ಬೀದರ್:ತಾಲೂಕಿನ ಕಾಶಂಪೂರ ನಿವಾಸಿ
ಶಿವರಾಜ್ ಹುಂದೇನವರ ಇವರಿಗೆ ಒಂದೂವರೆ ಎಕರೆ ಜಮೀನು ಇದ್ದು ಅವರು ಕೂಲಿ ಕೆಲಸದವರಾಗಿದ್ದು ಅವರು ಕುಟುಂಬ ತುಂಬಾ ದೊಡ್ಡದಿದ್ದು ನಾಲ್ಕು ಮಕ್ಕಳು ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ ಅವರಿಗೆ ಎರಡು ಹೆಣ್ಣು ಮಕ್ಕಳು ಅವರ ಮದುವೆ ಜವಾಬ್ದಾರಿ ಇದ್ದು ಅವರು ಕಷ್ಟಪಟ್ಟು ಹೊಲದಲ್ಲಿ ಕಬ್ಬು ಬೆಳೆಸಿದರು.ಮಕ್ಕಳು ಇಲ್ಲದ ಸಮಯದಲ್ಲಿ ಮನೆಯ ಯಜಮಾನರು ಸರಿಯಾಗಿ ನಡಿಯಲು ಆಗದ ಹಾರ್ಟ್ ಪೇಷಂಟ್ ಆದರೂ ನಮ್ಮ ಬೆಳೆ ಚೆನ್ನಾಗಿ ಬೆಳೆಯಲಿ ಎಂಬ ಆಸೆಯಿಂದ ಕಬ್ಬಿನ ಗದ್ದೆಗೆ ನೀರು ಬಿಡುವುದಕ್ಕೆ ಹೋಗಿದ್ದರು ಅವಾಗ ಕರೆಂಟ್ ಡಬಲ್ ಫೇಸ್ ಆಗಿ ಶಾರ್ಟ್ ಸರ್ಕಿಟ್ ಆಗಿ ಸಂಪೂರ್ಣ ಹೊಲ ಸುಟ್ಟು ಬಿಟ್ಟಿದೆ ಹೊಲದ ಹತ್ತಿರ ಇದ್ದವರು ಓಡಿ ಬಂದು ಅದನ್ನು ನಂದಿಸಿ ಮಕ್ಕಳಿಗೆ ಫೋನ್ ಮಾಡಿ ಕರೆಸಿದರೂ ಆರಿಸಿದರೂ ಏನೂ ಉಪಯೋಗ ಆಗದೆ ತುಂಬಾ ವ್ಯಥೆ ಪಟ್ಟರು.ಯಜಮಾನ ತುಂಬಾ ಕಣ್ಣೀರು ಸುರಿಸಿ ಸರ್ಕಾರದಿಂದ ಏನಾದರೂ ನಮಗೆ ಸಹಾಯಧನ ಸಿಗುತ್ತದೆ ಅನ್ನೋ ಆಸೆಯಿಂದ ಕಾಯುತ್ತಿದ್ದಾರೆ.ಸರ್ಕಾರದಿಂದ ಆದಷ್ಟು ಬೇಗ ಸಹಾಯ ಸಿಗಲಿ ಎಂದು ಆಶಿಸುತ್ತೇವೆ.
ವರದಿ-ಸಿಯಾ