ವಡಗೇರಾ:ಪಟ್ಟಣದ ತಹಶಿಲ್ದಾರ ಕಚೇರಿಯ ಹತ್ತಿರದ ಡಿಡಿಯು ಶಾಲೆಯಲ್ಲಿ 75ನೇ ಗಣರಾಜೋತ್ಸವ ನಿಮಿತ್ತ ವಿಜೃಂಭಣೆಯಿಂದ ಧ್ವಜಾರೋಹಣ ನೆರವೇರಿಸಲಾಯಿತು.ಶಾಲೆಯ ಆವರಣ ಚಿಣ್ಣರ ಕಲರವ ಸಂತೋಷ,ಬಗ್ಗೆ ಬಗ್ಗೆಯ ಚಿತ್ತಾರದಿಂದ ತುಂಬಿದ ಮಂದಸ್ಮಿತ ತುಂಬಿದ ಮುಗುಳು ನಗೆಯಿಂದ ಶಾಲೆಯ ವಾತಾವಾರಣವನ್ನೆ ಬೆಕ್ಕಸಬೆರಗಾಗಿ ನೋಡುವಂತೆ ಹೊಸ ಲೋಕವನ್ನೆ ಸೃಷ್ಟಿಸಿದ ಚಿಣ್ಣರ ಲೋಕ ಅತ್ಯಂತ ರಮಣೀಯವಾಗಿ ಕಣ್ಣಿಗೆ ತಂಪರೆದು ನೋಡಲು ಬಂದಂತಹ ಪಾಲಕರು 75ನೇ ಗಣರಾಜೋತ್ಸವ ಆನಂದಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಸೌಜನ್ಯ ಬಸವರಾಜ ಸಾಹುಕಾರ್ ಭಾರತ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ ದೇಶಕ್ಕಾಗಿ ಬಲಿದಾನ ಮಾಡಿದ ಪುಣ್ಯ ಆತ್ಮಗಳಿಗೆ ನಾವು ಸದಾ ಋಣಿಯಾಗಿರಬೇಕು ಎಂದು ತಿಳಿಸಿದರು.
ಮಕ್ಕಳ ನೃತ್ಯ,ಯೋಧರ ಉಡುಗೆಯಲ್ಲಿದ್ದ ಸಿದ್ಧಾಂತ ಹಾಗೂ ಮಕ್ಕಳ ಫ್ಯಾನ್ಸಿ ಡ್ರೆಸ್ ಶಾಲೆಯ ಮುಖ್ಯ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ವರದಿ:ಶಿವರಾಜ್ ಸಾಹುಕಾರ್,ವಡಗೇರಾ