ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನನ್ನ ಜೀವನದ ಮುದ್ದು ಅವಳು

ಸ್ನೇಹಿತರೇ,
ತಂಗಿ ಯಾರಿಗೆ ಇಷ್ಟ ಇಲ್ಲ ಹೇಳಿ ಅಪ್ಪ ಅಮ್ಮನಿಗೆ ಮುದ್ದಿನ ಮಗಳಾಗಿ ಅಕ್ಕಂದಿರಿಗೆ ತಂಗಿಯಾಗಿ ಅಣ್ಣನಿಗೆ ಪ್ರೀತಿಯ ಸ್ನೇಹಿತೆಯಾಗಿ ಜೊತೆಗಿರುವಳೇ ತಂಗಿ.ಅಂತಹ ತಂಗಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅಂತಹ ತಂಗಿ ಪರಿಚಯವಾಗಿದ್ದು ಕೆಲವು ತಿಂಗಳ ಹಿಂದೆ ಆದರೂ ಒಂದು ಕ್ಷಣವೂ ಬಿಟ್ಟಿರಲಾರದಂತಹ ಅಣ್ಣ ತಂಗಿ ನಾವಾಗಿದ್ದೇವೆ ಆ ತಂಗಿ ಬೇರೇ ಯಾರು ಅಲ್ಲ ಅವಳು ನನ್ನ ಚಿಕ್ಕಪ್ಪನ ಮಗಳು.
ಅದೊಂದು ದಿನ ಅಕ್ಕನ ಫೋನ್ ಕೆಟ್ಟು ಹೋಗಿರುತ್ತದೆ ಅವಾಗ ಅಕ್ಕಾ ನನಗೆ ಕರೆ ಮಾಡಬೇಕೆಂದು ಆ ತಂಗಿಯ ಫೋನ್ ತೆಗೆದುಕೊಂಡು ಕರೆ ಮಾಡುತ್ತಾಳೆ ಆವಾಗ ನನ್ನ ಅಕ್ಕನ ಮದುವೆಯ ಸಂದರ್ಭ.ನನ್ನ ಹಾಗೂ ತಂಗಿಯ ಪರಿಚಯವಾಗಿದ್ದು ಆ ಒಂದು ಚಿಕ್ಕ ಫೋನ್ ಕಾರಣವಾಯಿತು ಫೋನಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು.
ಅವಾಗ ನನಗೆ ಅತೀ ಅಪರೂಪ ಎನ್ನುವಂತೆ ಪರಿಚಯ ಆದವಳೇ ನನ್ನ ಮುದ್ದು ಪೆದ್ದು ತರ್ಲೆ ತುಂಟಾಟದ ಮುದ್ದು ಮಾತಾಗಳನ್ನಾಡುವ ಮುಗ್ದ ಮನಸಿನ ನನ್ನ ಮುದ್ದು ತಂಗಿ.ಅವಳು ನನ್ನ ಚಿಕ್ಕಪ್ಪನ ಕೊನೆಯ ಹಾಗೂ ಮೂರನೇಯ ಮಗಳು. ಚಿಕ್ಕವಳಾಗಿದ್ದರಿಂದ ಇವಳನ್ನು ಎಲ್ಲರೂ ಅತೀ ಪ್ರೀತಿಯಿಂದ ಕಾಣುತ್ತಿದ್ದರು.
