ಬಾಗಲಕೋಟೆ/ತಿಮ್ಮಾಪುರ:ಕರ್ನಾಟಕ ಸುವರ್ಣ ಸಂಭ್ರಮ-೫೦ ರ ಅಂಗವಾಗಿ ಜ್ಯೋತಿ ರಥಯಾತ್ರೆ ೧೨ ೦೨ ೨೦೨೪ ರಂದು ಸೋಮವಾರ ದಂದು ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮಕ್ಕೆ ಆಗಮಿಸಲಿದೆ ಎಂದು ಹುನಗುಂದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ತಿಳಿಸಿದ್ದಾರೆ ಈ ಜ್ಯೋತಿಯಾತ್ರೆಯಲ್ಲಿ ಹುನಗುಂದ ತಾಲ್ಲೂಕಿನ ಎಲ್ಲಾ ಸಾಹಿತಿಗಳು,ಲೇಖಕರು ಕಲಾವಿದರು,ಶಿಕ್ಷಕರು ಕ.ಸಾ.ಪ.ಆಜೀವ ಸದಸ್ಯರು, ಕನ್ನಡಪರ ಹೋರಾಟಗಾರರು ಪತ್ರಕರ್ತರು,ಸಾಮಾಜಿಕ
ಕಾರ್ಯಕರ್ತರು ಸಾರ್ವಜನಿಕರು,ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
