ವಡಗೇರಾ:ಒಣ ಮೆಣಸಿನಕಾಯಿ ಬೆಳೆದ ವಡಗೇರಾ ತಾಲೂಕಿನ ರೈತರ ಪಾಲಿಗೆ ಒಣ ಮೆಣಸಿನಕಾಯಿ ಅತಿ ಖಾರವಾಗಿದೆ ಮಳೆ ಮತ್ತು ನೀರಿನ ಅಭಾವ,ರೋಗಬಾಧೆಯಿಂದ ಇಳುವರಿಯು ಕೂಡಾ ಕಡಿಮೆ ಬಂದಿದೆ.
ರೈತರು ಒಂದು ಎಕರೆಗೆ ಕನಿಷ್ಠ 80 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ ಆದರೆ ಈ ವರ್ಷ ಏಕಾ ಏಕಿ ಮೆಣಸಿನಕಾಯಿ ಬೆಲೆ ಪಾತಾಳಕ್ಕೆ ಹೋಗಿದ್ದು ರೈತರು ಸಾಲ ಮಾಡಿ ಬೆಳೆದು ಈಗ ತೀವ್ರ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯಸ್ಥಿಕೆ ವಹಿಸಿ ಬೆಂಬಲ ಬೆಲೆ ಘೋಷಿಸಿ ರೈತರ ಹಿತ ಕಾಯಬೇಕು ಈ ಬಾರಿ ರೈತರು ಹೆಚ್ಚಾಗಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದು ದಾಖಲೆ ಮಟ್ಟದ ಬೆಲೆ ಕುಸಿತ ಕಂಡಿದ್ದು ಹಲವಾರು ರೈತರು ಮೆಣಸಿನಕಾಯಿಗಳನ್ನು ಹೊಲದಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ಸಿಗಬಹುದು ಎಂದು ಕಾಯುತ್ತಿದ್ದಾರೆ ರಾಜ್ಯಾದ್ಯಂತ ಈ ಸಲ ಹೆಚ್ಚು ಮೆಣಸಿನಕಾಯಿ ಬೆಳೆದಿದ್ದು ಆ ಕಾರಣ ದರ ಕುಸಿತ ಕಂಡಿದೆ ಸದ್ಯ ಈಗ ಮಾರುಕಟ್ಟೆಯಲ್ಲಿ ಮೆಣಸಿನ ಕಾಯಿ ಕ್ವಿಂಟಲ್ ಗೆ ಅಂದಾಜು 14 ರಿಂದ 18 ಸಾವಿರವರೆಗೆ ಇದೆ ಕಳೆದ ವರ್ಷ ಸುಮಾರು 25 ರಿಂದ 30 ಸಾವಿರದವರೆಗೆ ಬೆಲೆ ಇತ್ತು ಈ ಬಾರಿ ಬೆಲೆ ಮತ್ತು ಇಳುವರಿಯು ಹೆಚ್ಚು ಬಾರದ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಒಂದು ಕಡೆ ಬರಗಾಲ ಮತ್ತೊಂದು ಕಡೆ ಬೆಳೆಗಳ ಬೆಲೆ ಕುಸಿತದಿಂದ ರೈತ ನೊಂದಿದಿದ್ದಾನೆ.ಸರ್ಕಾರ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಿ ಮೆಣಸಿನ ಕಾಯಿಗೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಗುರುನಾಥ್ ರೆಡ್ಡಿ ಗೌಡ ಹದನೂರು,ಶಿವರಾಜಪ್ಪ ಗೌಡ ಮಲಾರ್,ಬಡೇಸಾಬ್ ರೂಟನಡಗಿ,ಸಂಗಪ್ಪ ಮಡಿವಾಳ,ಬಂಧುಗೌಡ ಐರೆಡ್ಡಿ ಹಾಗೂ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕಾ,ಗೌರವಾಧ್ಯಕ್ಷ ಶರಣು ಜಡಿ,ಶಿವು ಗೋನಾಲ್,ಕೃಷ್ಣ ಟೇಲರ್,ತಿರುಮಲ ಗುತ್ತೇದಾರ್,ಹಳ್ಳೆಪ್ಪ ತೇಜೇರ,ವೀರೇಶ್ ಗೌಡ,ಸತೀಶ್ ನಾಟೇಕರ್,ನಾಗರಾಜ್ ಹಿರೇಮಠ,ಮಹಮ್ಮದ್, ಮಲ್ಲು ಬಾಡದ,ಬೀರಪ್ಪ ಜಡಿ,ನಿಂಗು ಕುರಿಕಳ್ಳಿ,ಮಲ್ಲು ನಾಟೇಕರ,ಸುಭಾನ ಜೋಗೆರ್,ಪರಮಣ್ಣ,ಮಲ್ಲಣ್ಣಗೌಡ ಇನ್ನಿತರರು ಉಪಸ್ಥಿತರಿದ್ದರು.
ವರದಿ:ಶಿವರಾಜ್ ಸಾಹುಕಾರ್,ವಡಗೇರಾ