ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಹಳ್ಳಿ ಸೊಗಡು ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಗ್ರಾಮದ ಶ್ರೀ ರೇಣುಕಾ ಎಲ್ಲಮ್ಮ ದೇವಿದೇವಸ್ಥಾನದಿಂದ 51 ಕುಂಬಕಳಸದೊಂದಿಗೆ ಡೊಳ್ಳು,ಹಲಗೆ,ತಾಳ ಮದ್ದಳೆ ಮೂಲಕ ಬಸ್ ನಿಲ್ದಾಣ,ದುರ್ಗಾದೇವಿ ದೇವಸ್ಥಾನ,ಅಗಸಿ ಮುಂಭಾಗದಿಂದ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಮಕ್ಕಳಿಂದ ಶಾಲೆಯ ಆವರಣದವರಿಗೆ ಹಳ್ಳಿ ಸೊಗಡಿನ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಸರ್ಕಾರ ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಹಳ್ಳಿಯ ಜೀವನ ಶೈಲಿಯು ಮಾಯವಾಗುದನ್ನು,ಆಧುನಿಕತೆಯ ಭರದಲ್ಲಿ ಮೂಲೆ ಗುಂಪಾಗುವುದನ್ನು ತಡೆಯಲು ಹಳ್ಳಿಯ ಸಂಪೂರ್ಣ ಚಿತ್ರಣವನ್ನು ತೆರೆದಿಡುವ ಅಪೂರ್ವ ದೃಶ್ಯಗಳು ಇಂದು ಇಲ್ಲವಾಗುತ್ತಿವೆ.ಇದರ ನೆನಪುಗಳು ಮಕ್ಕಳಿಗೆ ಹಾಗೂ ಸಮುದಾಯಕ್ಕೆ ಮರು ತಲುಪಿಸಲು ಅಥವಾ ನೆನಪಿಸಿಕೊಳ್ಳಲು ಪ್ರತಿ ಶಾಲೆಯಲ್ಲಿ ಹಳ್ಳಿ ಸೊಗಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಇಂದು ಕೆ.ಹೊಸಹಳ್ಳಿ ಶಾಲೆಯಲ್ಲಿ ಕೂಡಾ ವಿಶೇಷವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕಟ್ಟಿಗೆ ಮಾರುವುದು,ಕಿರಾಣಿ ಅಂಗಡಿಗಳು,ರೊಟ್ಟಿ ತಟ್ಟುವುದು,ಇಸ್ತ್ರಿ ಮಾಡುವುದು,ಅಕ್ಕಿ ಕೇರುವುದು,ಬೀಸುವುದು,ಆಸ್ಪತ್ರೆ,ಕಟಿಂಗ್ ಶಾಪ್,ಕೊರವಂಜಿ ಕಣಿ ಹೇಳುವುದು,ಅಲಾಯಿ ಆಡುವುದು,ಡೊಳ್ಳು ಬಾರಿಸುವಿಕೆ ಮತ್ತು ಕುಣಿತ, ಬಡಗಿತನ ಮಾಡುವುದು,ಹಾಲು ಹಾಕುವುದು,ಉಪಹಾರ ಅಂಗಡಿ,ಚಿಕನ್ ಅಂಗಡಿ, ಮಜ್ಜಿಗೆ ಮಾಡುವುದು,ಬಟ್ಟೆ ಅಂಗಡಿ,ರಂಗೋಲಿ ಹಾಕುವುದು,ಹೂ ಮಾರುವುದು,ಒಡಪು ಹೇಳುವುದು ಹೀಗೆ ಇನ್ನೂ ಹಲವಾರು ಬಗೆಯ ಗ್ರಾಮೀಣ ಬದುಕಿಗೆ ಅತೀ ಮುಖ್ಯವಾದ ಮತ್ತು ಅವಶ್ಯಕವಾದ ವೃತ್ತಿ ಮತ್ತು ಅಂಗಡಿಗಳನ್ನು ವಿದ್ಯಾರ್ಥಿಗಳಿಂದ ನಿರ್ಮಿಸಿ (ಮಾಡಿಸಿ)ಜನರ ಮನಸ್ಸನ್ನು ಮುಟ್ಟುವಂತೆ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆಯಲಾಯಿತು.
ಈ ಸಂದರ್ಭದಲ್ಲಿ ವಿಶೇಷವಾಗಿ ಶಾಲಾ ಶಿಕ್ಷಕರು ಮತ್ತು ಮಕ್ಕಳು ನಿಲುವಂಗಿ ದೋತರ ಉಟ್ಟರೆ,ಶಿಕ್ಷಕೀಯರು ಮತ್ತು ಹೆಣ್ಣು ಮಕ್ಕಳು ಇಲಕಲ್ಲ ಸೀರೆ ತೊಟ್ಟು ದೃಶ್ಯದಿಂದ ಹಳ್ಳಿಯ ಸೊಗಡು ನೋಡುಗರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಹುಸೇನ್ ಸಾಬ್,ಶಿಕ್ಷಕರಾದ ಛತ್ರಪ್ಪ,ದೊಡ್ಡಪ್ಪ,ಕಲ್ಲನಗೌಡ, ಪರ್ವಿನ್,SDMC ಅದ್ಯಕ್ಷರು-ಸದಸ್ಯರು,ಶಾಲೆಯ ಶಿಕ್ಷಕರು,ಹಳೆಯ ವಿದ್ಯಾರ್ಥಿಗಳಾದ ಚನ್ನಪ್ಪ,ಬಸನಗೌಡ,ಯಮನೂರ, ಸುರೇಶ ಹಾಗೂ ಇನ್ನೂ ಹಲವಾರು ಹಿರಿಯರು, ಯುವಕರು,ಮಹಿಳೆಯರು,ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.