ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮಕ್ಕೆ 12/02/2024/ಸೋಮವಾರ ಸಂಜೆ ಐದು ಗಂಟೆಗೆ ಆಗಮಿಸಿದ ಸಂವಿಧಾನ ಜಾಗ್ರತಿ ಜಾಥಾಗೆ ಶಾಲಾ ಮಕ್ಕಳು,ಶಿಕ್ಷಕರು,ಸರಕಾರಿ ನೌಕರರು ಸಾರ್ವಜನಿಕರು,ತಾಲೂಕಿನ ಪ್ರಮುಖ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು.
ಅದರಲ್ಲೂ ಮಕ್ಕಳಂತೂ ಕುಂಭಗಳನ್ನು ಹೊತ್ತು ಹಳ್ಳಿ ಸೊಗಡಿನ ಉಡುಪು ತೊಟ್ಟು ಗುಬ್ಬೆವಾಡ ಕ್ರಾಸ್ ದಿಂದ ಗುಬ್ಬೆವಾಡ ಬಸ್ ಸ್ಟ್ಯಾಂಡ್ ವರೆಗೂ ಮೆರವಣೆಗೆ ಮುಖಾಂತರ ಜಾಥಾ ಮೆರವಣಿಗೆಗೆ ಮೆರುಗು ತಂದರು.
ಬಸ್ ಸ್ಟ್ಯಾಂಡ್ ಹತ್ತಿರ ಸಾವಿರಾರು ಜನರ ನಡುವೆ ಸಂವಿಧಾನ ಜಾಥಾ ಕುರಿತು ಬಹಿರಂಗ ಸಭೆ ನಡೆಯಿತು ಇದೇ ಸಂದರ್ಭದಲ್ಲಿ ಗುಬ್ಬೆವಾಡ ಗ್ರಾಮ ಪಂಚಾಯತ ನಲ್ಲಿ ಬರುವ ಎಲ್ಲಾ ಶಾಲೆಗಳ ಮಕ್ಕಳ ಪ್ರತಿಭೆ ಗುರುತಿಸಿ ಕಾಣಿಕೆ ರೂಪದಲ್ಲಿ ಸಂವಿಧಾನ ಪೀಠಿಕೆ ವಿತರಿಸಲಾಯಿತು.ಈ ಜಾಥಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನೋಡಲ್ ಅಧಿಕಾರಿಗಳಾದ
ಎಚ್.ವೈ.ಸಿಂಗೆ,ಡಿ.ಎಸ್.ಎಸ್.ಜಿಲ್ಲಾ ಸಂಚಾಲಕರು ವೈ.ಸಿ.ಮಯೂರ್,ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎ.ಟಿ.ಅಂಗಡಿ,ಪಂಚಾಯತಿ ಅಧ್ಯಕ್ಷೆ ಸೀತಮ್ಮ ಕಟ್ಟಿಮನಿ ಮತ್ತು ಚೇತನಗೌಡ ಬಿರಾದಾರ್,ಸಿದ್ದು ಬುಳ್ಳ,ಸಿದ್ದಲಿಂಗ ಗುಂಡಾಪುರ,ಮಾಳು ನಾಯ್ಕೊಡಿ, ಬಿಳೆನಸಿದ್ದ ಮಳಗೇದ,ಮುತ್ತನಗೌಡ ಪಾಟೀಲ್, ರಮೇಶ ಗುಬ್ಬೆವಾಡ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪೊಲೀಸ್ ಸಿಬ್ಬಂದಿ,ನೌಕರರ ಸಂಘದ ಸದಸ್ಯರು ಗುಬ್ಬೆವಾಡ ಗ್ರಾಮದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.
ವರದಿ:ಮಲ್ಕಣ್ಣ ಮಳಗೇದ (ಗುಬ್ಬೇವಾಡ)