ಜೇವರ್ಗಿ:ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾದ ಎಕ್ಸಲೆಂಟ್ ಕಂಪ್ಯೂಟರ್ ತರಬೇತಿ ಸಂಸ್ಥೆಯ ಸಂಸ್ಥಾಪಕರಾದ ಲಾಳೆಪಟೇಲ್ ಯಾಳವಾರರವರು ತಂದೆ-ತಾಯಿ ಇಲ್ಲದ ಮಕ್ಕಳಿಗೆ, ಜೇವರ್ಗಿ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೊಟ್ಟು ತಮ್ಮ ಮಾನವೀಯ ಮೌಲ್ಯ ಮೆರೆದು ವಿದ್ಯಾ ದಾಸೋಹಿ ಎನಿಸಿಕೊಂಡಿರುವುದು ಖುಷಿ ಪಡುವ ವಿಷಯವಾಗಿದೆ.
ಸಂಸ್ಥೆಯು ಸರ್ಕಾರದಿಂದ ಮಾನ್ಯತೆ ಪಡೆದು ಅಚ್ಚುಕಟ್ಟಾಗಿ ಒಳ್ಳೆಯ ಕಲಿಕೆ ಮತ್ತು ತರಬೇತಿ ನೀಡುತ್ತಿದೆ ಹಾಗೂ ಎಕ್ಸಲೆಂಟ್ ಕಂಪ್ಯೂಟರ್ ತರಬೇತಿ ಸಂಸ್ಥೆಯು ಸರಿ ಸುಮಾರು 2017 ರಿಂದ ಪ್ರಾರಂಭವಾಗಿ ಇಲ್ಲಿಯವರೆಗೆ ತಮ್ಮದೆ ಆದ ಛಾಪು ಮೂಡಿಸಿತ್ತಾ ಬಂದಿದೆ.ಸಂಸ್ಥೆಯು ಉಚಿತ ಮತ್ತು ಕಡಿಮೆ ಶುಲ್ಕದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಔದ್ಯೋಗಿಕ ಮತ್ತು ಶೈಕ್ಷಣಿಕವಾಗಿ ಹಲವಾರು ವಿದ್ಯಾರ್ಥಿಗಳಿಗೆ ದಾರಿ-ದೀಪವಾಗುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ,ಹೆಣ್ಣು ಮತ್ತು ಗಂಡು ಮಕ್ಕಳ ಪ್ರತ್ಯೇಕ ಕಲಿಕಾ ಕೊಠಡಿ ಮತ್ತು ಆಸನದ ವ್ಯವ್ಯಸ್ಥೆ,ದಿನ ಪತ್ರಿಕೆ,ಮ್ಯಾಗಜೀನ್ ಗಳು,ಉತ್ತಮ ಪುಸ್ತಕ ಸಂಗ್ರಹ ಹಾಗೂ ನುರಿತ ಅನುಭವ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ವಾತಾವರಣದಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿರುವುದು ನಮ್ಮ ಜೇವರ್ಗಿಯ ಜನ ಹೆಮ್ಮೆ ಪಡುವ ವಿಷಯವಾಗಿದೆ.
ಸಂಸ್ಥೆಯ ಸಂಸ್ಥಾಪಕರು:ಲಾಳೆಪಟೇಲ್ ಎಲ್.ಬಿ.ಯಾಳವಾರ,
Aejaz ಗುತ್ತೇದಾರ್ ಜೇವರ್ಗಿ
ಸಹ ಶಿಕ್ಷಕಿ;ಲಾಲಬಿ.ಬಿ.ಇಟಗಾ
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್