ಹನೂರು:ಉತ್ತಮ ಫಲಿತಾಂಶಕ್ಕೆ ವ್ಯಾಸಂಗ ಕಡೆ ಗಮನ ಹರಿಸಿ ಶಿಕ್ಷಕರು ಪೋಷಕರ ಶ್ರಮ ಮತ್ತು ಮಾರ್ಗದರ್ಶನ ಅರಿತು ವಿದ್ಯಾರ್ಥಿಗಳು ಕಲಿಕೆಗೆ ಒತ್ತು ನೀಡಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಬಂಡಳ್ಳಿ ಹಾಗೂ ಲೊಕ್ಕನಹಳ್ಳಿ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.
ಈ ವೇಳೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಾರ್ಷಿಕ ಪರೀಕ್ಷೆಗಳಿಗೆ ಇನ್ನು ಕೆಲವೇ ದಿನಗಳು ಉಳಿದಿದ್ದು ವಿದ್ಯಾರ್ಥಿಗಳು ಈಗಿನಿಂದಲೇ ವಿಷಯವಾರು ಕಲಿಕೆಗೆ ಆದ್ಯತೆಯನ್ನು ನೀಡಿದರೆ ಉತ್ತಮ ಫಲಿತಾಂಶ ಪಡೆಯಬಹುದು
ವಿದ್ಯಾರ್ಥಿಗಳು ತಂದೆ ತಾಯಿಗಳ ತ್ಯಾಗ,ಶಿಕ್ಷಕರ ಶ್ರಮ ಮತ್ತು ಮಾರ್ಗದರ್ಶನವನ್ನು ಅರಿತು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಪಟ್ಟಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಉತ್ತಮವಾದ ಪರಿಸರ ವಾತಾವರಣವನ್ನು ಹೊಂದಿರುವ ಗ್ರಾಮೀಣಭಾಗದ ವಿದ್ಯಾರ್ಥಿಗಳು ಪ್ರಕೃತಿಯನ್ನೇ ಶಕ್ತಿಯನ್ನಾಗಿಸಿ ಮುನ್ನುಗ್ಗಬೇಕು ಬರೆದಿರುವುದನ್ನು ಓದಿ, ಓದಿದ್ದನ್ನು ಮನನಮಾಡಿಕೊಂಡು ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಬೇಕು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಗಣಿತ ವಿಷಯಗಳಲ್ಲಿ ಪ್ರಬುದ್ಧತೆ ಸಾಧಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ ನನ್ನ ಮೊದಲ ಆದ್ಯತೆ ಶಿಕ್ಷಣ,ಆರೋಗ್ಯ,ರೈತ ಏಳ್ಗೆಯಾಗಿದ್ದು,ಶಿಕ್ಷಣ ಇಲಾಖೆಗೆ ಬೇಕಾದ ಸಹಕಾರವನ್ನು ನಾನು ಸದಾ ಒದಗಿಸುತ್ತೇನೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಭರವಸೆ: ಶಾಸಕ ಎಂ.ಆರ್.ಮಂಜುನಾಥ್ ವಿನೂತನ ಆಲೋಚನೆಯಲ್ಲಿ ಮೂಡಿ ಬಂದಿರುವ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ದಿಸೆಯಲ್ಲಿ ಆಯೋಜಿಸಲಾಗಿದ್ದ ಭರವಸೆ ತುಂಬುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಿಂದ ನಮಗೆ ನಿಜಕ್ಕೂ ಸ್ಫೂರ್ತಿ, ಧೈರ್ಯ ಆತ್ಮವಿಶ್ವಾಸ ಮೂಡಿದೆಖಂಡಿತ ನಾವು ಉತ್ತಮ ಫಲಿತಾಂಶ ತಂದು ನಾವು ಓದಿದ ಶಾಲೆ, ಕಾಲೇಜು,ಶಿಕ್ಷಕರು,ತಂದೆ ತಾಯಿ,ನಿಮ್ಮೆಲ್ಲರಿಗೂ ಕೀರ್ತಿ ತರುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು,ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಜಯಪ್ರಕಾಶ್, ರಾಜೇಶ್ ದೈಹಿಕ ಶಿಕ್ಷಣಾಧಿಕಾರಿ ಮಹಾದೇವ್,ಲೋಕ್ಕನಹಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್,ಮುಖ್ಯ ಶಿಕ್ಷಕರುಗಳಾದ ಬಸವರಾಜು ರಾಜೇಂದ್ರ,ನಾಗರಾಜು,ಅಮಲ್ ದಾಸ್,ಮೂರ್ತಿ, ಬಂಡಳ್ಳಿ ಜೇಸಿಮ್ ಪಾಷಾ ಹಾಗೂ ಶಿಕ್ಷಕರಾದ ವೆಂಕಟೇಶ್,ಮಲ್ಲೇಶ್ ಇನ್ನಿತರರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್