ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕುಷ್ಟಗಿಯಲ್ಲಿ ಅದ್ದೂರಿಯಾಗಿ ಜರುಗಿದ ಶಾಲಾ ವಾರ್ಷಿಕೋತ್ಸವ

ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದಲ್ಲಿ ಎಲ್.ಐ.ದಿಂಡೂರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ.3/2/2024 ರ ಶನಿವಾರ
10ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.ಈ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ‌‍‌ಷಟ್ ಸ್ಥಲ ಬ್ರಹ್ಮ 108 ಕರಿಬಸವೇಶ್ವರ ಮಹಾಸ್ವಾಮೀಜಿ ಮದ್ದಾನಿ ಮಠ ಕುಷ್ಟಗಿ ಇವರು ವಹಿಸಿಕೊಂಡಿದ್ದರು,
ಮುಖ್ಯ ಅತಿಥಿಗಳಾಗಿ ಶಾಸಕರಾದ ದೊಡ್ಡನ ಗೌಡ ಪಾಟೀಲರು ಹಾಗೂ ಅತಿಥಿಗಳಾಗಿ ಶರಣಪ್ಪ ತೆಮ್ಮನಾಳ ಬಿ.ಆರ್.ಪಿ ಕುಷ್ಟಗಿ,ದವಲಸಾಬ ವಾಲಿಕಾರ ಶಿಕ್ಷಣ ಸಂಯೋಜಕರು ಕುಷ್ಟಗಿ,ಕೆ.ಮಹೇಶ್,ಮಲ್ಲಪ್ಪ ಕುದರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು,ಶ್ರೀ ಮತಿ ನಿವೇದಿತಾ ಮುಖ್ಯ ಗುರುಗಳು ಎಲ್.ಐ.ದಿಂಡೂರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ರೋಣ,
ಶಾಲೆಯ ಕಾರ್ಯನಿರ್ವಾಹಕರಾದ ಶಿವರಾಜ್,ಶ್ರೀ ಶಶಿಧರ.ಎಲ್.ದಿಂಡೂರು ಅಧ್ಯಕ್ಷರು,ಎಲ್.ಐ.ದಿಂಡೂರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಕುಷ್ಟಗಿ ಆಗಮಿಸಿದ್ದರು.
ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು.ಜ್ಯೋತಿ ಬೆಳಗುವ ಮೂಲಕ ಎಲ್ಲಾ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.
ವಿವಿಧ ಆಟೋಟಗಳ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಮಣ ಪತ್ರವನ್ನು ವಿತರಣೆ ಮಾಡಲಾಯಿತು ಹಾಗೂ ಚಿಂತನ ಪ್ರಕಾಶನ ಚಿತ್ರದುರ್ಗ ಇವರ ವತಿಯಿಂದ ನಡೆಸಲಾಗಿದ್ದ ಇಂಗ್ಲಿಷ ಗ್ರಾಮರ್,ಗಣಿತ,ವಿಜ್ಞಾನ ವಿಷಯಗಳ ಕುರಿತ ಪರೀಕ್ಷೆಯಲ್ಲಿ ತಾಲೂಕು,ಜಿಲ್ಲಾ,ರಾಜ್ಯ ಮಟ್ಟದಲ್ಲಿ ಮಕ್ಕಳು ಪ್ರಶಸ್ತಿಗಳನ್ನು ಪಡೆಯುವುದರ ಮೂಲಕ ಶಾಲೆಗೆ ಬೆಸ್ಟ್ ಸ್ಕೂಲ್ ಅವಾರ್ಡ್ ಸಹ ಲಭಿಸಿದೆ.
ನಿರೂಪಣೆಯನ್ನು ಶ್ರೀ ಮತಿ ಗೀತಾ ಶಿವರಾಜ್ ನಡೆಸಿಕೊಟ್ಟರು.ಗಣ್ಯರಿಂದ ಪ್ರಾಸ್ತಾವಿಕ ಭಾಷಣದ ನಂತರ ದಿವ್ಯ ಸಾನ್ನಿಧ್ಯ ವಹಿಸಿದ ಷಟ್ ಸ್ಥಲ ಬ್ರಹ್ಮ 108 ಕರಿಬಸವೇಶ್ವರ ಮಹಾಸ್ವಾಮಿಜಿ ಮದ್ದಾನಿ ಮಠ ಕುಷ್ಟಗಿ ಅವರಿಂದ ಆಶೀರ್ವಚನವನ್ನು ನೀಡಿದರು.ಶರಣಪ್ಪ ತೆಮ್ಮಿನಾಳ ಅವರು ಮಕ್ಕಳಿಗೆ ಹಾಗೂ ಪೋಷಕರಿಗೆ ಮೊಬೈಲ್ ಉಪಯೋಗದ ಕುರಿತು ಕಿವಿಮಾತನ್ನು ಹೇಳಿದರು.ಗಣ್ಯರಿಗೆ ಹಾಗೂ ಅತಿಥಿಗಳಿಗೆ ವಂದನಾರ್ಪಣೆಯ ನಂತರ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.
ಶಾಲೆಯ ಕಾರ್ಯದರ್ಶಿ ಶ್ರೀಮತಿ ವಿಜಯಲಕ್ಷ್ಮಿ ಎಸ್ ದಿಂಡೂರ,ಮುಖ್ಯ ಶಿಕ್ಷಕರಾದ ಗೀತಾ ಶಿವರಾಜ್,ಶಾಲೆಯ ಶಿಕ್ಷಕಿಯರು,ಶಾಲೆಯ ಮುಖ್ಯ ಕಾರ್ಯ ನಿರ್ವಾಹಕರಾದ ಶಿವರಾಜ್,ಮುದ್ದು ಮಕ್ಕಳು ಹಾಗೂ ಪೋಷಕರು ಎಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ-ಸುವರ್ಣ ಸಂಗಮೇಶ ಭಾವಿಮನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