ಹುನಗುಂದ:ತಾಲೂಕಿನ ತಿಮ್ಮಾಪುರ ಗ್ರಾಮದ ರೆಡ್ಡಿ ಸಮಾಜದ ಹಿರಿಯರಾದ ಶ್ರೀಮತಿ ಚನ್ನಬಸಮ್ಮ ರುದ್ರಗೌಡ ರುದ್ರಗೌಡರ ಇವರು ಇಂದು ಮುಂಜಾನೆ 4 05 ನಿಮಿಷಕ್ಕೆ ತಿಮ್ಮಾಪುರದಲ್ಲಿ ನಿಧನರಾದರು,ಮೃತರಿಗೆ 83 ವರ್ಷ ವಯಸ್ಸಾಗಿತ್ತು ಮೃತರ ಅಂತ್ಯಕ್ರಿಯೆಯು ತಿಮ್ಮಾಪುರ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ಜರಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಮೃತರು ಮಾಜಿ ಸೈನಿಕ ಬಸವಂತಗೌಡ,ಹನುಮಂತಗೌಡ(ರೈಲ್ವೆ ಉದ್ಯೋಗಿ),ಶಿಕ್ಷಕ ವೆಂಕನಗೌಡ ಹಾಗೂ ಕೆ ಎಸ್ ಆರ್ ಟಿ ಸಿ ನೌಕರ ಪ್ರಕಾಶ್ ಗೌಡ ಮತ್ತು ಸೊಸೆಯಂದಿರು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ:ಚನ್ನಬಸಮ್ಮ ನಿಧನಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
