ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣಸಗೇರಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ವಿದ್ಯಾವರ್ಧಕ ಸಂಸ್ಥೆ(ರಿ.)ಯ ಮಾನಸ ಗಂಗೋತ್ರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 5 ನೇ ವಾರ್ಷಿಕ ಸ್ನೇಹ ಸಮ್ಮೇಳನ ಶುಕ್ರವಾರ ಸಂಜೆ ಅತ್ಯಂತ ಅದ್ದೂರಿಯಾಗಿ,ಯಶಸ್ವಿಯಾಗಿ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಯಮನೂರಪ್ಪ ತಳವಾರ ಅವರು ವಹಿಸಿಕೊಂಡಿದ್ದರು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು,ಕ್ರೀಡೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಉದ್ಘಾಟಕರಾಗಿ ಶ್ರೀ ಶಂಕ್ರಪ್ಪ ಬಡಿಗೇರ,
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯರಾದ ದೊಡ್ಡನಗೌಡ ಪಾಟೀಲ್, ಶ್ರೀ ಗೋವಿಂದ ಗೌಡ ಮಾಲಿ ಪಾಟೀಲ್,ಸಮಾಜ ಸುಧಾರಕರಾದ ಶ್ರೀ ಶೇಖಪ್ಪ ಮೇಟಿ,ಶ್ರೀ ಮರಿಯಪ್ಪ ಕಲಾದಗಿ,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೇಖಪ್ಪ ಉಪ್ಪಾರ,ಶ್ರೀ ಗಂಗಪ್ಪ ಚಿತ್ತವಾಡಗಿ,ಶ್ರೀ ದುರುಗಮ್ಮ.ಯ.ಹರಿಜನ,ಶ್ರೀ ಸಕ್ರಪ್ಪ ರಾಠೋಡ್,
ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಶರಣಪ್ಪ ತೋಟದ,ಶ್ರೀ ಬಸಪ್ಪ ಹುನಗುಂದ,ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಆರ್.ಎಮ್.ಕಾಲವಾಡ ಅವರೊಂದಿಗೆ ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಶ್ರೀ ಹನುಮಗೌಡ ಕಲಕೇರಿ ಅವರಿಗೆ ಸನ್ಮಾನಿಸಲಾಯಿತು.ಒಟ್ಟಾರೆ ಗ್ರಾಮಸ್ಥರ ಸಹಕಾರದಿಂದ ಸ್ನೇಹ ಸಮ್ಮೇಳನ ಯಶಸ್ವಿಯಾಯಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.