ಇವಳೇ ನನ್ನ ಚಿಕ್ಕಪ್ಪನ ಮಗಳು ಎಂದು ಗೊತ್ತಿದ್ದರೂ ಕೂಡಾ ಅವಳನ್ನು ಹೆಚ್ಚು ಮಾತನಾಡಿಸುತ್ತಿರಲಿಲ್ಲ ಗೊತ್ತಿದ್ದರೂ ಕೂಡಾ ಯಾರೋ ಎಂಬಂತೆ ಇರುತ್ತಿದ್ದೆ. ಅವಳು ನನಗೆ ಗೊತ್ತಿದ್ದರೂ ನಾನು ಯಾರು ಎಂದು ನನ್ನ ತಂಗಿಗೆ ಗೊತ್ತಿರಲಿಲ್ಲ ಯಾಕೆಂದರೆ ಪರಿಚಯ ಇರದ ಕಾಲವದು ಅವಳೊಂದು ಕಡೆಗೆ ನಾನೊಂದು ಕಡೆಗೆ ಇದ್ದೆವು ಅದೃಷ್ಟ ಅವಳು ನನಗೆ ಸಿಕ್ಕಿದ್ದು ನಾವು ಪರಿಚವಾಗಿದ್ದು ಅಕ್ಕನ ಮದುವೆಯ ಸಂದರ್ಭದಲ್ಲಿ. ಅವಳು ನನಗೆ ಸಿಕ್ಕಿದ್ದು ಯಾವ ಜನ್ಮದ ಪುಣ್ಯವೋ ಏನೋ ನನಗೆ ಅಕ್ಕಂದಿರು ಇದ್ದರು ಕೂಡಾ ತರ್ಲೆ ತುಂಟಾಟದ ತಂಗಿಯ ಸ್ಥಾನವನ್ನು ತುಂಬಿ ಅಣ್ಣ ಎಂಬ ಹೆಮ್ಮೆ ಬರುವಂತೆ ಮಾಡಿದವಳು ಆ ನನ್ನ ಮುದ್ದು ತಂಗಿ.
ಅದೆಷ್ಟೋ ಸಾರಿ ನಾನು ಜಿಗುಪ್ಸೆಗೊಂಡಾಗ, ಬೇರೆಯವರ ಮಾತುಗಳಿಂದ ನಾನು ಬೇಜಾರಾದಾಗ, ಎಲ್ಲಾ ವಿಷಯವನ್ನು ಯಾರ ಬಳಿಯೂ ಹೇಳದೆ ಇರುವಂತಹ ವಿಷಯಗಳನ್ನು ನನ್ನ ಮುದ್ದು ತಂಗಿ ಮುಂದೆ ಹೇಳುತ್ತೇನೆ.ನನ್ನ ತಂಗಿ ತನಗೆ ತಿಳಿದ ಮಟ್ಟಿನಲ್ಲಿ ಸರಿಯೋ ತಪ್ಪೋ ಸಮಾಧಾನ ಮಾಡುತ್ತಾಳೆ ಅವಳ ಮುಗ್ದ ಮಾತುಗಳನ್ನು ಕೇಳಿ ನಾನು ಸಂತೋಷ ಪಡುತ್ತೇನೆ ತಂಗಿಯ ಮಾತುಗಳನ್ನು ಕೇಳುತ್ತಿದ್ದರೆ ನನಗೆ ಬದುಕೇ ಬೇಡ ಅನಿಸಿದರೂ ಬದುಕುಬೇಕು ಎಂದು ಆಸೆ ಆಗುತ್ತದೆ.ಯಾರಿಗಾಗಿ ಅಲ್ಲದಿದ್ದರೂ ನನಗಾಗಿ ನನ್ನ ತಂಗಿಗಾಗಿ.
ಪ್ರತಿದಿನವೂ ನನ್ನ ತಂಗಿ ಫೋನ್ ಇಂದ ಸಂದೇಶ ಕರೆ ಬರದೇ ಹೋದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ.
