ಕಲಬುರಗಿ:ಬದುಕಿನಲ್ಲಿ ಎದುರಾಗುವ ಕಷ್ಟಗಳೊಂದಿಗೆ ಚೆನ್ನಾಗಿ ಬೆಂದರೆ ಮಾತ್ರ ಬೇಂದ್ರೆ ಆಗಲು ಸಾಧ್ಯ ಎಂದು ಶ್ರೀನಿವಾಸ ಸರಡಗಿಯ ಪರಮ ಪೂಜ್ಯ ಡಾ.ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ನಿನ್ನೆ ಕರ್ನಾಟಕ ರಕ್ಷಣಾ ವೇದಿಕೆ (ಕಾವಲುಪಡೆ) ವತಿಯಿಂದ ಕಲಾ ಮಂಡಳದಲ್ಲಿ ಹಮ್ಮಿಕೊಡಿದ್ದ ವರಕವಿ ದ.ರಾ.ಬೇಂದ್ರೆ ಜನ್ಮ ದಿನಾಚರಣೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,ಇಳಿದು ಬಾ ತಾಯಿ,ಇಳಿದು ಬಾ ಎಂದು ಬೇಂದ್ರೆಯವರು ಭಾರತದಲ್ಲಿ ಬರಗಾಲ ಆವರಿಸಿದಾಗ ಹಾಡನ್ನು ಹಾಡಿ ಮಳೆರಾಯನನ್ನು ಕರೆದಿದ್ದು ವಿಶೇಷವಾಗಿತ್ತು ನೀ ಹಿಂಗ ನೋಡಬೇಡ ನನ್ನ,ತಿರುಗಿ ನಾ ಹೇಂಗ ನೋಡಲಿ ನಿನ್ನ ಎಂದು ಮಗನ ಸಾವಿನ ಸಂದರ್ಭದಲ್ಲಿ ತನ್ನ ಮಡದಿಗೆ ಹಾಡಿದಂಥ ಹಾಡು ಇಂದಿಗೂ ಪ್ರಸಿದ್ಧವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ದ.ರಾ. ಬೇಂದ್ರೆಯವರು ಲಕ್ಷ್ಮೇಶ್ವರ ಹತ್ತಿರದ ಶಿರಹಟ್ಟಿ ಪಟ್ಟಣದವರಾಗಿದ್ದು ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಅನೇಕ ಕವನ ಸಂಕಲನಗಳನ್ನು ರಚಿಸಿದ್ದಾರೆ. ಅವರೊಬ್ಬ ವರಕವಿ ಆಗಿದ್ದರು ಅವರ ನಾಕು ತಂತಿ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಪ್ರತಿದಿನ ಬೇಂದ್ರೆಯವರನ್ನು ಓದುವುದರಿಂದ ಬದುಕಿನಲ್ಲಿ ಚೈತನ್ಯ ತುಂಬುತ್ತದೆ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಪರಿಹರಿಸುವ ಶಕ್ತಿ ಲಭಿಸುತ್ತದೆ. ಸರ್ಕಾರ ಬೇಂದ್ರೆಯವರು ಜನ್ಮ ದಿನಾಚರಣೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲು ಯೋಜನೆ ರೂಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೇಂದ್ರೆಯವರ ಕವನಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಸಚಿನ ಫರತಾಬಾದ, ಮನೋಹರ ಪೊದ್ದಾರ,ಎಂ.ಡಿ.ಸಿದ್ದಿಕಿ, ಜಗನ್ನಾಥ ಸೂರ್ಯವಂಶಿ ವೇದಿಕೆಯ ಮೇಲಿದ್ದರು. ಹಿರಿಯ ಸಾಹಿತಿ ಡಾ.ರಾಜಶೇಖರ ಮಾಂಗ ಅತಿಥಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು,ಸಾಹಿತಿಗಳಿಗೆ ದ.ರಾ.ಬೇಂದ್ರೆ ಪ್ರಶಸ್ತಿ ಹಾಗೂ ಸಂಗೀತ ಸಾಧಕರಿಗೆ ಗೌರವ ಪುರಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಪ್ರಹ್ಲಾದ ಹಡಗಿಲಕರ್,ಅರವಿಂದ ನಾಟೀಕಾರ,ಕಾಶಿ ಗೌಳಿ, ಉಮಾಕಾಂತ ನಾಟೀಕಾರ,ಮಧುಕರ ಕಾಂಬಳೆ, ಅನೀಲ ಡೊಂಗರಗಾಂವ,ಕವಿನ ನಾಟೀಕಾರ ಇನ್ನಿತರರಿದ್ದರು.ವೀರಭದ್ರಪ್ಪ ಅರಕೇರಿ ನಿರೂಪಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.