳ (ಜಿಲ್ಲಾ ಉಪಾಧ್ಯಕ್ಷರು ಜಯ ಕರ್ನಾಟಕ) ಗಂಗಾಧರಯ್ಯ ಹಿರೇಮಠ ಸ್ವಾಮಿಗಳು,ಪಾಲಕ ಪ್ರತಿನಿಧಿಗಳು, ಕಾಲೇಜಿನ ಪ್ರಾಚಾರ್ಯರಾದ ವಿ.ಟಿ.ಕುರುಬರ ಸರ್ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.ಕನ್ನಡ ಉಪನ್ಯಾಸಕರಾದ ಮ.ಚ.ಧರಿ ಸರ್ ಅವರು ನಿರೂಪಿಸಿದರು.ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಸ್.ಎಚ್.ಕುಂಬಾರ್ ಗುರುಗಳು ಸ್ವಾಗತಿಸಿದರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಎಸ್ ಬಿ ಚಿಂಚೋಳಿ ಗುರುಗಳು ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು ಸಮಾಜದಲ್ಲಿ ಸಾಮರಸ್ಯ,ಸ್ನೇಹ,ಬಾಂಧವ್ಯ,ಸರಳತೆಯಿಂದ ಬದುಕಲು ಸಂವಿಧಾನವು ಕೈಗನ್ನಡಿಯಾಗಿದೆ ಎಂದು ಹೇಳಿದರು.ಅಲ್ಲದೆ ಸಂವಿಧಾನದ ಪೂರ್ವ ಪೀಠಿಕೆಯ ತಿಳುವಳಿಕೆಯು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದರು ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು ಕಾಲೇಜಿನ ಇತಿಹಾಸ ಶಿಕ್ಷಕರಾದ ವಾಯ್.ಎಚ್.ಪೂಜಾರಿ ಗುರುಗಳು ವಂದಿಸಿದರು.
ವರದಿ-ಖಾದರಬಾಷ ಮೇಲಿನಮನಿ