ಅಂತ ಮುದ್ದು ತಂಗಿ ನನ್ನ ಜೊತೆ ಇರೋವರೆಗೂ ನನಗೆ ಯಾವ ಭಯವೂ ಇಲ್ಲ.ಏಕೆಂದರೆ ನನಗೆ ಸ್ಫೂರ್ತಿಯು ಅವಳೇ ಶಕ್ತಿಯು ಅವಳೇ.ಅದೇ ರೀತಿ ನನ್ನ ಹುಟ್ಟುಹಬ್ಬದ ಹಬ್ಬಕ್ಕೆ ಶುಭಾಶಯ ಕೋರಿದಾಗ ನನಗೆ ಎಲ್ಲಿಲ್ಲದ ಸಂತೋಷ ಮತ್ತೆ ಅಣ್ಣ ತಂಗಿ ಸಂಬಂಧವನ್ನು ಬೆಸೆಯುವ ಹಬ್ಬ ರಕ್ಷಾ ಬಂಧನದ ಶುಭಾಶಯ ಕೋರಿ ನನಗೆ ರಾಖಿ ಕಳುಹಿಸಿ,ಅಕ್ಷತೆಯ ಕಾಳುಗಳೊಂದಿಗೆ ಹಾರೈಸಿದ ನನ್ನ ಮುದ್ದು ತಂಗಿಗೆ ನಾ ಸದಾಕಾಲ ಚಿರಋಣಿ…
ಅವಳಿಗಾಗಿ ಏನು ಬೇಕಾದರೂ ಮಾಡಬಲ್ಲೆ ನನ್ನ ತಂಗಿಯ ಜೊತೆ ಜಗಳ ಆಡ್ತೀನಿ,ಕೋಪ ಮಾಡ್ಕೋತೀನಿ,ಮುದ್ದು ಮಾಡ್ತೀನಿ,ಕೊನೆಗೆ ನಾನೆ ಕ್ಷಮೆ ಕೇಳ್ತೀನಿ.ಅವಳು ಕೂಡಾ ನಂಗೆ ಅಷ್ಟೇ ಕಾಟ ಕೊಡ್ತಾಳೆ ಆದರೆ ಆ ಕಾಟದಲ್ಲೂ ಖುಷಿಯಾಗಿ ಇರ್ತೀನಿ.ಅಂತ ಮುದ್ದು ತಂಗಿ ಬಗ್ಗೆ ಬರೆಯಲು ಕುಳಿತರೆ ಶಬ್ದಮಣಿ ದರ್ಪಣ ಸಾಲದು.
ಮುದ್ದು ಪೆದ್ದು ಮತಗಳನ್ನಾಡುವ ಅರಗಿಣಿ,ಅಣ್ಣನ ಶುದ್ಧ ಜವಾಬ್ದಾರಿಗಳ ಮಹಾರಾಣಿ,
ಅಣ್ಣ ಕಾಯುತಿರುವನು ಆ ಮುದ್ದು ಬಂಗಾರಿಯ ನಗುವಿಗಾಗಿ,
ಆ ತಂಗಿಯಲ್ಲಿ ತನ್ನ ತಾಯಿಯಾ ಪ್ರತಿರೂಪ ಕಾಣುವಿಕೆಗಾಗಿ,
ಪದಗಳು ಸಾಲುತ್ತಿಲ್ಲ ಹೇಳಲು ಅವಳ ಮಾತನ್ನು, ಮುದ್ದು ಮಾತುಗಳ ಶುದ್ಧ ಪ್ರೀತಿಯಿಂದ ಮನೆ ಮಾಡಿಹಳು ಅಣ್ಣನ ಮನಸಿನ ತುಂಬಾ.
ಅಣ್ಣನೆಂದು ಈ ದಿನ ಈ ಪದವಿಯ ಕೊಟ್ಟ ಆ ದೇವರಿಗೊಂದು ನಮನ,ಪೆದ್ದು ತಂಗಿಯ ಮುದ್ದು ಪ್ರೀತಿಗೆ ಶಿರಬಾಗವೇ ಪ್ರತಿದಿನ,ಪ್ರತಿಕ್ಷಣ.
I love u sister

-ಸಾಹಿತಿ, ಬರಹಗಾರ
ಕುಮಾರೇಂದ್ರ ಎಸ್ ರಡ್ಡೇರಟ್ಟಿ.(ಬೆಳಗಾವಿ, ಖಾನಟ್ಟಿ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